ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಕೊಡಗು ಜಿಲ್ಲೆಯಲ್ಲಿ ಸಂತೆಗಳನ್ನು ನಡೆಸದಂತೆ ನಿರ್ಬಂಧ ಹೇರಲಾಗಿದೆ. ಆದರೂ ನಿಯಮ ಉಲ್ಲಂಘಿಸಿ ಸೋಮವಾರಪೇಟೆಯಲ್ಲಿ ಇಂದು ವ್ಯಾಪಾರಿಗಳು ಸಂತೆಯಲ್ಲಿ ಅಂಗಡಿ ಹಾಕಿದ್ದರು. ವಿಷಯ ತಿಳಿದ ಪೊಲೀಸರು ಅಂಗಡಿಗಳನ್ನು ತೆರವು ಮಾಡುವಂತೆ ಖಡಕ್ಕಾಗಿ ಹೇಳಿದರೂ, ಕ್ಯಾರೆ ಎನ್ನಲಿಲ್ಲ. ಆಗ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಎಷ್ಟೇ ಎಚ್ಚರಿಕೆ ನೀಡಿದರೂ ಕೇಳದ ಹಿನ್ನೆಲೆ ಪೊಲೀಸರಿಗೆ ಬೇರೆ ದಾರಿಯಿಲ್ಲದೆ ಲಾಠಿ ರುಚಿ ತೋರಿಸಿದರು. ಎಷ್ಟೇ ಹೇಳಿದರೂ ವ್ಯಾಪಾರಸ್ಥರು ವ್ಯಾಪಾರ ಮಾಡುತ್ತಲೇ ಇದ್ದರು. ಇದರಿಂದ ಬೇಸತ್ತ ಪೊಲೀಸರು ಲಾಠಿ ಏಟು ನೀಡಿದ್ದಾರೆ. ಆಗ ವ್ಯಾಪಾರಸ್ಥರು ಅಂಗಡಿಗಳನ್ನು ತೆರವು ಮಾಡಲು ಮುಂದಾಗಿದ್ದಾರೆ. ಅಷ್ಟೊತ್ತಿಗೆ ಸ್ಥಳಕ್ಕೆ ಬಂದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಟ್ಯ್ರಾಕ್ಟರ್ ಮೂಲಕ ಹಣ್ಣು ತರಕಾರಿಗಳನ್ನು ತುಂಬಿಕೊಂಡು ಹೋಗಲು ಮುಂದಾದರು. ಇದರಿಂದ ಎಚ್ಚೆತ್ತ ವ್ಯಾಪಾರಿಗಳು, ಅಂಗಡಿಗಳ ಗಂಟು ಮೂಟೆ ಕಟ್ಟಿಕೊಂಡು ಜಾಗ ಖಾಲಿ ಮಾಡಿದ್ದಾರೆ.
Advertisement
Advertisement
ಸಂತೆ ನಡೆಸದಂತೆ ನಿಷೇಧಿಸಿದ್ದರೂ ಅದನ್ನು ಉಲ್ಲಂಘಿಸಿ ಸಂತೆಗೆ ಬಂದಿದ್ದ ವ್ಯಾಪಾರಿಗಳಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.