– ಎಸ್ಮಾ ಜಾರಿ ಬಗ್ಗೆ ಚರ್ಚೆ
ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಸಂಜೆಯೊಳಗೆ ಕೆಲಸಕ್ಕೆ ಬರುವಂತೆ ತರಬೇತಿ ನೌಕರರಿಗೆ ನೋಟಿಸ್ ಕಳುಹಿಸಲಾಗಿದೆ ಎಂದು ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ.
Advertisement
ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಎಸ್ಮಾ ಜಾರಿಯ ಬಗ್ಗೆ ಚರ್ಚೆ ನಡೆಯುತ್ತಿದೆ. ಇವತ್ತು ನೋಡಿಕೊಂಡು, ನಾಳೆ ಎಸ್ಮಾ ಬಗ್ಗೆ ಚಿಂತನೆ ನಡೆಸುತ್ತೇವೆ. ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಖಾಸಗಿ ಬಸ್ಸುಗಳು ಹೆಚ್ಚು ಓಡಾಡುತ್ತಿವೆ. ಸಾರಿಗೆ ನೌಕರರು ಬೇಗ ಕೆಲಸಕ್ಕೆ ಬನ್ನಿ ಎಂದು ಮನವಿ ಮಾಡಿಕೊಂಡರು.
Advertisement
Advertisement
ತರಬೇತಿ ನೌಕರರಿಗೆ ನೋಟಿಸ್ ಕೊಟ್ಟಿದ್ದೇವೆ. ವೈಯಕ್ತಿಕವಾಗಿಯೂ ನೋಟಿಸ್ ಕೊಟ್ಟಿದ್ದೇವೆ. ಸಂಜೆಯೊಳಗೆ ಕೆಲಸಕ್ಕೆ ಬರುತ್ತಾರೆ ಎಂದು ಶಿಖಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಂಬಳ ಪರಿಷ್ಕರಣೆ ಮಾಡಿದ್ರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ: ಸವದಿ
Advertisement
ಕೋವಿಡ್ ಹಾಗೂ ಮುಷ್ಕರದಿಂದ ಸಾಕಷ್ಟು ಲಾಸ್ ಆಗಿದೆ. ನಮ್ಮ ಮೊದಲ ಆದ್ಯತೆ ಬಿಎಂಟಿಸಿ ಬಸ್ ನೌಕರರು ಕೆಲಸಕ್ಕೆ ಬರೋದು. ಖಾಸಗಿ ಬಸ್ ಹಾಗೂ ಸರ್ಕಾರಿ ಬಸ್ಸುಗಳ ಮಧ್ಯದ ಕ್ಲಾಶ್ ಗಳನ್ನು ಬಗೆಹರಿಸುವುದು ನಮ್ಮ ಎರಡನೇ ಕರ್ತವ್ಯವಾಗಿದೆ ಎಂದು ಅವರು ವಿವರಿಸಿದರು.