ಹಾಸನ: ಎಂಎಲ್ಸಿ ಹೆಚ್.ವಿಶ್ವನಾಥ್ ಹೊಸಬರು. ನಮ್ಮ ಪಾರ್ಟಿಯ ಆಚಾರ ವಿಚಾರ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರು ನಮ್ಮ ಪಕ್ಷವನ್ನು ತಿಳಿದುಕೊಳ್ಳಲು ಇನ್ನು ಸಾಕಷ್ಟು ಸಮಯ ಬೇಕು ಎಂದು ಹಾಸನ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಅವರು ಪಾರ್ಟಿಗೆ ಹೊಸಬರಿದ್ದಾರೆ. ಅವರಿಗೆ ಇನ್ನು ಪಾರ್ಟಿಯ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವರು ಹಿರಿಯರಿದ್ದಾರೆ. ಅವರ ಅನುಭವನ್ನು ಪಕ್ಷ ಬಳಿಸಿಕೊಳ್ಳಲಿದೆ. ಪಕ್ಷದ ಸಿದ್ದಾಂತ ವಿಚಾರಗಳನ್ನು ಪಕ್ಷದ ಹಿರಿಯ ನಾಯಕರು ಮಾತನಾಡುತ್ತಾರೆ. ಆದ್ರೆ ವಿಶ್ವನಾಥ್ ರವರು ನಮ್ಮ ಪಕ್ಷದ ಆಚಾರ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಹಿರಿಯರಾಗಿ ಪಕ್ಷದ ಆಂತರಿಕ ವಿಚಾರದ ಬಗ್ಗೆ ಮಾತನಾಡಬಾರದು. ಅದು ವಿಶ್ವನಾಥ್ ಆದ್ರೂ ಸರಿ ಅಥವಾ ಪ್ರೀತಂ ಗೌಡನಾದ್ರು ಸರಿ. ಆದ್ರೆ ಇಂತಹ ಹೇಳಿಕೆ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ ಎಂದು ಮಾತಿನ ಮೂಲಕವೇ ವಿಶ್ವನಾಥ್ ಗೆ ಕುಟುಕಿದ್ರು.
Advertisement
Advertisement
ಮೊದಲ ಬಾರಿ ಶಾಸಕನಾಗಿರುವ ನಾನು ನಿನ್ನೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನ ಭೇಟಿಯಾಗಿ ಪಕ್ಷ ಸಂಘಟನೆ ಹೇಗೆ ಮಾಡಬಹುದೆಂಬುದರ ಬಗ್ಗೆ ನಾನೇ ಸಲಹೆ ಪಡೆದುಕೊಂಡಿದ್ದೇನೆ. ಪಕ್ಷ ಸಂಘಟನೆ ಬಗ್ಗೆ ಮಾತನಾಡಿರುವೆ. ಪಕ್ಷದ ಹಿರಿಯರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದಿದ್ದಾರೆ. ಹಿರಿಯರ ಮಾತನ್ನು ಪರಿಪಾಲನೆ ಮಾಡುವುದು ನಮ್ಮ ಧರ್ಮ, ಅದಕ್ಕೆ ನಮ್ಮ ಸಹಮತವಿದೆ. ಜೊತೆಗೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿ ಭೇಟಿ ಮಾಡಿದ್ದೆ. ವಿಮಾನ ನಿಲ್ದಾಣದ ವಿಚಾರವಾಗಿಯೂ ಮಾತನಾಡಿದ್ದು, ವಿಮಾನ ನಿಲ್ದಾಣದ ವಿಚಾರವಾಗಿಯೂ ಮಾತನಾಡಿರುವೆ. ಅಭಿವೃದ್ಧಿ ಬಿಟ್ಟು ನಾನು ಮತ್ತೇನು ಮಾತನಾಡಿಲ್ಲ ಎಂದರು.
Advertisement
Advertisement
ಹೆಚ್.ವಿಶ್ವನಾಥ್ ಹೇಳಿದ್ದೇನು?: ನನ್ನಂತ ಹುಚ್ಚನ ತ್ಯಾಗದಿಂದ ಬಿಡಿಎ ಅಧ್ಯಕ್ಷನಾಗಿ ಎಸ್.ಆರ್.ವಿಶ್ವನಾಥ್ ದೋಚುತ್ತಿದ್ದಾನೆ. ಕೊರೊನಾ ಮೊದಲ ಅಲೆಯಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಾಕಿದ ಹಾಕಿದ 10 ಸಾವಿರ ಬೆಡ್ ಫ್ಯಾನ್ ಎಲ್ಲಾ ಏನಾಯ್ತು ವಿಶ್ವನಾಥ್ ಎಂದು ಪ್ರಶ್ನಿಸಿದ್ದಾರೆ.
ನೀರಾವರಿ ಯೋಜನೆಯಲ್ಲಿ ಭ್ರಷ್ಟಾಚಾರವಾಗಿದೆ. 20 ಸಾವಿರ ಕೋಟಿಯ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಹಣಕಾಸು ಇಲಾಖೆ ಹಾಗೂ ಯಾವುದೇ ಬೋರ್ಡ್ ಕ್ಲಿಯರೆನ್ಸ್ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಸಿಎಂ ವಿರುದ್ಧ ಸಿಪಿವೈ, ಬೆಲ್ಲದ್, ಯತ್ನಾಳ್ ಚಾರ್ಜ್ಶೀಟ್ ಏನು?
ವಿಜಯೇಂದ್ರ ಭ್ರಷ್ಟಾಚಾರದ ಬಗ್ಗೆ ಎಲ್ಲಾ ಸಚಿವರು ಮಾತನಾಡುತ್ತಿದ್ದಾರೆ. ಯಾವ ಸಚಿವರು ಸಮಾಧಾನದಿಂದ ಇದ್ದಾರೆ ಹೇಳಿ? ಯಡಿಯೂರಪ್ಪ ಮಕ್ಕಳಿಂದ ಮೊದಲು ಜೈಲಿಗೆ ಹೋಗಿದ್ದರು ಎರಡನೇ ಬಾರಿಗೆ ಹೀಗಾಗ ಬಾರದು ಅನ್ನೋದು ನಮ್ಮ ಆಶಯ. ಯಡಿಯೂರಪ್ಪನವರದು ಇ.ಡಿಯಲ್ಲಿ ಕೇಸಿಲ್ವಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್ ದ್ರಾಕ್ಷಿ ಹುಳಿ ಎನ್ನುವ ನರಿ ಜಾಯಮಾನಕ್ಕೆ ಸೇರಿದವರು: ಹೆಚ್ಡಿಕೆ