ಬೆಂಗಳೂರು: ಲಾಕ್ಡೌನ್ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್, ಹೋಟೆಲ್ಗಳು ಜೂನ್ ಒಂದರಿಂದ ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಮಾಲ್ ಮತ್ತು ಹೋಟೆಲ್ ಗಳು ಎಂದಿನಂತೆ ವ್ಯಾಪಾರ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ.
ಮಾಲ್ `ಫ್ರೀ’ ಆಗಲು ಷರತ್ತು ಅನ್ವಯ:
ಜೂನ್ ಒಂದರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ ಸಿಕ್ಕಿದರೂ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ಮಾತ್ರ ಮಾಲ್ ಓಪನ್ ಇರುವ ಸಾಧ್ಯತೆ ಹೆಚ್ಚಿದೆ. 2 ಹಂತಗಳಲ್ಲಿ ಮಾಲ್ ಓಪನ್ಗೆ ಸಮ್ಮತಿ ಸಿಗಲಿದ್ದು, ಮೊದಲ ಹಂತದಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.
Advertisement
Advertisement
ಮಕ್ಕಳ ಉಡುಪು, ಕನ್ನಡಕ ಮಾರಾಟ, ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಬೇಕಿರುವ ಎಲೆಕ್ಟ್ರಾನಿಕ್ ವಸ್ತುಗಳು, ಕ್ರೀಡಾಪರಿಕರ, ಚಪ್ಪಲಿ, ಶೂಗಳ ಮಾರಾಟಕ್ಕೆ ಮೊದಲ ಹಂತದಲ್ಲಿ ಅನುಮತಿ ಸಿಗಲಿದೆ.
Advertisement
2ನೇ ಹಂತದಲ್ಲಿ ಮಾಲ್ಗಳಲ್ಲಿ ಫುಡ್ ಕೋರ್ಟ್ಗೆ ಅನುಮತಿ ಸಾಧ್ಯತೆಯಿದೆ. ಇದರ ಜೊತೆಗೆ ಮಲ್ಟಿಪ್ಲೆಕ್ಸ್ ಗಳಿಗೆ, ಮನರಂಜನಾ ಕೇಂದ್ರಗಳಿಗೆ ಗ್ರೀನ್ ಸಿಗ್ನಲ್ ಸಾಧ್ಯತೆಯಿದೆ.
Advertisement
ಪ್ರವೇಶ ದ್ವಾರ, ಕ್ಯಾಶ್ ಕೌಂಟರ್, ಪಾರ್ಕಿಂಗ್ ಏರಿಯಾಗಳಲ್ಲಿ ಸ್ಯಾನಿಟೈಸರ್ ಕಡ್ಡಾಯ. ಮಾಲ್ ಸಿಬ್ಬಂದಿ ಮತ್ತು ಗ್ರಾಹಕರು ಮಾಸ್ಕ್ ಧರಿಸಬೇಕು. ಮಾಲ್ ಪ್ರವೇಶಿಸುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಗ್ರಾಹಕರು ಸಾಮಾಜಿಕ ಅಂತರ ಪಾಲಿಸಬೇಕಾಗುತ್ತದೆ.
ಮಾಲ್ನಲ್ಲಿ ಸ್ಪಾ, ಸಲೂನ್ನಲ್ಲಿ ಶೇ.50ರಷ್ಟು ಸಿಬ್ಬಂದಿ ಬಳಕೆ ಅನಮತಿ ಸಿಗಲಿದ್ದು, ಟೋಕನ್ ಪಡೆದ ಗ್ರಾಹಕರಿಗೆ ಮಾತ್ರ ಸ್ಪಾ, ಸಲೂನಿಗೆ ಅನುಮತಿ ಸಿಗುವ ಸಾಧ್ಯತೆಯಿದೆ.
ಹೋಟೆಲ್ ಓಪನ್?
ಸರ್ಕಾರ ಈಗ ಪಾರ್ಸೆಲ್ ನೀಡಲು ಮಾತ್ರ ಹೋಟೆಲ್ ಗಳಿಗೆ ಅನುಮತಿ ನೀಡಿದೆ. ಆದರೆ ಜೂನ್ 1 ರಿಂದ ಹೋಟೆಲಿನಲ್ಲಿ ಕುಳಿತು ತಿನ್ನುವುದಕ್ಕೂ ಅನುಮತಿ ನೀಡುವ ಸಾಧ್ಯತೆಯಿದೆ. ಹೋಟೆಲ್ ಸಿಬ್ಬಂದಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸಿ ಆಗಮಿಸಿದ ಗ್ರಾಹಕರಿಗೆ ಮಾತ್ರ ಆಹಾರ ನೀಡಬೇಕು. ಸಾಮಾಜಿಕ ಅಂತರ ಕಡ್ಡಾಯ ಈ ಷರತ್ತುಗಳನ್ನು ಸರ್ಕಾರ ವಿಧಿಸಲಿದೆ.