ಉಡುಪಿ: ಜಿಲ್ಲೆಯ ಕುಂದಾಪುರ ತಾಲೂಕಿನ ಡ್ರೀಮ್ ಫೈನಾನ್ಸ್ ಮಾಲೀಕ ಅಜೆಂದ್ರ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಲುದಾರ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಾಳಾವರದಲ್ಲಿ ನಡೆದ ಭೀಕರ ಕೊಲೆ ಪ್ರಕರಣವನ್ನು ಕುಂದಾಪುರ ಪೊಲೀಸರು 24 ಗಂಟೆಯೊಳಗೆ ಬೇಧಿಸಿದ್ದಾರೆ. ಆರೋಪಿ ಅನೂಪ್ ಶೆಟ್ಟಿಯನ್ನು ಗೋವಾದಲ್ಲಿ ಸೆರೆಹಿಡಿದು ಉಡುಪಿಗೆ ಕರೆತರುತ್ತಿದ್ದಾರೆ. ಪಾಲುದಾರನೇ ಕೊಲೆಗಾರ ಎಂಬ ಸಂಶಯದಿಂದ ಅನುಪ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕುಂದಾಪುರ ಅಜೇಂದ್ರ ಶೆಟ್ಟಿ ಮರ್ಡರ್ – ಪಾಲುದಾರ ಅನೂಪ್ ನಾಟ್ ರೀಚೆಬಲ್
Advertisement
ಶುಕ್ರವಾರ ರಾತ್ರಿ, ಕಾಳಾವರದ ಡ್ರೀಮ್ ಫೈನಾನ್ಸ್ ನ ಮಾಲಕ ಅಜೆಂದ್ರ ಶೆಟ್ಟಿಯನ್ನು, ಡ್ರಾಗರ್ ನಿಂದ ಇರಿದು ಕೊಲೆಗೈಯಲಾಗಿತ್ತು. ಕತ್ತುಸೀಳಿ ಕೊಂದು ಪರಾರಿಯಾದ ಕೊಲೆಗಾರ ಬೇರೆ ಯಾರು ಅಲ್ಲ, ಅಜೇಂದ್ರ ಶೆಟ್ಟಿಯ ಫೈನಾನ್ಸ್ ಪಾರ್ಟ್ನರ್ ಅನೂಪ್ ಶೆಟ್ಟಿ ಅನ್ನೋದು ಎಲ್ಲರಿಗೂ ಗೊತ್ತಾಗಿತ್ತು. ಮೃತನ ಮನೆಯವರು ಈ ಬಗ್ಗೆ ನೇರ ಆರೋಪವನ್ನು ಕೂಡ ಮಾಡಿದ್ದರು. ಕೊಲೆಗೈದ ಅನೂಪ್ ಶೆಟ್ಟಿ ಅಜೇಂದ್ರ ಶೆಟ್ಟಿಯ ಕಾರನ್ನು ಬಳಸಿ ಪರಾರಿಯಾಗಲು ಯತ್ನಿಸಿದ್ದ. ಉತ್ತರ ಕನ್ನಡ ಜಿಲ್ಲೆಯ ಮೂಲಕ ಗೋವಾಕ್ಕೆ ತೆರಳಿ ತಲೆಮರೆಸಿಕೊಳ್ಳುವ ಪ್ಲಾನ್ ಮಾಡಿದ್ದ. ಕುಂದಾಪುರ ಪೊಲೀಸರು ಕೊಲೆ ನಡೆದು 24 ಗಂಟೆಯೊಳಗೆ ಅನೂಪ್ ಶೆಟ್ಟಿ ಯನ್ನು ವಶಕ್ಕೆ ಪಡೆದಿದ್ದಾರೆ.
Advertisement
Advertisement
ಸತ್ತವನ ಕಾರಿನಲ್ಲೇ ಆರೋಪಿ ಎಸ್ಕೇಪ್..!
ಡ್ರೀಮ್ ಫೈನಾನ್ಸ್ ವ್ಯವಹಾರದಲ್ಲಿ ಪಾಲುದಾರ ಅನೂಪ್ ಶೆಟ್ಟಿ ಈ ಕೃತ್ಯ ಎಸಗೋದಕ್ಕೆ ಐಶಾರಾಮಿ ಕಾರು ಕಾರಣ ಎನ್ನಲಾಗಿದೆ. ಸಮಯ ಕಳೆಯುತ್ತಿದ್ದಂತೆ ಇಬ್ಬರ ನಡುವೆ ವ್ಯವಹಾರದಲ್ಲಿ ಭಿನ್ನಮತ ಬಂತು. ಬಡ್ಡಿ ವ್ಯವಹಾರದ ಲಾಭಾಂಶದ ಹಣವನ್ನು ಅನೂಪ್ ಶೆಟ್ಟಿಗೆ ಅಜೇಂದ್ರ ಶೆಟ್ಟಿ ಕೊಟ್ಟಿರಲಿಲ್ಲ. ಈ ವಿಚಾರದಲ್ಲಿ ತಗಾದೆ ಉಂಟಾಗಿತ್ತು. ಇಬ್ಬರ ನಡುವಿನ ಪಟ್ರ್ನರ್‍ಶಿಪ್ ಡೀಲ್ ಮೂರು ತಿಂಗಳ ಹಿಂದೆ ರದ್ದಾಗಿತ್ತು. ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೂ, ಅಜೇಂದ್ರ ಶೆಟ್ಟಿ ಮೂರು ತಿಂಗಳ ಅವಧಿಯಲ್ಲಿ ಎರಡು ಐಶಾರಾಮಿ ಕಾರು ಖರೀದಿಸಿದ್ದರು. ಹೊಸದಾಗಿ ಖರೀದಿಸಿದ ಈ ಕಾರು ಅನೂಪ್ ಶೆಟ್ಟಿಯ ಕಣ್ಣು ಕುಕ್ಕುತ್ತಿತ್ತು. ಕೊಲೆಯಾದ ದಿನ ಇಪ್ಪತ್ತು ಸಾವಿರ ಕೇಳಿದ್ದ ಅನೂಪ್, ಹಣ ಕೊಡದಿದ್ದರೆ ಕೊಲ್ಲೋದಕ್ಕೆ ಎಲ್ಲಾ ತಯಾರಿ ಮಾಡಿಕೊಂಡೇ ಬಂದಿದ್ದ. ಅಜೇಂದ್ರ ಶೆಟ್ಟಿ ಹಣ ಕೊಡಲು ನಿರಾಕರಿಸಿದಾಗ, ಡ್ರಾಗರ್ ನಿಂದ ಕತ್ತುಸೀಳಿ ಕೊಂದು ಅದೇ ಐಶಾರಾಮಿ ಕಾರಿನಲ್ಲಿ ಪರಾರಿಯಾಗಿದ್ದ.
ಅನೂಪ್ ಶೆಟ್ಟಿ ಕುಡಿದ ಅಮಲಿನಲ್ಲಿ, ಗಾಂಜಾ ಸೇವಿಸಿ ಗೆಳೆಯನನ್ನು ಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಘಟನೆ ಹಿಂದೆ ಇತರೆ ಆರೋಪಿಗಳ ಕೈವಾಡ ಇದೆಯೇ ಎಂಬ ದೃಷ್ಟಿಯಲ್ಲೂ ಪೊಲೀಸರು ತನಿಖೆ ಮಾಡುತ್ತಿದ್ದಾರೆ.