ನವದೆಹಲಿ: ಶುಕ್ರವಾರದಿಂದ ಸಂಸತ್ ಬಜೆಟ್ ಅಧಿವೇಶನ ಆರಂಭವಾಗಲಿದೆ. ಆದರೆ ಸಂಸತ್ ಕ್ಯಾಂಟೀನ್ ನಲ್ಲಿ ಪೈಸೆ, ರೂಪಾಯಿ ಲೆಕ್ಕದಲ್ಲಿ ಸಂಸದರು ಭೂರಿ ಭೋಜನ ಮಾಡಲು ಆಗುವುದಿಲ್ಲ. ಏಕೆಂದರೆ ದಶಕಗಳ ಕಾಲ ಸಂಸತ್ತಿನ ಪಾರ್ಲಿಮೆಂಟ್ ನಲ್ಲಿ ಸಂಸದರಿಗೆ ನೀಡ್ತಾ ಬರ್ತಿದ್ದ ರಿಯಾಯ್ತಿಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.
Advertisement
ನಾಳೆಯಿಂದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಲೋಕಸಭೆಯ ಕಾರ್ಯದರ್ಶಿಗಳ, ಆಹಾರ ಪದಾರ್ಥಗಳ ದರಪಟ್ಟಿ ಪ್ರಕಟಿಸಿದೆ. ಹೊಸ ದರ ಪಟ್ಟಿಯಲ್ಲಿ ದರ ಹೆಚ್ಚಳ ಸ್ಪಷ್ಟವಾಗಿ ಕಂಡು ಬರುತ್ತದೆ. ಸಂಸತ್ ಕ್ಯಾಂಟೀನ್‍ನಲ್ಲಿ ಅತ್ಯಂತ ಅಗ್ಗದಲ್ಲಿ ಸಿಗೋ ಆಹಾರ ಅಂದ್ರೆ ಅದು ಚಪಾತಿ. ಇದರ ಬೆಲೆ ಮೂರು ರೂಪಾಯಿ. ಹಾಗೆಯೇ ದುಬಾರಿ ದರ ಅಂದ್ರೆ ಅದು ನಾನ್‍ವೆಜ್ ಊಟ. ಅದರ ದರ 700 ರೂಪಾಯಿ. ಸಂಸದರಿಗೆ ರಿಯಾಯ್ತಿ ಕಡಿತ ಮಾಡಿರುವ ಕಾರಣ ಸರ್ಕಾರಕ್ಕೆ ಪ್ರತಿವರ್ಷ 8 ಕೋಟಿ ಉಳಿತಾಯ ಆಗಲಿದೆ.
Advertisement
Advertisement
ಸಂಸತ್ ಕ್ಯಾಂಟೀನ್, ಹೊಸ ದರಪಟ್ಟಿ
* ಒಂದು ಚಪಾತಿ – 3 ರೂ.
* ನಾನ್ ವೆಜ್ ಊಟ (ಬಫೆ ಸ್ಟೈಲ್) – 700 ರೂ.
* ವೆಜ್ ಊಟ (ಬಫೆ ಸ್ಟೈಲ್) – 500 ರೂ.
* ಸಸ್ಯಹಾರಿ ಥಾಲಿ – 100 ರೂ.
* ಚಿಕನ್ ಬಿರಿಯಾನಿ – 100 ರೂ.
* ಮಸಾಲೆ ದೋಸೆ – 50 ರೂ.
* 2 ಇಡ್ಲಿ, ಚಟ್ನಿ, ಸಾಂಬರ್ – 25 ರೂ.
* ಚಿತ್ರನ್ನ – 30 ರೂ.
Advertisement