KarnatakaLatestMain PostUttara Kannada
ವೀಕೆಂಡ್, ಕ್ರಿಸ್ ಮಸ್ ಮಸ್ತಿಗೆ ಕರಾವಳಿಯ ಕಡಲತೀರಕ್ಕೆ ಲಗ್ಗೆ ಇಟ್ಟ ಪ್ರವಾಸಿಗರು

– ಕಡಲತೀರಗಳು ಪ್ರವಾಸಿಗರಿಂದ ಹೌಸ್ ಫುಲ್!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಕಡಲತೀರಗಳು ಪ್ರವಾಸಿಗರಿಂದ ಹೌಸ್ ಫುಲ್ ಆಗಿದ್ದು, ವೀಕೆಂಡ್ ಹಾಗೂ ಕ್ರಿಸ್‍ಮಸ್ ಆಚರಣೆಗೆ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ರಾಜ್ಯ, ಹೊರ ರಾಜ್ಯದಿಂದ ಸಾವಿರಾರು ಪ್ರವಾಸಿಗರು ಕಡಲತೀರಕ್ಕೆ ಮುತ್ತಿಗೆ ಹಾಕಿದ್ದು, ಕರೊನಾ ಭಯ ಲೆಕ್ಕಿಸದೆ ಕುಟುಂಬದೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದಾರೆ. ವೀಕೆಂಡ್ ಜೊತೆ ಸಾಲು ಸಾಲು ರಜೆ, ಕ್ರಿಸ್‍ಮಸ್ ಹಬ್ಬದ ಹಿನ್ನೆಲೆ ಸಾವಿರಾರು ಜನ ಆಗಮಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಡಲತೀರದಲ್ಲಿ ಸಾವಿರಾರು ಪ್ರವಾಸಿಗರ ದಂಡೇ ಹರಿದುಬಂದಿದೆ.
ಜಿಲ್ಲೆಯ ಗೋಕರ್ಣ, ಮುರಡೇಶ್ವರ, ಕಾರವಾರ ಕಡಲ ತೀರದಲ್ಲಿ ಪ್ರವಾಸಿಗರು ತುಂಬಿ ತುಳುಕುತಿದ್ದು, ಕರೊನಾ ಭಯ ಬಿಟ್ಟು ಸಮುದ್ರದ ನೀರಿಗೆ ಮೈಯೊಡ್ಡಿ ಎಂಜಾಯ್ ಮಾಡಿದರು. ಕರೊನಾ ಇದ್ದರೇನು ನಮಗೆ ಭಯವಿಲ್ಲ, ನಾವು ಒತ್ತಡ ದೂರ ಮಾಡಲು ಇಲ್ಲಿಗೆ ಬಂದಿದ್ದೇವೆ ಎಂದು ಸಮುದ್ರದಲ್ಲಿ ಮಿಂದೇಳುತ್ತಿದ್ದಾರೆ. ಕುಟುಂಬದೊಂದಿಗೆ ಮೋಜು, ಮಸ್ತಿ ಮಾಡಿದ್ದಾರೆ.