ನವದೆಹಲಿ: ಪ್ರಧಾನಿಗಳು ರಾಮಮಂದಿರದ ಭೂಮಿ ಪೂಜೆಗೆ ಹೋಗುವುದು ಕೋಮವಾದ ಅಂದ್ರೆ ಸಂಸತ್‍ಗೆ ನಮಾಜ್ ಟೋಪಿ ಧರಿಸಿ ಹೋಗೋದು ಕೋಮುವಾದ ಅಲ್ವಾ ಎಂದು ಸಂಸದ ಎಐಎಂಐ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರನ್ನ ಬಾಲಿವುಡ್ ನಟಿ ಕೊಯ್ನಾ ಮಿತ್ರಾ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವ ಕೊಯ್ನಾ ಮಿತ್ರಾ, ಸಂಸದರಾಗಿ ನಮಾಜ್ ಟೋಪಿ ಧರಿಸಿ ಸಂಸತ್ ಪ್ರವೇಶ ಮಾಡುವುದು ಕೋಮುವಾದ ಆಗುತ್ತೆ ಅಲ್ವಾ?. 40 ಸಾವಿರ ದೇವಸ್ಥಾನಗಳನ್ನು ದೋಚಿದರು. ಜೊತೆಗೆ ದೇವಾಲಯಗಳನ್ನು ಧ್ವಂಸಗೊಳಿಸಿದರು. ಮುಂದಿನ ಪೀಳಿಗೆಗೆ ಈ ವಿಷಯಗಳು ತಿಳಿಯಬೇಕಿದೆ. ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳು ಇಫ್ತಾರ ಕೂಟದಲ್ಲಿ ಭಾಗಿಯಾದ್ರೆ ಕಮ್ಯೂನಲ್ ಆಗಲ್ಲ. ಆದ್ರೆ ಭೂಮಿ ಪೂಜೆಗೆ ಭಾಗಿಯಾದ್ರೆ ಆಗುತ್ತಾ? ಎಂದು ಕೇಳಿದ್ದಾರೆ. ಇದನ್ನೂ ಓದಿ: 800 ಕಿ.ಮೀ ನಡ್ಕೊಂಡೇ ಅಯೋಧ್ಯೆ ಭೂಮಿ ಪೂಜೆಗೆ ಹೊರಟ ಫಯಾಜ್ ಖಾನ್!
Wearing skull caps in parliament isnt communal but attending Bhumi Pujan is. 40,000 temples were robbed, looted, destroyed by criminals and generation next will know about it. Pm/Cm's attending iftar party isn't communal but Bhumi Pujan is. If Hypocrisy & Misery had a name… https://t.co/nQ7QIoktv0
— Koena Mitra (@koenamitra) July 28, 2020
ಓವೈಸಿ ಹೇಳಿದ್ದೇನು?: ಕರ್ತವ್ಯದಲ್ಲಿದ್ದಾಗ ಪ್ರಧಾನಮಂತ್ರಿಗಳು ಭೂಮಿ ಪೂಜೆಗೆ ಹಾಜರಾದರೆ ಅದು ಸಾಂವಿಧಾನಿಕ ಪ್ರಮಾಣವಚನದ ಉಲ್ಲಂಘನೆಯಾದಂತೆ. ಜಾತ್ಯತೀತತೆಯು ಸಂವಿಧಾನದ ಮೂಲ ರಚನೆಯ ಒಂದು ಭಾಗವಾಗಿದೆ” ಎಂದು ಟ್ವೀಟ್ ಮಾಡಿದ್ದರು.
1992ರಲ್ಲಿ ಕ್ರಿಮಿನಲ್ ಜನಸಮೂಹದಿಂದ ನೆಲಸಮಗೊಳ್ಳುವ ಮೊದಲು 400 ವರ್ಷಗಳ ಕಾಲ ಬಾಬರಿ ಮಸೀದಿ ಅಯೋಧ್ಯೆಯಲ್ಲಿತ್ತು ಎನ್ನುವುದನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ಓವೈಸಿ ಹೇಳಿದ್ದರು.