– ಬಿಜೆಪಿ ಉಸ್ತುವಾರಿಗಳ ವಿರುದ್ಧ ವಾಗ್ದಾಳಿ
ಮಂಡ್ಯ: ನರಿಗೆ ದ್ರಾಕ್ಷಿ ಎಟುಕದೇ ಇರುವಾಗ ದ್ರಾಕ್ಷಿ ಹುಳಿ ಎನ್ನುತ್ತದೆ. ಆ ಜಾಯಮಾನಕ್ಕೆ ವಿಶ್ವನಾಥ್ ಸೇರಿದ್ದಾರೆ ಎನ್ನುವ ಮೂಲಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಮಾಜಿ ಸಚಿವ ವಿಶ್ವನಾಥ್ಗೆ ಟಾಂಗ್ ನೀಡಿದ್ದಾರೆ.
ಮಂಡ್ಯ ಜಿಲ್ಲೆಯ ಕೆಆರ್ಪೇಟೆಯಲ್ಲಿ ಜೆಡಿಎಸ್ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ವಾರಿಯರ್ಸ್ಗೆ ಫುಡ್ಕಿಟ್ ವಿತರಣೆ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೆಚ್.ವಿಶ್ವನಾಥ್ ವಿರುದ್ಧ ಹರಿಹಾಯ್ದರು. ವಿಶ್ವನಾಥ್ ಯಾವ ಪಕ್ಷದಲ್ಲೂ ಸರಿಯಾಗಿ ಇರೋಕೆ ಆಗಲ್ಲ. ಅವರಿಗೆ ಬೇಕಿರೋದು ಅಧಿಕಾರ ಹಾಗೂ ದುಡ್ಡು. ಅವರಿಗೆ ಅಧಿಕಾರ, ದುಡ್ಡು ಸಿಗದೇ ಇರುವಾಗ ಎಲ್ಲರನ್ನೂ ಬೈಕೊಂಡು ಓಡಾಡುವ ಬುದ್ಧಿ ಅವರದ್ದು. ನರಿಗೆ ದ್ರಾಕ್ಷಿ ಎಟಕದೇ ಇರುವಾಗ ಹುಳಿ ಎನ್ನುತ್ತದೆ ಅಲ್ವಾ, ಆ ಜಾಯಮಾನಕ್ಕೆ ವಿಶ್ವನಾಥ್ ಸೇರಿದ್ದಾರೆ ಎಂದು ಕಿಡಿಕಾರಿದರು.
Advertisement
Advertisement
ಇದೇ ವೇಳೆ ಜೆಡಿಎಸ್ನಲ್ಲಿ ಕುಟುಂಬ ರಾಜಕೀಯ ಎನ್ನುವ ವಿಶ್ವನಾಥ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಹೆಚ್ಡಿಕೆ, ವಿಶ್ವನಾಥ್ಗೆ ಜೆಡಿಎಸ್ ಅಭ್ಯರ್ಥಿ ಆಗುವ ಮುನ್ನ ಕುಟುಂಬ ರಾಜಕೀಯ ಇದೆ ಎಂದು ಗೊತ್ತಿರಲಿಲ್ವಾ. ಇಡೀ ಜೆಡಿಎಸ್ ಪಕ್ಷವೇ ದೇವೇಗೌಡರ ಕುಟುಂಬ. ಇದು ನಾವು ಅಂದುಕೊಂಡಿರುವ ಕುಟುಂಬ, ವಿಶ್ವನಾಥ್ ಅಂದುಕೊಂಡಿರುವ ಕುಟುಂಬವೇ ಬೇರೆ. ವಿಶ್ವನಾಥ್ ಮಗ ಜಿ.ಪಂ. ಸದಸ್ಯ ಅಲ್ವಾ, ವಿಶ್ವನಾಥ್ ಮಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಅಲ್ವಾ. ಅದು ಕುಟಂಬ ರಾಜಕೀಯ ಅಲ್ವಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಾಯಕತ್ವವೇ ಇಲ್ಲದ ಸರ್ಕಾರ ವಿಸರ್ಜಿಸಿ: ಕುಮಾರಸ್ವಾಮಿ ಆಗ್ರಹ
Advertisement
Advertisement
ಉಸ್ತುವಾರಿಗಳ ವಿರುದ್ಧ ಕಿಡಿ:
ರಾಷ್ಟ್ರೀಯ ಪಕ್ಷಗಳ ಉಸ್ತುವಾರಿಗಳು ರಾಜ್ಯಕ್ಕೆ ಬರುವುದು, ನಮ್ಮ ರಾಜ್ಯ ಸಂಪತ್ತನ್ನು ಲೂಟಿ ಮಾಡಿರುವ ಒಂದು ಭಾಗವನ್ನು ತೆಗೆದುಕೊಂಡು ಹೋಗುವುದಕ್ಕೆ ಹೊರತು, ಇಲ್ಲಿನ ಸಮಸ್ಯೆಗಳನ್ನು ಸರಿ ಮಾಡಲು ಅಲ್ಲ. ರಾಷ್ಟ್ರೀಯ ಪಕ್ಷಗಳು ಉಸ್ತುವಾರಿಗಳನ್ನು ನೇಮಿಸುವುದು ರಾಜ್ಯದ ಸಮಸ್ಯೆಗಳನ್ನು ನಿವಾರಣೆ ಅಲ್ಲ. ರಾಷ್ಟ್ರೀಯ ಪಕ್ಷಗಳು ನಮ್ಮ ರಾಜ್ಯದ ಸಂಪತ್ತನ್ನು ಲೂಟಿ ಮಾಡಿರುವ ಒಂದು ಭಾಗವನ್ನು ತೆಗೆದುಕೊಂಡು ಹೋಗಲು ರಾಜ್ಯಕ್ಕೆ ಬರುತ್ತಾರೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನನ್ನ ಫೋನ್ ಕದ್ದಾಲಿಕೆಯಾಗಿದೆ, ಜೈಲಿನಿಂದ ಕಾಲ್ ಬರುತ್ತೆ – ಬೆಲ್ಲದ್
ಅರುಣ್ ಸಿಂಗ್ ಅವರು ರಾಜ್ಯಕ್ಕೆ ಬಂದಿರೋದು ಇಲ್ಲಿನ ಸಮಸ್ಯೆಗಳನ್ನು ನಿವಾರಣೆ ಮಾಡಲು ಅಲ್ಲ. ಇಲ್ಲಿನ ಸಮಸ್ಯೆ ಬಗೆಹರಿಸುವುದು ಅವರಿಗೆ ಬೇಕಾಗಿಲ್ಲ. ಇಲ್ಲಿ ಸಮಸ್ಯೆ ಹೆಚ್ಚಾದಷ್ಟು ಅವರಿಗೆ ಕಾಸು ಜಾಸ್ತಿ ಬರುತ್ತದೆ. ನಮ್ಮ ರಾಜ್ಯದ ಸಂಪತ್ತು ಲೂಟಿ ಮಾಡಲು ಕಾಂಗ್ರೆಸ್ ಬಿಜೆಪಿ ಹೈಕಮಾಂಡ್ ಪ್ರೋತ್ಸಾಹ ಮಾಡುತ್ತಿವೆ. ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕು, ಸ್ಥಳೀಯ ಪಕ್ಷಗಳ ಬಗ್ಗೆ ಗಮನಹರಿಸಬೇಕು ಎಂದರು.