ಚಿಕ್ಕಮಗಳೂರು: ಕಂದಾಯ ಸಚಿವ ಆರ್ ಅಶೋಕ್ ಅವರ ಹುಟ್ಟುಹಬ್ಬ ಬುಧವಾರವಿದ್ದು, ಈ ಹಿನ್ನೆಲೆಯಲ್ಲಿ ಸಚಿವರೇ ರಾತ್ರಿ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಆಯೋಜನೆ ಮಾಡಿದ್ದಾರೆ.
ಹೌದು. ಚಿಕ್ಕಮಗಳೂರಿನ ಕೈಮರ ಸಮೀಪ ಇರುವ ಖಾಸಗಿ ಹೋಟೆಲಿನಲ್ಲಿ ಬರ್ತ್ ಡೇ ಪಾರ್ಟಿ ಆಯೋಜಿಸಿದ್ದಾರೆ. ನೈಟ್ ಪಾರ್ಟಿಯಿಂದ ಸೋಂಕು ಹೆಚ್ಚುತ್ತೆ ಅಂದವರೇ ಪಾರ್ಟಿ ಮಾಡಿರುವುದು ಇದೀಗ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
Advertisement
Advertisement
ಆರ್.ಅಶೋಕ್ ಹುಟ್ಟುಹಬ್ಬದ ನೆಪದಲ್ಲಿ ಸಚಿವರ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಪಾರ್ಟಿಯಲ್ಲಿ ಶೆಟ್ಟರ್, ಸಿ.ಟಿ.ರವಿ, ಸತೀಶ್ ರೆಡ್ಡಿ ಸೇರಿ ಹಲವರು ಭಾಗಿಯಾಗಿದ್ದರು ಎನ್ನಲಾಗುತ್ತಿದೆ.
Advertisement
ಒಟ್ಟಿನಲ್ಲಿ ನೈಟ್ ಕರ್ಫ್ಯೂ ಇದ್ದರೂ ಡಿನ್ನರ್ಗೆ ಒಂದೆಡೆ ಸೇರಬೇಕಾ..?, ಜನಸಾಮಾನ್ಯರಿಗೊಂದು ನ್ಯಾಯ..? ರಾಜಕಾರಣಿಗಳಿಗೊಂದು ನ್ಯಾಯನಾ..?, ರೂಲ್ಸ್ ಮಾಡುವವರಿಂದಲೇ ರೂಲ್ಸ್ ಬ್ರೇಕ್ ಹಾಕಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ.
Advertisement
ಹುಟ್ಟುಹಬ್ಬದ ಸಲುವಾಗಿ ನಿನ್ನೆಯ ದಿನ ಶುಭಾಶಯ ಕೋರಿದ ಪ್ರತಿಯೊಬ್ಬರಿಗೂ ಅನಂತಾನಂತ ಧನ್ಯವಾದಗಳು.
ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಗಳು ನನ್ನ ಆತ್ಮವಿಶ್ವಾಸ ಹೆಚ್ಚಿಸಿ ಇನ್ನಷ್ಟು ಹೆಚ್ಚು ಶ್ರಮವಹಿಸಿ ಕಾರ್ಯಸಾಧಿಸಲು ಶಕ್ತಿ ತುಂಬಿದೆ.
ತಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ಸದಾಕಾಲ ಚಿರ ಋಣಿಯಾಗಿರುತ್ತೇನೆ. ????????
— R. Ashoka (ಆರ್. ಅಶೋಕ) (@RAshokaBJP) July 2, 2020