ಚಿತ್ರದುರ್ಗ: ರಾಜ್ಯದ ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿದ ಬಳಿಕ ಕೇಂದ್ರನಾಯಕರು ಮುಂದಿನ ಸಿಎಂ ಆಯ್ಕೆ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಚಿತ್ರದುರ್ಗದ ಮುರುಘಾ ಮಠದಲ್ಲಿ ಇಂದು ಗ್ರಾಮ ಪಂಚಾಯತಿ ಪಿಡಿಓ, ಅಧ್ಯಕ್ಷ, ಉಪಾಧ್ಯಕ್ಷರಿಗೆ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ರಾಷ್ಟ್ರೀಯ ನಾಯಕರ ಆದೇಶ ಪಾಲಿಸುವುದಾಗಿ ಹೇಳಿದ್ದಾರೆ. ಯಾಕೆ ಸುಖಾಸುಮ್ಮನೆ ಗೊಂದಲ ಸೃಷ್ಟಿ ಮಾಡುತ್ತಿದ್ದಾರೋ ತಿಳಿಯುತ್ತಿಲ್ಲ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿಗೆ ಬರೋರಿದ್ರೆ ಅರ್ಜಿ ಹಾಕಲಿ, ಆಮೇಲೆ ಕೂತು ಮಾತನಾಡೋಣ: ಡಿಕೆಶಿ
Advertisement
Advertisement
ರಾಜ್ಯದ ಬಿಜೆಪಿ ಕಾರ್ಯಕರ್ತರು ಸಿಎಂ ಹೇಳಿಕೆ ಮೆಚ್ಚಿಕೊಂಡಿದ್ದಾರೆ ಆದರೂ ಸಹ ಜುಲೈ 25ಕ್ಕೆ ಬರುವ ಸೂಚನೆಯನ್ನು 26ಕ್ಕೆ ಪಾಲಿಸುವುದಾಗಿ ಸಿಎಂ ಪಾಲಿಸಲಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು. ಪರೀಕ್ಷೆ ಬರೆದು ಪಾಸಾಗಿದ್ದೇವೆಂದ ಸಚಿವ ಯೊಗೀಶ್ವರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅದೆಲ್ಲ ಹಳೇ ಓಬಿರಾಯನ ಕಥೆಗಳು ಅಂತಾರಲ್ಲ ಹಾಗೇ. ಯೊಗೀಶ್ವರ್, ಯತ್ನಾಳ್, ಬೆಲ್ಲದ್ ಹೀಗೆ ಅಂದರು ಅನ್ನೋದೆಲ್ಲ ಮುಗಿದು ಹೋಗಿದೆ. ರಾಷ್ಟ್ರೀಯ ನಾಯಕರು, ಬಿಎಸ್ವೈ ಮಾತು ಅಷ್ಟೇ ಉಳಿದಿರುವುದು. ಯಾರ ಮಾತಿಗೂ ಬೆಲೆ ಇಲ್ಲ ಎಂದು ಯೋಗೀಶ್ವರ್ ಮಾತಿಗೆ ಲೇವಡಿ ಮಾಡಿದರು. ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮಾದಪ್ಪನಿಗೆ ಹಣದ ಹೊಳೆ – 47 ದಿನದಲ್ಲಿ 2.33 ಕೋಟಿ ಸಂಗ್ರಹ
Advertisement
Advertisement
ಕೆಲವರು ಅವರ ಭಾವನೆಗಳನ್ನು ಹೇಳಿದ್ದಾರೆ ಅಷ್ಟೇ. ಸಂಚು ಏನು ಅಲ್ಲ. ಅದು ತಪ್ಪು ಅನ್ನುವುದನ್ನು ಪಕ್ಷ ಈಗಾಗಲೇ ಅವರಿಗೆ ಹೇಳಿದೆ. ಪಕ್ಷ ಸೂಚಿಸಿದ ದಿಕ್ಕಿನಲ್ಲಿ ಬರದಿದ್ದರೆ ಮಾಡಿದ ತಪ್ಪಿಗೆ ಅವರೇ ಪಶ್ಚಾತ್ತಾಪ ಅನುಭವಿಸಬೇಕಾಗುತ್ತದೆ. ಸಿಎಂ ಸ್ಥಾನಕ್ಕೆ ಅಭಿಮಾನಿಗಳು ನಮ್ಮ ಹೆಸರು ಹೇಳುತ್ತಿರುತ್ತಾರೆ. ಬೇಡ ಅಂದರೂ ಅಭಿಮಾನಿಗಳು ಕೇಳುವುದಿಲ್ಲ ಎಂದು ಹೇಳಿದ ಅವರು, ಎಲ್ಲಾ ಶಾಸಕರ ಅಭಿಪ್ರಾಯವನ್ನು ಸಂಗ್ರಹಿಸಿ ಕೇಂದ್ರದಿಂದ ಮುಂದಿನ ಸಿಎಂ ಆಯ್ಕೆ ಮಾಡಲಿದ್ದಾರೆ ಎಂದು ಹೇಳಿದರು.