– ಶಾಲಾ ದಿನಗಳಲ್ಲಿ ನಾಟಕ ಹುಚ್ಚು, ಬಂದ ಹಣದಿಂದ ಸಾಮಾಜಿಕ ಕಾರ್ಯ
– ಪ್ರಧಾನಿ ಜೀವನದ ಕೆಲ ಕುತೂಕಲಹಕಾರಿ ಸಂಗತಿಗಳು
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ವಿವಿಧ ರೀತಿಯ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಇಂದು ದೇಶಾದ್ಯಂತ ಆಚರಿಸಲಾಗುತ್ತಿದೆ. ಆದರೆ ಪ್ರಧಾನಿ ಮೋದಿ ಸಹ ಚಿಕ್ಕಂದಿನಿಂದಲೂ ಸಾಮಾಜಿಕ ಕಾರ್ಯಗಳನ್ನು ಮೈಗೂಡಿಸಿಕೊಂಡಿದ್ದರು ಎಂಬುದು ವಿಶೇಷ ಸಂಗತಿಯಾಗಿದೆ.
Advertisement
ಪ್ರಧಾನಿ ಮೋದಿ ತಾವು ಅಧಿಕಾರಕ್ಕೆ ಬಂದಾಗಿನಿಂದಲೂ ತಮ್ಮ ಪ್ರಶಸ್ತಿ ಮೊತ್ತ, ಹಾಗೂ ಉಡುಗೊರೆಗಳನ್ನು ಹರಾಜು ಹಾಕಿ ಬಂದ ಹಣದಲ್ಲಿ ನಮಾಮಿ ಗಂಗಾ ಯೋಜನೆಗೆ ಹಾಗೂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೀಡಿರುವುದು ತಿಳಿದೇ ಇದೆ. ಆದರೆ ಬಾಲ್ಯದಲ್ಲಿಯೂ ಅವರು ಅಪಾರ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದರು.
Advertisement
ಪ್ರಧಾನಿ ಮೋದಿ ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಹೆಚ್ಚು ಅಭಿನಯಿಸುತ್ತಿದ್ದರು. ಹೀಗೆ ಮಾಡುವಾಗ 13-14 ವರ್ಷದವರಾಗಿದ್ದಾಗ ನಾಟಕಗಳಲ್ಲಿ ನಟಿಸಿ, ಬಂದ ಹಣವನ್ನು ತಮ್ಮೂರಿನ ಶಾಲೆಯ ಕಾಂಪೌಂಡ್ ಕಟ್ಟಲು ಉಪಯೋಗಿಸಿದ್ದರು. ಈ ಮೂಲಕ ಚಿಕ್ಕಂದಿನಿಂದಲೇ ಸಾಮಾಜಿಕ ಕಾರ್ಯವನ್ನು ಮೈಗೂಡಿಸಿಕೊಂಡಿದ್ದರು.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 17, 1950ರಂದು ಗುಜರಾತ್ನ ವಡ್ನಗರದಲ್ಲಿ ಬಡ ಮಧ್ಯಮ ಕುಟುಂಬದಲ್ಲಿ ಜನಿಸಿದ್ದು, ಚಿಕ್ಕವರಿದ್ದಾಗಲೇ ಮೋದಿ ಕೆಲಸ ಮಾಡುತ್ತಿದ್ದರು. ತಮ್ಮ ತಂದೆಗೆ ಚಹಾ ಮಾರಲು ಸಹಾಯ ಮಾಡುತ್ತಿದ್ದರು. ನಂತರ ತಮ್ಮದೇ ಚಹಾದ ಅಂಗಡಿಯನ್ನು ನಡೆಸುತ್ತಿದ್ದರು. ತಮ್ಮ 8ನೇ ವಯಸ್ಸಿಗೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಸೇರಿದ್ದರು.
ಜಶೋದಾಬೆನ್ ಅವರನ್ನು ವಿವಾಹವಾದಾಗ ಪ್ರಧಾನಿ ಮೋದಿಯವರಿಗೆ ಕೇವಲ 13 ವರ್ಷ. ಇದು ಮನೆಯವರೇ ನಿಶ್ಚಯಿಸಿದ, ಪದ್ಧತಿ ಪ್ರಕಾರ ನಡೆದ ಮದುವೆಯಾಗಿತ್ತು. 1968ರಲ್ಲಿ ಪ್ರಧಾನಿ ಮೋದಿಯವರಿಗೆ 18 ವರ್ಷ ತುಂಬಿದ ಬಳಿಕ ದಂಪತಿ ಒಟ್ಟಿಗೆ ಇರಲು ಆರಂಭಿಸಿದರು. ಬಾಲ್ಯ ವಿವಾಹವಾಗಿದ್ದರಿಂದ ಪ್ರಧಾನಿ ಮೋದಿ ಪ್ರೌಢ ಶಾಲೆ ಮುಗಿಸಿದ ಮನೆಯನ್ನೇ ತೊರೆದಿದರು. 13-14 ವರ್ಷದವರಿದ್ದಾಗಲೇ ಪ್ರಧಾನಿ ಮೋದಿ ನಾಟಕ ಮಾಡುತ್ತ ಬಂದ ಹಣದಿಂದ ಶಾಲಾ ಕಾಂಪೌಡ್ ಕಟ್ಟಲು ಹಣ ಸಂಗ್ರಹಿಸಿ ನೀಡಿದ್ದರು.
ತಮ್ಮ ಹರೆಯದ ಅವಧಿಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಭಾರತದಾದ್ಯಂತ ಪ್ರಯಾಣ ಮಾಡಿದ್ದರು. ದೇಶಾದ್ಯಂತ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ಬಳಿಕ ಗುಜರಾತ್ಗೆ ಮರಳಿದ್ದರು.
1971ರಲ್ಲಿ ಪ್ರಧಾನಿ ನರೇಂದ್ರ ಮೋದಿ ಪೂರ್ಣಾವಧಿಯ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದರು. 1975ರಲ್ಲಿ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ ಸಂದರ್ಭದಲ್ಲಿ ಅವರು ತಲೆಮರೆಸಿಕೊಳ್ಳಬೇಕಾಯಿತು. ಈ ವೇಳೆ ಅವರು ಆರ್ಎಸ್ಎಸ್ನ ದೊಡ್ಡ ನಾಯಕರಾಗಿರಲಿಲ್ಲ. ಆದರೂ ಅವರು ಸಂಘಟನೆಯ ಉನ್ನತ ನಾಯಕರ ನಡುವೆ ನಿರ್ಣಾಯಕ ಮಾಹಿತಿಯನ್ನು ಕನೆಕ್ಟರ್ ರೀತಿಯಲ್ಲಿ ರವಾನಿಸುತ್ತಿದ್ದರು. ಹೀಗೆ ಆರ್ಎಸ್ಎಸ್ ಸಂಘಟನೆಯಲ್ಲಿ ಮೋದಿ ಗುರುತಿಸಿಕೊಂಡಿದ್ದರು.