Bengaluru CityKarnatakaLatestMain Post

ಶುಲ್ಕ ವಸೂಲಿಗಾಗಿ ಖಾಸಗಿ ಶಾಲೆಯ ‘ಲೋನ್’ ದಂಧೆ

ಬೆಂಗಳೂರು: ಶಾಲಾ ಶುಲ್ಕ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಶಾಲೆಯೊಂದು ಸಾಲ ದಂಧೆ ಶುರು ಮಾಡಿಕೊಂಡಿದೆ. ಸಾಲ ಕೊಡಿಸ್ತೀವಿ, ನಮಗೆ ಫೀಸ್ ಕಟ್ಟಿ ಎಂದು ಲಗ್ಗೆರೆಯ ಖಾಸಗಿ ಶಾಲೆಯೊಂದು ಪೋಷಕರಿಗೆ ದುಂಬಾಲು ಬಿದ್ದಿದೆ.

ಲಗ್ಗೆರೆಯ ಈ ಖಾಸಗಿ ಶಾಲೆ, ಫೈನಾನ್ಸ್ ಪೀರ್ ಎಂಬ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದ್ಯಾರ್ಥಿಯ ಟಿಸಿಯನ್ನು ಅಡಮಾನ ಇಟ್ಟುಕೊಂಡು ಪೊಷಕರಿಗೆ ಸಾಲ ವಿತರಣೆಗೆ ಈ ಫೈನಾನ್ಸ್ ಕಂಪನಿ ಮುಂದಾಗಿದೆ. ಸಾಲ ತೆಗೆದುಕೊಂಡ 6 ತಿಂಗಳವರೆಗೆ ಯಾವುದೇ ರೀತಿಯ ಬಡ್ಡಿ ಇರುವುದಿಲ್ಲ. ನಂತರ 9 ತಿಂಗಳ ಅವಧಿಗೆ ಶೇಕಡಾ 2ರಷ್ಟು ಬಡ್ಡಿ ಹಾಗೂ 11 ತಿಂಗಳ ಅವಧಿಗೆ ಶೇಕಡಾ 3.5ರಷ್ಟು ಬಡ್ಡಿಯನ್ನು ನಿಗದಿ ಮಾಡಲಾಗಿದೆ. ಈ ಶಾಲೆಯ ಧನಧಾಹಿತನಕ್ಕೆ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಶಾಲೆಗಳ ಆರಂಭಕ್ಕೂ ಮುನ್ನ ಫೀಸ್ ಕಟ್ಟುವಂತೆ ಯಾವ ಖಾಸಗಿ ಶಾಲೆಯವರು ಒತ್ತಾಯ ಮಾಡಬಾರದು. ಫೀಸ್ ಕಟ್ಟುವಂತೆ ಒತ್ತಾಯ ಮಾಡುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published.

Back to top button