ಹಾವೇರಿ: ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ಸಚಿವ ಸ್ಥಾನ ನೀಡುವುದು ಅದು ಪ್ರಧಾನ ಮಂತ್ರಿಗಳ ಪವರ್. ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಬಿಜೆಪಿ ಸಂಸದ ಶಿವಕುಮಾರ್ ಉದಾಸಿ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಯಾರಿಗೆ ಕೊಟ್ಟರೂ ನನಗೆ ಕೊಟ್ಟಷ್ಟೇ ಸಂತೋಷ ಆಗುತ್ತದೆ ಎಂದು ಹೇಳುವ ಮೂಲಕ ಶಿವಕುಮಾರ ಉದಾಸಿ ಕೈ ಮುಗಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಬಿ.ವೈ ವಿಜಯೇಂದ್ರ ಹೆಸರು ಕೇಳಿಬಂದಿರೋ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಮಾಹಿತಿ ಇಲ್ಲ ಎಂದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲು ಸಹಮತವಿದೆ: ಆರ್.ಅಶೋಕ್
Advertisement
Advertisement
ನಮ್ಮ ಅಪ್ಪ ತೀರಿಕೊಂಡು ಇಪ್ಪತ್ತು ದಿವಸ ಆಗೈತಿ. ಹೀಗಾಗಿ ನಾನು ಉಪಚುನಾವಣೆ ಬಗ್ಗೆ ಆಲೋಚನೆ ಮಾಡಿಲ್ಲ. ನನ್ನ ಪಾಡಿಗೆ ನಾನು ಎಂಪಿ ಕೆಲಸ ಮಾಡ್ತಿದ್ದೇನೆ. ಸದ್ಯ ನಾನು ಎಂಪಿ ಕೆಲಸ ಮಾಡುತ್ತಿದ್ದೇನೆ ಎಂದು ಶಿವಕುಮಾರ್ ಉದಾಸಿ ಹೇಳಿದ್ದಾರೆ.
Advertisement