– 4 ದಿನವಾದ್ರೂ ಬಂದಿಲ್ಲ ಮೃತಪಟ್ಟ ಬಾಲಕನ ವರದಿ
– ಕೊರೊನಾ ನೆರಳಲ್ಲಿ ‘ಖಾಸಗಿ’ ದಂಧೆ!
ಬೆಂಗಳೂರು: ಕೊರೊನಾ ವೈರಸ್ ಜಂಜಾಟದ ಮಧ್ಯೆ ಖಾಸಗಿ ಆಸ್ಪತ್ರೆಗಳು ಹಣ ವಸೂಲಿ ಮಾಡುತ್ತವೆ. ಇದಕ್ಕೆ ತಾಜಾ ಉದಾಹರಣೆಯೊಂದು ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರಿನ ಆರ್ ಟಿನಗರದಲ್ಲಿ ಕಳೆದ ಗುರುವಾರ 7 ವರ್ಷದ ಬಾಲಕನೊಬ್ಬ ಆಯತಪ್ಪಿ ಬಿದ್ದಿದ್ದನು. ಅಂದು ಬೆಳಗ್ಗಿನಿಂದ ಸಂಜೆವರೆಗೂ ಓಡಾಡಿದರೂ ಆತನನ್ನು ಯಾವುದೇ ಆಸ್ಪತ್ರೆಯುವರು ದಾಖಲಿಸಿಕೊಂಡಿರಲಿಲ್ಲ. ಆ ಬಳಿಕ ಸಂಜೆ ಹೊತ್ತಿಗೆ ವಿಜಯನಗರ ಆಸ್ಪತ್ರೆಯಲ್ಲಿ ದಾಖಲಾಗಿಸಲಾಗಿತ್ತು.
Advertisement
Advertisement
ಆದರೆ ಬಾಲಕ ಭಾನುವಾರ ಬೆಳಗ್ಗಿನ ಜಾವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದನು. ಆ ಬಳಿಕ ಅಲ್ಲಿನ ವೈದ್ಯರು ಮೃತದೇಹಕ್ಕೆ ಕೋವಿಡ್ ಟೆಸ್ಟ್ ಮಾಡಬೇಕು. ಆ ರಿಪೋರ್ಟ್ ಬರೋ ತನಕ ಮೃತದೇಹ ಕೊಡಲ್ಲ ಎಂದು ಹೇಳಿದ್ದರು.
Advertisement
ಸರ್ಕಾರಿ ಆಸ್ಪತ್ರೆಯ ಮಾರ್ಚರಿಯಲ್ಲಿ ಫ್ರೀಜರ್ ಇಲ್ಲ, ಪ್ರೈವೇಟ್ ನಲ್ಲಿ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದರು. ಹೀಗಾಗಿ ಹೆಬ್ಬಾಳದ ಕುಮಾರ್ ಅಂಬುಲೆನ್ಸ್ ಸರ್ವಿಸ್ ನಲ್ಲಿ ಮೃತದೇಹ ಇಡಲು ಆಸ್ಪತ್ರೆ ವ್ಯವಸ್ಥೆ ಮಾಡಿತ್ತು. ಆದರೆ ಇದೀಗ ಬಾಲಕ ಮೃತಪಟ್ಟು ನಾಲ್ಕು ದಿನ ಆದರೂ ಕೊರೊನಾ ಟೆಸ್ಟ್ ರಿಪೋರ್ಟ್ ಬಂದಿಲ್ಲ.
Advertisement
ಇತ್ತ ಮೃತದೇಹವನ್ನು ಫ್ರೀಜರ್ ನಲ್ಲಿ ಇಟ್ಕೋಳ್ಳೋಕೆ ಕುಮಾರ್ ಅಂಬುಲೆನ್ಸ್ ಸರ್ವಿಸ್ ದಿನಕ್ಕೆ 4 ಸಾವಿರ ಚಾರ್ಜ್ ಮಾಡುತ್ತಿದೆ. ಟೆಸ್ಟ್ ರಿಪೋರ್ಟ್ ಇಲ್ಲದೇ, ಸತ್ತಿರೋ ಬಾಡಿಗೆ ದಿನಕ್ಕೆ ನಾಲ್ಕು ಸಾವಿರ ಹಣ ಕಟ್ಟಿಕೊಂಡು ಕುಟುಂಬ ಕಣ್ಣೀರು ಹಾಕುತ್ತಿದೆ.