ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಅಮ್ಶಿಪೋರಾದಲ್ಲಿ ಮೂವರು ಉಗ್ರರನ್ನು ಭಾರತಿಯ ಸೇನೆ ಸದೆಬಡಿದಿದೆ.
ಇಂದು ಮುಂಜಾನೆ ಅಮ್ಶಿಪೋರಾದಲ್ಲಿ ಭದ್ರಾತ ಪಡೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಭದ್ರತಾ ಪಡೆ ಮೂವರು ಉಗ್ರರನ್ನು ಹೊಡೆದುರುಳಿಸಿದೆ. ಸದ್ಯ ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
Advertisement
An encounter has started at Amshipora area of Shopian. Police and security forces are on the job. Further details shall follow: Kashmir Zone Police
— ANI (@ANI) July 18, 2020
Advertisement
ನಿನ್ನೆಯಷ್ಟೇ ಕುಲ್ಗಾಂ ಜಿಲ್ಲೆಯ ನಾಗ್ನಾಡ್ ಎಂಬ ಪ್ರದೇಶದಲ್ಲಿ ಭದ್ರತಾ ಪಡೆಯ ಎನ್ಕೌಂಟರ್ಗೆ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಉಗ್ರರು ಹತ್ಯೆಗೀಡಾಗಿದ್ದರು.
Advertisement
#UPDATE Three terrorists killed in the encounter at Amshipora area of Shopian. Operation still in progress: Defence Public Relations Officer (PRO) Srinagar https://t.co/RJIyQletPt
— ANI (@ANI) July 18, 2020
Advertisement
ಕದನವಿರಾಮ ಉಲ್ಲಂಘಿಸಿದ ಪಾಕ್:
ಇತ್ತ ನೆರೆ ರಾಷ್ಟ್ರ ಪಾಕಿಸ್ತಾನ ಇಂದು ಮುಂಜಾನೆ ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ಗುಲ್ಪುರ್ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದೆ. ಪಾಕ್ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ ಎಂದು ಪೂಂಚ್ ಜಿಲ್ಲೆಯ ಉಪ ಆಯುಕ್ತ ರಾಹುಲ್ ಯಾದವ್ ತಿಳಿಸಿದ್ದಾರೆ.
Jammu & Kashmir: Three terrorists killed in an encounter at Amshipora area of Shopian. Operation still in progress. (Visuals deferred by unspecified time) pic.twitter.com/6RpE7qX7Xr
— ANI (@ANI) July 18, 2020