-ಲಾಕ್ಡೌನ್ನಿಂದಾಗಿ ವ್ಯಾಪಾರದಲ್ಲಿ ನಷ್ಟ
ಮುಂಬೈ: ಲಾಕ್ಡೌನ್ ನಿಂದಾಗಿ ನಷ್ಟದಲ್ಲಿದ್ದ ವ್ಯವಹಾರದ ಚೇತರಿಕೆಗಾಗಿ ವ್ಯಾಪಾರಿಗಳಿಬ್ಬರು ವಾಹನಗಳ ಚಕ್ರ ಕದ್ದು ಜೈಲು ಸೇರಿರುವ ಘಟನೆ ಮಹಾರಾಷ್ಟ್ರದ ನಾಗ್ಪುರಲ್ಲಿ ನಡೆದಿದೆ.
ಮೊನಿಶ್ ದದ್ಲಾನಿ (27) ಮತ್ತು ವಿವೇಕ್ ಗುಮ್ನಾನಿ ಬಂಧಿತ ಆರೋಪಿಗಳು. ಬಂಧಿತರದಿಂದ ಮೂರು ಲಕ್ಷ ರೂ. ಮೌಲ್ಯದ 10 ಚಕ್ರಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
Advertisement
Advertisement
ಮೊನಿಶ್ ದದ್ಲಾನಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ರೆ, ವಿವೇಕ್ ಟೂರ್ ಗಳನ್ನು ಅರೆಂಜ್ ಮಾಡುತ್ತಿದ್ದ. ಕೊರೊನಾ ಲಾಕ್ಡೌನ್ ನಿಂದಾಗಿ ಇಬ್ಬರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ಗಾಡಿಯ ಚಕ್ರಗಳನ್ನು ಕದ್ದು ಸಾಲದಿಂದ ಮುಕ್ತರಾಗಲು ಪ್ಲಾನ್ ಮಾಡಿಕೊಂಡಿದ್ದರು. ಇದೇ ಹಣದಿಂದ ವ್ಯವಹಾರ ಮಾಡಲು ಸಿದ್ಧತೆ ನಡೆಸಿದ್ದರು ಎಂದು ಸಾದರ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಬನ್ಸೊಡೆ ಹೇಳಿದ್ದಾರೆ.