ಗಾಂಧಿನಗರ: ಗುಜರಾತ್ ಸರ್ಕಾರ ಕೋವಿಡ್ ಚಿಕಿತ್ಸೆ ನೀಡುವಲ್ಲಿ ತೊಡಗಿಸಿಕೊಂಡಿರುವ ವೈದ್ಯರಿಗೆ ಮಾಸಿಕವಾಗಿ 5,000 ರೂ. ಪ್ರೋತ್ಸಾಹ ಭತ್ಯೆ ನೀಡುವುದಾಗಿ ಘೋಷಿಸಿದೆ.
Advertisement
ಕೋವಿಡ್-19 ಚಿಕಿತ್ಸೆ ನೀಡುವ ಕಾರ್ಯದಲ್ಲಿ ನಿರತರಾಗಿರುವ ತರಬೇತುದಾರ ಹಾಗೂ ವೈದ್ಯರಿಗೆ 2021ರ ಜೂನ್ 30ರವರೆಗೂ ತಿಂಗಳಿಗೆ 5,000ರೂ.ವನ್ನು ಪ್ರೋತ್ಸಾಹ ಭತ್ಯೆ ನೀಡುವುದಾಗಿ ಗುಜರಾತ್ ಮುಖ್ಯಮಂತ್ರಿ ಕಚೇರಿ ಆದೇಶ ಹೊರಡಿಸಿದೆ.
Advertisement
Gujarat Govt announces special Covid incentive allowance of Rs.5000 per month in addition to the regular stipend for interns and resident doctors engaged in the noble task of treating COVID-19 patients in the State till June 30, 2021.
— CMO Gujarat (@CMOGuj) April 16, 2021
Advertisement
ಶುಕ್ರವಾರ ಗುಜರಾತ್ನಲ್ಲಿ 8,920 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿಯವರೆಗೂ 3,84,688 ಕೊರೊನಾ ಪ್ರಕರಣಗಳು ದಾಖಲಾಗಿದೆ. ಸೋಂಕಿನಿಂದ 94 ಮಂದಿ ಮೃತಪಟ್ಟಿದ್ದಾರೆ ಎಂದು ಗುಜರಾತ್ ಆರೋಗ್ಯ ಇಲಾಖೆ ತಿಳಿಸಿದೆ.
Advertisement
ದಾಖಲೆ ಬರೆದ ಕೊರೊನಾ?:
ದೇಶದಲ್ಲಿ ಮರಣಮಾರಿ ಕೊರೊನಾ ವೈರಸ್ ತನ್ನ ಎಲ್ಲ ದಾಖಲೆಗಳನ್ನು ಉಡೀಸ್ ಮಾಡಿದೆ. 24 ಗಂಟೆಯಲ್ಲಿ 2,34,692 ಜನಕ್ಕೆ ಸೋಂಕು ತಗುಲಿದ್ದು, 1,341 ಸೋಂಕಿತರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಛತ್ತೀಸ್ಗಢ ಮತ್ತು ಕರ್ನಾಟಕ ಹೊಸ ಕೊರೊನಾ ಪ್ರಕರಣಗಳಲ್ಲಿ ಮುನ್ನಲೆಯಲ್ಲಿವೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 1,45,26,609ಕ್ಕೆ ಏರಿಕೆಯಾಗಿದ್ದು, 16,79,740 ಸಕ್ರಿಯ ಪ್ರಕರಣಗಳಿವೆ. ಸಾವನ್ನಪ್ಪಿದವರ ಸಂಖ್ಯೆ 1,75,649ಕ್ಕೆ ಏರಿಕೆಯಾಗಿದೆ. ಇದುವರೆಗೂ 11,99,37,641 ಜನ ಕೊರೊನಾ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಅತ್ಯಧಿಕ 63,7298 ಕೊರೊನಾ ಪ್ರಕರಣಗಳು ವರದಿಯಾಗಿವೆ. ಉತ್ತರ ಪ್ರದೇಶ 27,360, ದೆಹಲಿ 19,486, ಛತ್ತೀಸ್ಗಢ 14,912 ಮತ್ತು ಕರ್ನಾಟಕದಲ್ಲಿ 14,859 ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದ ಒಟ್ಟು ಪ್ರಕರಣ ಪೈಕಿ ಮಹಾರಾಷ್ಟ್ರದಲ್ಲಿಯೇ ಶೇ.27.15ರಷ್ಟು ವರದಿಯಾಗಿವೆ. ಐದು ರಾಜ್ಯಗಳಿಂದಲೇ ಶೇ.59.79 ಕೊರೊವಾ ಪ್ರಕರಣಗಳು ದಾಖಲಾಗಿವೆ.