ಓಪನರ್ ಬಳಸದೇ ಬಿಯರ್ ಬಾಟಲ್ನನ್ನು ಹೇಗೆ ತೆಗೆಯಬೇಕೆಂಬುವುದನ್ನು ವ್ಯಕ್ತಿಯೊಬ್ಬ ತನ್ನ ಚಾಣಾಕ್ಷತನದಿಂದ ತೋರಿಸಿದ್ದಾನೆ. ಸದ್ಯ ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.
Advertisement
ಸಾಮಾನ್ಯವಾಗಿ ಹಲ್ಲಿನ ಸಹಾಯದಿಂದ ಅಥವಾ ಮೇಜಿನ ತುದಿಯ ಭಾಗದಿಂದ ಬಿಯರ್ ಬಾಟಲ್ನ ಮುಚ್ಚಳವನ್ನು ತೆರೆಯುವುದನ್ನು ನೋಡಿರುತ್ತೇವೆ. ಆದರೆ ಈ ವ್ಯಕ್ತಿ ತನ್ನ ಶೂ ಲೇಸ್ನನ್ನು ಬಳಸಿಕೊಂಡು ಬಿಯರ್ ಬಾಟಲ್ ಮುಚ್ಚಳವನ್ನು ಓಪನ್ ಮಾಡಿದ್ದಾನೆ. ಬಿಯರ್ ಪ್ರಿಯರು ಬಾಟಲ್ ಮುಚ್ಚಳ ತೆಗೆಯಲು ಈ ಟ್ರಿಕ್ಸ್ನನ್ನು ಬಳಸಬಹುದಾಗಿದೆ. ಈ ವೀಡಿಯೋವನ್ನು ‘ಹೋಲ್ಡ್ ಮೈ ಬಿಯರ್’ ಎಂಬ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಇಚ್ಛಾ ಶಕ್ತಿ ಹೊಂದಿದ್ದರೆ, ಒಂದು ದಾರಿ ಇರುತ್ತದೆ’ ಎಂದು ಕ್ಯಾಪ್ಷನ್ ಬರೆಯಲಾಗಿದೆ.
Advertisement
Where there’s a will, there’s a way. ???????? pic.twitter.com/5OCKUICrl2
— ???? Hold My Beer ???? (@HldMyBeer) April 15, 2021
Advertisement
ವೀಡಿಯೋದಲ್ಲಿ ವ್ಯಕ್ತಿ ಮೇಜಿನ ಮೇಲೆ ಕಾಲು ಇರಿಸಿಕೊಂಡು, ಶೂ ಲೇಸ್ನನ್ನು ಬಿಯರ್ ಬಾಟಲ್ ಸುತ್ತಲೂ ಸುತ್ತುತ್ತಾನೆ. ಬಳಿಕ ಜೋರಾಗಿ ಶೂ ಲೇಸ್ನನ್ನು ಮೇಲಕ್ಕೆ ಎಳೆಯುತ್ತಾನೆ. ಆಗ ಬಾಟಲ್ ಕ್ಯಾಪ್ ಓಪನ್ ಆಗುತ್ತದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ 37,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, 600ಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಹಲವು ನೆಟ್ಟಿಗರು ಕಾಮೆಂಟ್ ನೀಡುವ ಮೂಲಕ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.