– ಮನೆಯಿಂದ ಒಂಟಿಯಾಗಿ ಹೊರ ಹೋದ ಯುವತಿ ನಾಪತ್ತೆ
– ವಿಚಾರಣೆಗೆ ಹಿಂದೇಟು ಹಾಕ್ತಿರೋದೇಕೆ ಖಾಕಿ?
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ವೀಡಿಯೋದಲ್ಲಿದ್ದ ಯುವತಿ ಮಾರ್ಚ್ 2ರಂದು ಬ್ಯಾಗ್ ಹಿಡಿದು ಮನೆಯಿಂದ ಹೊರ ಹೋಗಿರುವ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ಲಭ್ಯವಾಗಿದೆ. ಮಾರ್ಚ್ 02ರಂದು ರಾತ್ರಿ 9.30ಕ್ಕೆ ಬ್ಯಾಗ್ ಹಿಡಿದು ಹೊರ ಬಂದ ಯುವತಿ ನಡೆದುಕೊಂಡು ಮುಖ್ಯ ರಸ್ತೆಗೆ ತೆರಳಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
Advertisement
ವೀಡಿಯೋ ರಿಲೀಸ್ ಬಳಿಕ ಸುಮಾರು ನಾಲ್ಕೂವರೆ ಗಂಟೆ ಯುವತಿ ಮೊಬೈಲ್ ಆ್ಯಕ್ಟಿವ್ ಆಗಿತ್ತು. ಮನೆಯಿಂದ ಹೊರ ಹೋಗುವ ಮೊದಲೇ ಮೊಬೈಲ್ ಸ್ವಿಚ್ಛ್ ಆಫ್ ಆಗಿದೆ. ನಂತರ ಯುವತಿ ಮೊಬೈಲ್ ಆನ್ ಸಹ ಮಾಡಿಲ್ಲ. ಹೊಸ ಸಿಮ್ ಬಳಸಿಲ್ಲ. ಹಳೆಯ ಮೊಬೈಲ್ ಮತ್ತು ಸಿಮ್ ನ್ನು ಯುವತಿ ಡಿಆಕ್ಟೀವೇಟ್ ಮಾಡಿರೋ ಮಾಹಿತಿ ಖಾಕಿಗೆ ತಲುಪಿರುವ ಟೆಕ್ನಿಕಲ್ ರಿಪೋರ್ಟ್ ನಲ್ಲಿದೆ ಎಂದು ತಿಳಿದು ಬಂದಿದೆ.
Advertisement
Advertisement
ವೀಡಿಯೋ ರಿಲೀಸ್ ನಂತ್ರ ಮತ್ತು ಮನೆಯಿಂದ ಹೊರ ಹೋಗುವ ಮುನ್ನ ಯುವತಿ ಹಲವರನ್ನ ಸಂಪರ್ಕಿಸಿದ್ದಾಳೆ. ಮೊಬೈಲ್ ಸ್ವಿಚ್ಛ್ ಆಫ್ ಮಾಡುವ ಮುನ್ನ ಯುವತಿ ಸಂಪರ್ಕಿಸೋರರ ಮಾಹಿತಿಯನ್ನ ಪೊಲೀಸರು ಕೆಲ ಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮನೆಯಿಂದ ಹೊರ ಬಂದಿರೋ ಯುವತಿ ಹೊಸ ಮೊಬೈಲ್ ಖರೀದಿ ಮಾಡಿರೋ ಸಾಧ್ಯತೆಗಳಿವೆ.
Advertisement
ವಿಚಾರಣೆಗೆ ಖಾಕಿ ಹಿಂದೇಟು?: ಪೊಲೀಸರು ಯುವತಿ ಹೆಸರು ಮತ್ತು ವಿಳಾಸವನ್ನ ಪತ್ತೆ ಹೆಚ್ಚಿದ್ದಾರೆ. ಅಜ್ಞಾತ ಸ್ಥಳದಲ್ಲಿರುವ ಯುವತಿಯ ಮಾಹಿತಿಯೂ ಪೊಲೀಸರ ಬಳಿ ಇದೆ ಎನ್ನಲಾಗ್ತಿದೆ. ಸಿಡಿ ರಿಲೀಸ್ ಗೊಂಡು ಇಷ್ಟು ದಿನವಾದ್ರೂ ಪೊಲೀಸರು ಮಾತ್ರ ಯುವತಿಯ ವಿಚಾರಣೆಗೆ ಹಿಂದೇಟು ಹಾಕುತ್ತಿರುವ ಮಾಹಿತಿ ಲಭ್ಯವಾಗಿದೆ.
ಯುವತಿಯ ಮಾಹಿತಿಯನ್ನು ಕಲೆ ಹಾಕಿರೋ ಪೊಲೀಸರು ಪ್ರಾಥಮಿಕ ತನಿಖಾ ವರದಿಯನ್ನ ಸರ್ಕಾರಕ್ಕೆ ಸಲ್ಲಿಸಿದೆ. ಯುವತಿಯ ವಿಚಾರಣೆಗೆ ಸರ್ಕಾರದ ಅನುಮತಿ ಕೇಳಿರುವ ಪೊಲೀಸರು ಆದೇಶಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಸಿಡಿ ಪ್ರಕರಣದಲ್ಲಿ ಸರ್ಕಾರಕ್ಕೆ ಸ್ಪಷ್ಟತೆ ಸಿಗದ ಹಿನ್ನೆಲೆ ಯಾವುದೇ ಆದೇಶ ನೀಡಿಲ್ಲ. ಈ ಹಿನ್ನೆಲೆ ಯುವತಿ ವಿಚಾರಣೆಗೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲ ಎನ್ನಲಾಗಿದೆ.