ಹಬ್ಬ ಎಂದರೆ ಸಡಗರ, ಸಂಭ್ರಮ ಹೀಗಿರುವಾಗ ವರ್ಷದ ಮೊದಲ ಹಬ್ಬ ಎಂದರೆ ತುಸು ಸಂತೋಷ ಹೆಚ್ಚಾಗಿಯೇ ಇರುತ್ತದೆ. ಹಬ್ಬಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ಪ್ರತಿಯೊಬ್ಬರು ತೊಡಗಿರುತ್ತಾರೆ. ಹಬ್ಬ ಎಂದರೆ ವಿಶೇಷವಾದ ಅಡುಗೆ ಮತ್ತು ರುಚಿ ರುಚಿಯಾದ ತಿನಿಸುಗಳಿದ್ದರೆ ಹಬ್ಬಕ್ಕೆ ಒಂದು ಮೆರಗು ಎಂದರೆ ತಪ್ಪಾಗಲಾರದು. ಈ ಹಬ್ಬದ ವಿಶೇಷ ಅಡುಗೆ ಪೊಂಗಲ್. ಹಾಗಾಗಿ ಖಾರ ಪೊಂಗಲ್ ಮಾಡುವುದು ಹೇಗೆ ಎಂದು ಯೋಚಿಸುವವರೆಗೆ ಇಲ್ಲಿದೆ ಸುಲಭ ವಿಧಾನ.
Advertisement
ಬೇಕಾಗುವ ಸಾಮಗ್ರಿಗಳು:
1. ಹೆಸರುಬೇಳೆ- 1 ಕಪ್
2. ಅಕ್ಕಿ- 1 ಕಪ್
3. ಜೀರಿಗೆ – ಅರ್ಧ ಚಮಚ
4 ಕಾಳುಮೆಣಸು – ಅರ್ಧ ಚಮಚ
5. ಕರಿಬೇವಿನಸೊಪ್ಪು – ಸ್ವಲ್ಪ
6. ಹಸಿಮೆಣಸಿನಕಾಯಿ – 2 ರಿಂದ 3
7 ತುಪ್ಪ – 1 ಚಮಚ
8. ಅರಿಶಿನ- ಒಂದು ಚಿಟಿಕೆ
9. ಉಪ್ಪು – ರುಚಿಗೆ ತಕ್ಕಷ್ಟು
10 ಗೋಡಂಬಿ – 10
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ ಹೆಸರುಬೇಳೆಯನ್ನು ಹಾಕಿ ಅದು ಕೆಂಪಾಗುವ ತನಕ ಕಡಿಮೆ ಉರಿಯಲ್ಲಿ ಹುರಿಯಿರಿ.
* ಬಳಿಕ ಕುಕ್ಕರ್ ನಲ್ಲಿ ತೊಳೆದ ಅಕ್ಕಿ ಮತ್ತು ಹುರಿದ ಹೆಸರುಬೇಳೆ ಹಾಕಿ 4 ಕಪ್ ನೀರು ಹಾಕಿ ಒಂದು ವಿಷಲ್ ಬರುವ ತನಕ ಬೇಯಿಸಿ.
Advertisement
* ಒಂದು ಬಾಣಲೆಯಲ್ಲಿ ಸ್ವಲ್ಪ ತುಪ್ಪ ಬಿಸಿ ಮಾಡಿ ಅದಕ್ಕೆ ಕರಿಬೇವಿನಸೊಪ್ಪು, ಜೀರಿಗೆ, ಕಾಳುಮೆಣಸು, ಅರಿಶಿನ, ಗೋಡಂಬಿ ಮತ್ತು ಕತ್ತರಿಸಿದ ಹಸಿಮೆಣಸಿನಕಾಯಿ ಹಾಕಿ ಬಾಡಿಸಿ.
* ಇದನ್ನು ಬೇಯಿಸಿದ ಅಕ್ಕಿ ಮತ್ತು ಹೆಸರುಬೇಳೆಗೆ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಕಲಸಿ 5 ನಿಮಿಷ ಬೇಯಲು ಬಿಡಿ.
* ಕೊನೆಗೆ ಒಂದು ಚಮಚ ತುಪ್ಪ ಸೇರಿಸಿ ಒಲೆಯಿಂದ ಕೆಳಗಿಳಿಸಿದರೆ ಖಾರ ಪೊಂಗಲ್ ಸವಿಯಲು ಸಿದ್ಧ.