ಪಾಟ್ನಾ: ಶಾಲೆ ಕಟ್ಟಡದ ಕಾಂಪೌಂಡ್ವೊಂದು ಕುಸಿದು 6 ಮಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಸೋಮವಾರ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.
ರಾಜಧಾನಿ ಪಾಟ್ನಾದಿಂದ 190 ಕಿ.ಮೀ ದೂರದಲ್ಲಿರುವ ಮಹೆಶ್ಖುಂಟ್ ಪೊಲೀಸ್ ಠಾಣಾ ವ್ಯಾಪ್ತಿ ಬಳಿ ಬರುವ ಚಂಡಿ ಟೋಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. 12 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಗೋಡೆ ಕುಸಿದಿದೆ. ಇದೀಗ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
Advertisement
ಶಾಲೆಯ ಬಳಿ ಚರಂಡಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಲ್ಲದೆ ಶಾಲೆಯ ಕಾಂಪೌಂಡ್ ನನ್ನು ಕೆಡವಲು ಜೆಸಿಬಿ ಯಂತ್ರವನ್ನು ಬಳಸಲಾಗಿತ್ತು. ಸರಿಯಾದ ಯೋಜನೆ ರೂಪಿಸದೆ ಗೋಡೆ ನಿರ್ಮಿಸಲು ಮುಂದಾಗಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ನಿರ್ಮಾಣದ ಉಸ್ತುವಾರಿ ಗುತ್ತಿಗೆದಾರನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement