ಬೆಂಗಳೂರು: ಸಿಡಿ ಪ್ರಕರಣ ಇಂದು ಮತ್ತೊಂದು ತಿರುವು ಪಡೆದುಕೊಂಡಿದೆ. ಇಂದು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಸಂತ್ರಸ್ತೆ, ಎಸ್ಐಟಿ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಸಂತ್ರಸ್ತೆ ಪ್ರಶ್ನೆಗಳನ್ನ ಕೇಳಿದ್ದಾರೆ.
ಪ್ರಶ್ನೆ 1– ನಾನು ಸಂತ್ರಸ್ತೆಯೋ..? ಪ್ರಕರಣದ ಆರೋಪಿಯೋ..? (ತನಿಖಾ ಪ್ರಕ್ರಿಯೆ ನೋಡಿ ಸಂತ್ರಸ್ತೆಗೆ ಬಂದಿರುವ ಅನುಮಾನ)
ಪ್ರಶ್ನೆ 2– ಇದುವರೆಗೂ ರಮೇಶ್ ಜಾರಕಿಹೊಳಿಯನ್ನು ಏಕೆ ಬಂಧಿಸಿಲ್ಲ?
ಪ್ರಶ್ನೆ 3– ಆರೋಪಿಯನ್ನು ಹೊರಗೆ ಓಡಾಡಲು ಮುಕ್ತವಾಗಿ ಬಿಟ್ಟಿರುವುದು ಎಷ್ಟು ಸರಿ?
ಪ್ರಶ್ನೆ 4– ಸಂತ್ರಸ್ತೆಯಾದ ನನ್ನನ್ನು ಸತತ 5 ದಿನ ವಿರಾಮ ನೀಡದೇ ವಿಚಾರಣೆ ನಡೆಸಿರುವುದು ಸರೀನಾ?
ಪ್ರಶ್ನೆ 5– ಜಾರಕಿಹೊಳಿ ದೂರಿನಲ್ಲಿ ನನ್ನ ಹೆಸರಿಲ್ಲ.. ಆದರೂ ಪಿಜಿ ಮೇಲೆ ರೇಡ್.. ಸರೀನಾ?
Advertisement
Advertisement
ಪ್ರಶ್ನೆ 5– ಪಿಜಿಯಲ್ಲಿನ ಸಾಕ್ಷ್ಯ ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಯತ್ನ, ಸರಿನಾ..?
ಪ್ರಶ್ನೆ 6– ಜಾರಕಿಹೊಳಿ ಮತ್ತು ರಾಜ್ಯ ಸರ್ಕಾರದ ಒತ್ತಡಕ್ಕೆ ಎಸ್ಐಟಿ ಮಣಿದಿದೆ.. ಇದೆಷ್ಟು ಸರಿ..?
ಪ್ರಶ್ನೆ 7- ಸಂತ್ರಸ್ತೆಯಾದ ನನ್ನ ಚಾರಿತ್ರ್ಯವಧೆಗೆ ಷಡ್ಯಂತ್ರ್ಯ, ಕಲ್ಪಿತ ಸುದ್ದಿ ಸೃಷ್ಟಿ.. ಎಷ್ಟು ಸರಿ..?
ಪ್ರಶ್ನೆ 8– ನನ್ನ ಸಹಮತ ಇಲ್ಲದೇ ಗೃಹ ಇಲಾಖೆ ಎಸ್ಪಿಪಿ ನೇಮಕ ಮಾಡಿರುವುದು ಎಷ್ಟು ಸರಿ?
ಪ್ರಶ್ನೆ 9– ರಮೇಶ್ ಜಾರಕಿಹೊಳಿ ಆರೋಪ ಮುಕ್ತರಾಗಿ ಬರುತ್ತಾರೆ ಎಂಬ ಸಿಎಂ ಮಾತು ಎಷ್ಟು ಸರಿ?
ಪ್ರಶ್ನೆ 10– ಎಸ್ಐಟಿ ನ್ಯಾಯ ಸಮ್ಮತ, ನಿಸ್ಪಕ್ಷಪಾತ ತನಿಖೆ ನಡೆಸುತ್ತಿಲ್ಲ.. ಏಕೆ..?
Advertisement
Advertisement
ಸಂತ್ರಸ್ತೆಯ ಪರ ವಕೀಲ ಜಗದೀಶ್ ಸಹ ಎಸ್ಐಟಿ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ಸಂತ್ರಸ್ತೆಯ ಹೆಸರು ಉಲ್ಲೇಖ ಆಗಿರಲಿಲ್ಲ. ಆದರೂ ಸಂತ್ರಸ್ತೆಯಿದ್ದ ಪಿಜಿ ಮೇಲೆ ಎಸ್ಐಟಿ ರೇಡ್ ಮಾಡಿದ್ದೇಗೆ? ಯಾವ ಸಾಕ್ಷ್ಯದೊಂದಿಗೆ, ಯಾರ ಅನುಮತಿ ಪಡೆದು ರೇಡ್ ಮಾಡಿತು. ಪಿಜಿಯನ್ನು ಸೀಜ್ ಮಾಡಿ, ಕೋರ್ಟ್ ಸಮ್ಮತಿ ಪಡೆದು ರೇಡ್ ಏಕೆ ಮಾಡಲಿಲ್ಲ. ಪಿಜಿಯಲ್ಲಿ ಲಕ್ಷ ಲಕ್ಷ ಹಣ ಸಿಕ್ತು ಅಂತಾರೆ. ಸಂತ್ರಸ್ತೆಯನ್ನು ಪ್ರಕರಣದಲ್ಲಿ ಸಿಲುಕಿಸಲು ಇವರೇ ಏಕೆ ಆ ಹಣ ಇಟ್ಟಿರಬಾರದು ಎಂದು ಜಗದೀಶ್ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಎಸ್ಐಟಿ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಗ್ ಲೀಗಲ್ ಬ್ಯಾಟಲ್: ನಾಳೆಯಿಂದ ಬಿಗ್ ಲೀಗಲ್ ಬ್ಯಾಟಲ್ ನಡೆಸಲಾಗುವುದು ಎಂಬ ಹೊಸ ಬಾಂಬ್ ಸಿಡಿಸಿದ್ದಾರೆ. ಸಂತ್ರಸ್ತೆಯ ಪತ್ರದ ಕುರಿತು ಪ್ರತಿಕ್ರಿಯೆ ನೀಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯುವತಿಗೆ ಎಸ್ಐಟಿಗೆ ನಂಬಿಕೆ ಇಲ್ಲ ಅಂದ್ರೇ ಬೇರೆ ತನಿಖೆ ನಡೆಸಿ. ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ಎಂದು ನಾನು ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಸಿಜೆ ತನಿಖೆಯಿಂದ ಸರ್ಕಾರಕ್ಕೆ ಏನು ಕಷ್ಟ ಎಂದು ಪ್ರಶ್ನೆ ಮಾಡಿದ್ರು. ಇದಕ್ಕೆ ಸಚಿವ ಬಿಸಿ ಪಾಟೀಲ್ ತಿರುಗೇಟು ನೀಡಿದ್ದಾರೆ. ಮೇಟಿ ಕೇಸಲ್ಲಿ ಸಿದ್ದರಾಮಯ್ಯ ಹೇಗೆ ನಡೆದುಕೊಂಡಿದ್ರು ಎನ್ನುವುದು ಗೊತ್ತಿದೆ. ತನಿಖೆಯಲ್ಲಿ ಜಾರಕಿಹೊಳಿ ಮೇಲಿನ ಆರೋಪ ಸಾಬೀತಾದ್ರೆ ಪೊಲೀಸ್ರು ಖಂಡಿತ ಅರೆಸ್ಟ್ ಮಾಡ್ತಾರೆ ಎಂದು ಹೇಳಿದ್ದಾರೆ.
ಮುಖಾಮುಖಿ ಆಗ್ತಾರಾ?:
ಮಾಜಿ ಸಚಿವ, ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ. ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬನ್ನಿ ಎಂದು ರಮೇಶ್ ಜಾರಕಿಹೊಳಿಗೆ ಎಸ್ಐಟಿ ನಿನ್ನೆಯೇ ನೋಟಿಸ್ ಜಾರಿ ಮಾಡಿದೆ. ಇದೇ ವೇಳೆ ಸಿಡಿ ಸಂತ್ರಸ್ತೆಗೂ ಮತ್ತೆ ನೋಟಿಸ್ ಜಾರಿ ಮಾಡಿರುವ ಎಸ್ಐಟಿ, ಸೋಮವಾರ ಬೆಳಗ್ಗೆ 10 ಗಂಟೆಗೆ ಆಡುಗೋಡಿಯ ಟೆಕ್ನಿಕಲ್ ಸೆಲ್ಗೆ ಬರುವಂತೆ ಸೂಚಿಸಿದೆ. ಒಂದೇ ದಿನ ಆರೋಪಿ ಮತ್ತು ಸಂತ್ರಸ್ತೆಗೆಯನ್ನು ವಿಚಾರಣೆಗೆ ಕರೆದಿರೋದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಅಸಲಿಗೆ ರಮೇಶ್ ಜಾರಕಿಹೊಳಿ ವಿಚಾರಣೆಗೆ ಬರ್ತಾರಾ? ಅಥ್ವಾ ಮತ್ತೆ ಅನಾರೋಗ್ಯದ ನೆಪ ಹೇಳಿ ವಿಚಾರಣೆಯಿಂದ ತಪ್ಪಿಸಿಕೊಳ್ತಾರಾ. ಅಥ್ವಾ ವಿಚಾರಣೆಗೆ ಬಂದ್ರೆ ಸಂತ್ರಸ್ತೆಯ ಮುಂದೆ ಮುಖಾಮುಖಿ ಕೂರಿಸಿ ಎಸ್ಐಟಿ ವಿಚಾರಣೆಗೆ ಒಳಪಡಿಸುತ್ತಾ? ಅಥ್ವಾ ಪ್ರತ್ಯೇಕ ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಾ? ರೇಪ್ ಆರೋಪಿ ರಮೇಶ್ ಜಾರಕಿಹೊಳಿ ಅರೆಸ್ಟ್ ಆಗ್ತಾರಾ ಎಂಬ ಕುತೂಹಲ ಎಲ್ಲರಲ್ಲಿದೆ.