ಶಿಗ್ಗಾಂವಿ ತಹಶೀಲ್ದಾರ ಸೇರಿ ಹಾವೇರಿಯಲ್ಲಿ 54 ಜನರಿಗೆ ಸೋಂಕು

-ಜಿಲ್ಲೆಯಲ್ಲಿ ಕೊರೊನಾಗೆ ಇಬ್ಬರ ಸಾವು

ಹಾವೇರಿ: ಜಿಲ್ಲೆಯಲ್ಲಿ 54 ಜನರಲ್ಲಿ ಮಹಾಮಾರಿ ಕೊರೊನಾ ಸೋಂಕು ಧೃಡಪಟ್ಟಿದೆ. ಶಿಗ್ಗಾಂವಿ ತಾಲೂಕಿನಲ್ಲಿ 30 ಜನರಿಗೆ ಸೋಂಕು ದೃಢಪಟ್ಟಿದ್ದು, 50 ವರ್ಷದ ಶಿಗ್ಗಾಂವಿಯ ತಹಶೀಲ್ದಾರರಿಗೆ ಸೇರಿದಂತೆ ಐದು ಜನ ಕುಟುಂಬ ಸದಸ್ಯರಿಗೂ ಸಹ ಕೊರೊನಾ ಸೋಂಕು ಧೃಡಪಟ್ಟಿದೆ.

ಹಾವೇರಿ ತಾಲೂಕಿನಲ್ಲಿ 9 ಜನರಿಗೆ ವಕ್ಕರಿಸಿದ್ದು 44 ವರ್ಷದ ದಿನಪತ್ರಿಕೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಸಹ ಸೋಂಕು ಧೃಡಪಟ್ಟಿದೆ. ರಾಣೆಬೆನ್ನೂರು ತಾಲೂಕಿನ ಐವರಿಗೆ ವಕ್ಕರಿಸಿದ್ದು, ಆಸ್ಪತ್ರೆಯ 44 ವರ್ಷದ ಎಫ್.ಡಿ.ಸಿ ಹಾಗೂ 33 ವರ್ಷದ ಸ್ಟಾಪ್ ನರ್ಸ್ ಗೂ ಕೊರೊನಾ ತಗುಲಿದೆ. ಸವಣೂರು ಮತ್ತು ಹಾನಗಲ್ ತಾಲೂಕಿನಲ್ಲಿ ತಲಾ ಐವರಿಗೆ ಸೋಂಕು ಧೃಡಪಟ್ಟಿದೆ. ಹಾವೇರಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 459ಕ್ಕೆ ಏರಿದೆ.

- Advertisement -

ಕೊರೊನಾ ಸೋಂಕಿಗೆ ಇಬ್ಬರು ಮೃತಪಟ್ಟಿದ್ದಾರೆ. ಹಾನಗಲ್ ತಾಲೂಕಿನ ಬಸಾಪುರ ಗ್ರಾಮದ 25 ವರ್ಷದ ಯುವಕನಿಗೆ ಜುಲೈ 17,ರಂದು ಸೋಂಕು ಧೃಡಪಟ್ಟಿತ್ತು, ಶಿಗ್ಗಾಂವಿ ತಾಲೂಕಿನ ಬಂಕಾಪುರದ ನಿವಾಸಿ 47 ವರ್ಷದ ವ್ಯಕ್ತಿ ಸಹ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರು ಮೃತಪಟ್ಟಿದ್ದು ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಮರಣ ಸಂಖ್ಯೆ ಹನ್ನೊಂದಕ್ಕೆ ಏರಿದೆ.

- Advertisement -