ಬೆಂಗಳೂರು: ಶಾಲಾ-ಕಾಲೇಜು ಶುರುವಾಗಿದೆ, ಆದರೂ ಶುಲ್ಕ ಸಮರ ಮಾತ್ರ ನಿಂತಿಲ್ಲ. ಹೀಗಾಗಿ ಸರ್ಕಾರ ಇದೀಗ ಶುಲ್ಕ ನಿಗದಿ ಮಾಡೋದಕ್ಕೆ ಆಗದೇ ತಲೆ ಕೆಡಿಸಿಕೊಂಡಿದೆ.
ಶಿಕ್ಷಣ ಇಲಾಖೆಯಿಂದ ಸಂಘಟನೆಗಳು, ಪೋಷಕರು ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ. ಇಂದು ಅಥವಾ ನಾಳೆ ಆಯುಕ್ತರ ವರದಿ ಸಚಿವರ ಕೈ ಸೇರಲಿದ್ದು, ಆಯುಕ್ತ ವರದಿ ನೋಡಿಕೊಂಡು ಸರ್ಕಾರ ಶುಲ್ಕ ನಿಗದಿ ಮಾಡುವ ಸಾಧ್ಯತೆಗಳಿವೆ.
Advertisement
Advertisement
ಆಯುಕ್ತರ ವರದಿಯಲ್ಲಿ ಸರ್ಕಾರಕ್ಕೆ ಯಾವುದೇ ಶಿಫಾರಸು ಮಾಡಿಲ್ಲ. ಕೇವಲ ಖಾಸಗಿ ಶಾಲೆಗಳ ಸಂಘಟನೆ, ಪೋಷಕ ಸಂಘಟನೆಗಳ ಬೇಡಿಕೆ ಬಗ್ಗೆ ಉಲ್ಲೇಖ ಮಾಡಲಾಗುತ್ತದೆ. ಎಷ್ಟು ಶುಲ್ಕ ನಿಗದಿ ಮಾಡಬೇಕು ಅಂತ ಶಿಫಾರಸು ಮಾಡಿಲ್ಲ. ಒಟ್ಟಿನಲ್ಲಿ ಸರ್ಕಾರದ ಅಂಗಳಕ್ಕೆ ಚೆಂಡು ರವಾನೆ ಮಾಡಲಾಗುತ್ತದೆ.
Advertisement
ಕ್ಯಾಮ್ಸ್ ಸಂಧಾನ ಸೂತ್ರ ಏನು.?
ಇಡೀ ವರ್ಷದ ಶುಲ್ಕ ಪಾವತಿಗೆ ಒತ್ತಾಯ ಮಾಡುವುದಿಲ್ಲ. ಸ್ಪೆಷಲ್ ಡೆವಲಪ್‍ಮೆಂಟ್ ಫೀಸ್ ಈ ಬಾರಿ ತೆಗೆದುಕೊಳ್ಳುವುದಿಲ್ಲ. ಟರ್ಮ್ ಫೀಸ್ ಕೂಡಾ ಕೈ ಬಿಡಲು ಶಾಲೆಗಳು ಒಪ್ಪಿಕೊಂಡಿವೆ. ಪಠ್ಯೇತರ ಚಟುವಟಿಕೆಗಳ ಶುಲ್ಕವನ್ನು ಪಡೆಯೋದಿಲ್ಲ. (ಉದಾ- ಈಜು, ಡ್ಯಾನ್ಸ್, ಡ್ರಾಯಿಂಗ್ ಇತ್ಯಾದಿ). ಕಂಪ್ಯೂಟರ್ ಫೀಸ್ ನಲ್ಲಿ ಶುಲ್ಕ ಕಡಿತ ಮಾಡಲಾಗುತ್ತೆ. ಸ್ಕೂಲ್ ವ್ಯಾನ್ ಫೀಸ್‍ನಲ್ಲಿ ಆಪರೇಟಿಂಗ್ ಶುಲ್ಕ ಪಡೆಯಲ್ಲ.
Advertisement
ರೂಪ್ಸಾ ಸಂಘಟನೆಯ ಸಂಧಾನ ಸೂತ್ರ!
* 15 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.5 ಶುಲ್ಕ ವಿನಾಯಿತಿ.
* 15-25 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.10 ವಿನಾಯ್ತಿ.
* 25-50 ಸಾವಿರ ಶುಲ್ಕ ಪಡೆಯೋ ಶಾಲೆಗಳು – ಶೇ.25 ಶುಲ್ಕ ವಿನಾಯ್ತಿ.
* 50 ಸಾವಿರ ದಿಂದ 1 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.35 ಶುಲ್ಕ ವಿನಾಯ್ತಿ.
* 1 ರಿಂದ 1.5 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.50 ವಿನಾಯ್ತಿ.
* 1.5 ರಿಂದ 2 ಲಕ್ಷ ಶುಲ್ಕ ಪಡೆಯೋ ಶಾಲೆಗಳು – ಶೇ.75 ಶುಲ್ಕ ವಿನಾಯ್ತಿಗೆ ಒಪ್ಪಿಗೆ
ಸರ್ಕಾರದ ಸಂಧಾನ ಸೂತ್ರ ಏನು?
ಈ ವರ್ಷ ಖಾಸಗಿ ಶಾಲೆಗಳ ಶುಲ್ಕವನ್ನು ಶೇಕಡಾ 25-35 ಕಡಿತ ಮಾಡೋದು. ಬೋಧನೆ ಶುಲ್ಕ ಬಿಟ್ಟು ಉಳಿದ ಎಲ್ಲಾ ಶುಲ್ಕಕ್ಕೂ ಈ ವರ್ಷ ಕಡಿವಾಣ ಹಾಕೋದು. ಎರಡನೇ ಕಂತು ಶುಲ್ಕ ಪಾವತಿಗೆ ಮಾತ್ರ ಆದೇಶ ಮಾಡೋದು. ತಜ್ಞರ ಸಮಿತಿ ಶಿಫಾರಸ್ಸಿನ ಅನ್ವಯ ಶುಲ್ಕ ನಿಗದಿ ಮಾಡಬಹುದು. ಮತ್ತೊಮ್ಮೆ ಖಾಸಗಿ ಶಾಲೆಗಳು, ಪೋಷಕರ ಸಂಘಟನೆ ಜೊತೆ ಸಚಿವರೇ ಸಭೆ ನಡೆಸಬಹುದು.