Bengaluru CityCinemaDistrictsKarnatakaLatestMain Post

ಶುಭಾಗೆ ಲೈಫ್ ನೀಡುತ್ತಿರುವ ಆ ವ್ಯಕ್ತಿಗೆ ಹ್ಯಾಟ್ಸ್ ಆಫ್ ಎಂದ ರಾಜೀವ್!

ಬಿಗ್‍ಬಾಸ್ ನಿನ್ನೆ ಒಲವಿನ ಉಡುಗೊರೆ ಕೊಡಲೇನು ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರಂತೆ ಮನೆಯಲ್ಲಿರುವ ಸದಸ್ಯರು ತಮ್ಮ ಮನಸ್ಸು ಕದ್ದ ಹುಡುಗಿಯರಿಗೆ ಹಾರ್ಟ್ ಬಲೂನ್ ನೀಡಬೇಕಾಗಿತ್ತು. ಹಾಗೆಯೇ ಹುಡುಗಿಯರು ಬಿಗ್‍ಬಾಸ್ ಮನೆಯಲ್ಲಿ ತಾವು ಇಷ್ಟಪಡುವಂತಹ ಒಬ್ಬ ಹುಡುಗನಿಗೆ ತಮ್ಮ ಸ್ವಂತ ಒಂದು ವಸ್ತುವನ್ನು ನೀಡಬೇಕು ಎಂದು ಸೂಚಿದರು.

ಅದರಂತೆ ರಾಜೀವ್, ಪ್ರತಿಯೊಬ್ಬರಿಗೂ ಅವರದೇ ಆದಂತಹ ದೃಷ್ಟಿಕೋನಗಳಿರುತ್ತದೆ. ಯಾರನ್ನಾದರೂ ಅಭಿಪ್ರಾಯ ಕೇಳಿದಾಗ ಇಲ್ಲ ನಾನು ಅವರನ್ನು ಹೀಗೆಯೇ ನೋಡುತ್ತೇನೆ ನಿನಗೆ ಗೊತ್ತಿಲ್ಲ ಎಂದು ಹೇಳುವುದನ್ನು ನಿಲ್ಲಿಸಬೇಕು. ಒಬ್ಬ ಹುಡುಗ ಎಷ್ಟು ಕಷ್ಟಪಟ್ಟು ಬಂದಿರುತ್ತಾನೋ, ಒಂದು ಹುಡುಗಿ ಅದಕ್ಕಿಂತ ಹತ್ತುಪಟ್ಟಷ್ಟು ಹೆಚ್ಚಾಗಿ ಕಷ್ಟಪಟ್ಟು ಬಂದಿರುತ್ತಾಳೆ. ಒಂದು ಬಾರಿ ಯೋಚನೆ ಮಾಡೋಣಾ.. ನಾನು ನಿಮ್ಮನ್ನು ನೋಡಿದಾಗ ಅಭಿಪ್ರಾಯ ಬೇರೆಯೇ ಇತ್ತು. ಇದೇ ತರ ಅಭಿಪ್ರಾಯ ಪ್ರತಿಯೊಂದು ಹೀರೋಯಿನ್, ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಇರುತ್ತದೆ. ಅರ್ಥಮಾಡಿಕೊಂಡು ಮಾತನಾಡುವ ಮುನ್ನವೇ ನಾವು ಒಂದು ಜಡ್ಜ್‍ಮೆಂಟ್‍ಗೆ ಬಂದು ಬಿಡುತ್ತೇವೆ.

ಅವರಿಗೆ ಸಮರ್ಥನೆ ಮಾಡಿಕೊಳ್ಳಲು ಕೂಡ ಅವಕಾಶ ನೀಡುವುದಿಲ್ಲ. ಹಾಗಾಗಿ ನಮ್ಮ ದೃಷ್ಟಿಯಲ್ಲಿ ಅವರು ಹಾಗೆಯೇ ಉಳಿದುಕೊಂಡು ಬಿಡುತ್ತಾರೆ. ನಮ್ಮ ದೃಷ್ಟಿಯಲ್ಲಿ ಅಲ್ಲದೇ ನಾಲ್ಕು ಜನಕ್ಕೆ ಹೋಗಿ ಅದೇ ರೀತಿಯಲ್ಲಿ ಹೇಳುತ್ತೇವೆ. ಹಾಗಾಗಿ ಆ ರೀತಿ ಮಾಡುವುದು ಬೇಡ ಎಂದು ಹೇಳುತ್ತಾರೆ.

ನನ್ನ ಒಲವಿನ ಉಡುಗೊರೆ ನಾನು ಶುಭಗೆ ನೀಡುತ್ತೇನೆ. ಯಾಕಂದ್ರೆ ಬಹಳಷ್ಟು ಅಭಿಪ್ರಾಯಗಳಿಟ್ಟುಕೊಂಡು ಬಂದಿದ್ದಾರೆ. ನಾನು ಈ ವೇದಿಕೆಯ ಮೂಲಕ ಹೇಳುತ್ತೇನೆ. ತುಂಬಾ ಹತ್ತಿರದಲ್ಲಿದ್ದುಕೊಂಡು ಒಬ್ಬರನ್ನು ನೋಡಿ, ಅವರ ಕಷ್ಟ, ಅವರು ಹೀಗೆ ಮಾತನಾಡಲು ಕಾರಣವೇನು, ಅವರ ಯಾವ ಪರಿಸ್ಥಿತಿ ಆ ಪರಿಸ್ಥಿತಿಗೆ ದೂಡಿತ್ತು ಎಂದು ಅರ್ಥಮಾಡಿಕೊಳ್ಳಬೇಕು ಎನ್ನುತ್ತಾರೆ.

ಇದೀಗ ಅವರು ಅದರಿಂದ ಹೊರಗೆ ಬರುತ್ತಿದ್ದಾರೆ. ಎಷ್ಟೋ ಮಾತುಕತೆಯ ನಂತರ ಇದೀಗ ಲೈಫ್‍ನನ್ನು ರೂಪಿಸಿಕೊಳ್ಳಲು ಹೊರಟಿದ್ದಾರೆ. ನಿಜವಾಗಿಯೂ ಆ ವ್ಯಕ್ತಿಗೆ ಹ್ಯಾಟ್ಸ್ ಆಫ್ ಯಾರು ಏನೇ ಮಾತನಾಡಿದರೂ ಒಬ್ಬರಿಗೆ ಲೈಫ್ ಕೊಡುವುದು ತುಂಬಾ ಕಷ್ಟ. ಆದರೆ ನೀವು ನೀಡುತ್ತಿದ್ದೀರಾ. ಏನೇ ಇದ್ದರೂ ನಾನು ನಿಮ್ಮ ಜೊತೆಯಲ್ಲಿ ಇರುತ್ತೇನೆ ಎಂದು ಶುಭಾಗೆ ಬಲೂನ್ ನೀಡಿದರು.

Leave a Reply

Your email address will not be published.

Back to top button