ಕೋಲ್ಕತ್ತಾ: ಶೇ.30 ರಷ್ಟು ಮುಸ್ಲಿಮರು ಒಂದಾದರೆ ಭಾರತದಲ್ಲಿ 4 ಪಾಕಿಸ್ತಾನವನ್ನು ಸೃಷ್ಟಿ ಮಾಡಬಹುದು ಎಂದು ಪಶ್ಚಿಮ ಬಂಗಾಳದ ಟಿಎಂಸಿ ನಾಯಕ ಶೇಖ್ ಆಲಂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿರ್ಭುಮ್ ಪ್ರದೇಶದ ನ್ಯಾನೂರ್ನ ಬಾಸಾ ಪ್ಯಾರಾದಲ್ಲಿ ಟಿಎಂಸಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಶೇಖ್, ಮುಸ್ಲಿಂ ಜನಸಂಖ್ಯೆಯ ಶೇಕಡಾ 30 ರಷ್ಟು ಜನರು ಒಗ್ಗೂಡಿದರೆ ನಾವು 4 ಹೊಸ ಪಾಕಿಸ್ತಾನ ರಚಿಸಬಹುದು ಎಂದಿದ್ದಾರೆ.
Advertisement
We are 30% and they are 70%. They will come to power with the support of the 70%, they should be ashamed. If our Muslim population moves to one side then we can create 4 new Pakistans. Where will 70% of the population go?: TMC leader Sheikh Alam (24.03) pic.twitter.com/MrmbjyDad9
— ANI (@ANI) March 25, 2021
Advertisement
“ನಾವು 30 ಪ್ರತಿಶತ ಮತ್ತು ಅವರು 70 ಪ್ರತಿಶತ ಜನರಿದ್ದಾರೆ. ಅವರು ಶೇ.70 ರಷ್ಟು ಜನರ ಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತಾರೆ. ಇದಕ್ಕೆ ಅವರು ನಾಚಿಕೆಪಡಬೇಕು. ನಮ್ಮ ಮುಸ್ಲಿಂ ಜನಸಂಖ್ಯೆಯು ಒಂದು ಬದಿಗೆ ಹೋದರೆ ನಾವು 4 ಹೊಸ ಪಾಕಿಸ್ತಾನಿಗಳನ್ನು ರಚಿಸಬಹುದು. 70 ರಷ್ಟು ಜನರು ಎಲ್ಲಿಗೆ ಹೋಗುತ್ತಾರೆ ಎಂದು ಪ್ರಶ್ನಿಸಿದ್ದಾರೆ
Advertisement
ನೂನೂರ್ ಎಸ್ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಧಾನ್ ಚಂದ್ರ ಅವರ ಪರವಾಗಿ ಪ್ರಚಾರ ಭಾಷಣ ಮಾಡುವ ಸಂದರ್ಭದಲ್ಲಿ ಶೇಖ್ ಆಲಂ ಈ ಹೇಳಿಕೆ ನೀಡಿದ್ದಾರೆ.
Advertisement
Y’day, TMC leader Sheikh Alam, giving a speech in Basa para, Nanoor, in Birbhum AC said, if 30% Muslims in India come together, then 4 Pakistan can be formed…
He obviously owes his allegiance to Mamata Banerjee… Does she endorse this position?
Do we want a Bengal like that? pic.twitter.com/YjAeSzhH5P
— Amit Malviya (@amitmalviya) March 25, 2021
ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಪ್ರತಿಕ್ರಿಯಿಸಿ, ಮಮತಾ ಬ್ಯಾನರ್ಜಿಯವರ ಓಲೈಕೆ ರಾಜಕಾರಣದಿಂದಾಗಿ ಟಿಎಂಸಿ ನಾಯಕರು ಇಂತಹ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಟಿಎಂಸಿ ಮುಖ್ಯಸ್ಥರು ರಾಜ್ಯದ ಬಹುಸಂಖ್ಯಾತ ಸಮುದಾಯವನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ನೋಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.