ನವದೆಹಲಿ: ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ವಿದೇಶದಿಂದ ಹಣ ಬರುತ್ತಿದೆ, ಭಾರತದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಇದೆ. ಈ ಆರೋಪದ ನಡುವೆ ವಿಶ್ವಮಟ್ಟದಲ್ಲಿ ಭಾರತದ ವಿರುದ್ಧ ಪ್ರತಿಭಟನೆ ಹೇಗೆ ನಡೆಸಬೇಕೆಂಬ ಮಾಹಿತಿಗಳಿರುವ ಡಾಕ್ಯುಮೆಂಟ್ನ್ನು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಟ್ವೀಟ್ ಮಾಡಿ ಡಿಲೀಟ್ ಮಾಡಿದ್ದಾರೆ.
Advertisement
ಗ್ರೇಟಾ ಥನ್ಬರ್ಗ್ ಆರಂಭದಲ್ಲಿ ಭಾರತದ ರೈತರ ಪರ ಇರಬೇಕು ಎಂದು ಹೇಳಿ ದೆಹಲಿ ಗಡಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಿದ್ದ ಸುದ್ದಿಯನ್ನು ಟ್ವೀಟ್ ಮಾಡಿದ್ದರು. ಇದಾದ ಬಳಿಕ ರೈತರ ಹೋರಾಟದ ವಿಚಾರವನ್ನು ವಿಶ್ವಮಟ್ಟದಲ್ಲಿ ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುವ ರಹಸ್ಯ ಗೂಗಲ್ ಡಾಕ್ಯುಮೆಂಟ್ ಅನ್ನು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಮಾಡಿದ ಕೆಲ ಗಂಟೆಯಲ್ಲಿ ಡಿಲೀಟ್ ಮಾಡಿದ್ದಾರೆ.
Advertisement
Advertisement
ಗೂಗಲ್ ಡಾಕ್ಯುಮೆಂಟ್ನಲ್ಲಿ ಏನಿತ್ತು?
ವಿಶ್ವದ ಮಾನವ ಇತಿಹಾಸದಲ್ಲಿ ನಡೆಯುವ ಅತಿದೊಡ್ಡ ಪ್ರತಿಭಟನೆಯಲ್ಲಿ ನೀವು ಭಾಗಿಯಾಗುತ್ತಿರಾ ಎಂಬ ಪ್ರಶ್ನೆಯೊಂದಿಗೆ ಈ ಡಾಕ್ಯುಮೆಂಟ್ ಆರಂಭವಾಗುತ್ತದೆ.
Advertisement
ಭಾರತವನ್ನು ಬಿಜೆಪಿ- ಆರ್ಎಸ್ಎಸ್ ಫ್ಯಾಸಿಸ್ಟ್ ಪಕ್ಷ ಆಳುತ್ತಿದೆ ಎಂದು ಹೇಳಿ ಜನವರಿ 21 ರಿಂದ ಫೆಬ್ರವರಿ 26ವರವರೆಗೆ ಎಲ್ಲಿ, ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಾಗಿತ್ತು.
ಆರಂಭದಲ್ಲಿ ನೀವು ಎಲ್ಲಿದ್ದೀರೋ ಅಲ್ಲಿ ಪ್ರತಿಭಟನೆ ನಡೆಸಬೇಕು ಬಳಿಕ ಜ.23 ರಿಂದ ಟ್ವಿಟ್ಟರ್ನಲ್ಲಿ ಪ್ರತಿಭಟಿಸಬೇಕು. ಟ್ವೀಟ್ ಮಾಡುವಾಗ ಭಾರತದ ಪ್ರಧಾನಿ, ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಹಣಕಾಸು ನಿಧಿ, ವಿಶ್ವ ಬ್ಯಾಂಕ್ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಬೇಕು.
ಜ.26 ರಂದು ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕು. ಬಳಿಕ ನಿಮ್ಮ ಸರ್ಕಾರದ ಪ್ರತಿನಿಧಿಗಳಿಗೆ ಮೇಲ್ ಮಾಡಿ ಭಾರತದ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಬೇಕು. ಭಾರತ ಸರ್ಕಾರ ನಡೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಬೇಕು.
ಗ್ರೇಟ ಥನ್ಬರ್ಗ್ ಈ ರಹಸ್ಯ ದಾಖಲೆಗಳ ಮಾಹಿತಿನ್ನು ಟ್ವೀಟ್ ಮಾಡಿದ್ದ ಬಳಿಕ ಡಿಲೀಟ್ ಮಾಡಿದ್ದು ಯಾಕೆ ಎಂಬ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ #GretaThunbergExposed ಟ್ರೆಂಡಿಗ್ ಟಾಪಿಕ್ ಆಗಿದೆ. ಇದನ್ನೂ ಓದಿ: #IndiaAgainstPropaganda -ರಾಷ್ಟ್ರಕ್ಕಾಗಿ ನಾವೆಲ್ಲ ಒಂದಾಗೋಣ ಎಂದ ಸಚಿನ್
ವಿದೇಶಿ ಸೆಲೆಬ್ರಿಟಿಗಳು ರೈತರ ಪರ ಮಾತನಾಡುತ್ತಿದ್ದಂತೆ ವಿದೇಶಾಂಗ ಸಚಿವಾಲಯ ಖಾರವಾಗಿ ಪ್ರತಿಕ್ರಿಯೆ ವ್ಯಕ್ತಪಡಿಸಿದೆ. ಕೆಲ ಸ್ವಾರ್ಥಿಗಳು ಹೋರಾಟದ ಹೆಸರಲ್ಲಿ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಂಬಲ ಗಿಟ್ಟಿಸಿಕೊಳ್ಳಲು ನೋಡುತ್ತಿದ್ದಾರೆ. ಇವರ ಸುಳ್ಳುಗಳಿಂದ ವಿದೇಶಗಳಲ್ಲಿ ಗಾಂಧಿ ಪ್ರತಿಮೆಯನ್ನು ಅಪವಿತ್ರ ಮಾಡುವ ಕೆಲಸ ನಡೆದಿದೆ. ಇದು ಭಾರತಕ್ಕೆ ಅತೀವ ನೋವು ತಂದಿದೆ ಎಂದಿದೆ. ಅಲ್ಲದೇ, ಇದಕ್ಕೆ #IndiaAgainstPropaganda #IndiaTogether ಹೆಸರಿನ ಹ್ಯಾಷ್ಟ್ಯಾಗನ್ನು ವಿದೇಶಾಂಗ ಸಚಿವಾಲಯ ಜೋಡಿಸಿದೆ.
This dumbo kid made the biggest blunder for left pimps… attached the confidential document of international plan to systematically unstable India … sab Pappu ek he team mein hain ha ha ha … bunch of jokers https://t.co/6svqedfv3R
— Kangana Ranaut (@KanganaTeam) February 3, 2021