ಮುಂಬೈ: ಬಾಲಿವುಡ್ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾಗೆ ಬಲಿಯಾಗಿದ್ದಾರೆ. ಮುಂಬೈನ ಎಸ್ಎಲ್ ರೆಹಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.
ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಶ್ರವಣ್ ಅವರು ಕೊರೆನಾ ಸೋಂಕಿಗೆ ತುತ್ತಾಗಿದ್ದಾರೆ. ಉಸಿರಾಟ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೆಂಟಿಲೇಟರ್ ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೃದಯ ಸಂಬಂಧಿ, ಮುಧುಮೇಹದಿಂದ ಬಳಲುತ್ತಿದ್ದ ಶ್ರವಣ್, ಕೊರೊನಾ ಸೋಂಕು ತಗಲುತ್ತಿದ್ದಂತೆ ಅವರ ಆರೋಗ್ಯ ಸಂಪೂರ್ಣ ಹದೆಗಟ್ಟಿತ್ತು ಎಂದು ಎಸ್ಎಲ್ ರೆಹಜಾ ಆಸ್ಪತ್ರೆಯ ವೈದ್ಯ ಕೀರ್ತಿ ಭೂಷಣ್ ಹೇಳಿದ್ದಾರೆ.
Advertisement
Advertisement
ಶ್ರವಣ್ ಅವರ ಸಂಪರ್ಕದಲ್ಲಿದ್ದ ಪುತ್ರ ಸಂಜೀವ್ ರಾಥೋಡ್ ವರದಿ ಸಹ ಪಾಸಿಟಿವ್ ಬಂದಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶ್ರವಣ್ ಅವರಿಗೆ 66 ವರ್ಷ ಆಗಿತ್ತು ಇಬ್ಬರು ಪುತ್ರರನ್ನ ಅಗಲಿದ್ದಾರೆ.
Advertisement
Advertisement
90ರ ದಶಕದಲ್ಲಿ ನದೀಮ್-ಶ್ರವಣ್ ಜೋಡಿ ಬಾಲಿವುಡ್ಗೆ ಸೂಪರ್ ಹಿಟ್ ಹಾಡುಗಳನ್ನ ನೀಡಿತ್ತು. ಆಶಿಕಿ, ಸಾಜನ್, ದಿಲ್ ಹೈ ಕೀ ಮಾನತಾ ನಹೀಂ, ಸಡಕ್, ಪರದೇಶ್ ಸೇರಿದಂತೆ ಹಲವು ಚಿತ್ರಗಳಿಗೆ ನದೀಮ್ – ಶ್ರವಣ್ ಸಂಗೀತವಿದೆ. 2000ರಲ್ಲಿ ನದೀಮ್ ವಿದೇಶಕ್ಕೆ ತೆರಳಿದ್ದರಿಂದ ಈ ಸಂಗೀತ ಜೋಡಿ ಬೇರೆಯಾಗಿತ್ತು.