Connect with us

Bengaluru City

ವಿಶ್ವದ ಅತೀ ಸುಂದರ ಮಹಿಳೆ ಎಂಬ ಫೀಲ್ ಮಾಡಿಸಿದಕ್ಕೆ ಧನ್ಯವಾದ: ಮಯೂರಿ

Published

on

ಬೆಂಗಳೂರು: ವಿಶ್ವದ ಅತೀ ಸುಂದರ ಮಹಿಳೆ ಎಂಬ ಫೀಲ್ ಮಾಡಿಸಿದಕ್ಕೆ ಧನ್ಯವಾದಗಳು ಎಂದು ನಟಿ ಮಯೂರಿ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

ಸುಮಾರು ಹತ್ತು ವರ್ಷದಿಂದ ಪ್ರೀತಿ ಮಾಡಿದ್ದ ಮಯೂರಿ ಕಳೆದ ಜೂನ್ 12ರಂದು ಮದುವೆಯೆಂಬ ಆಂಕುಶದಲ್ಲಿ ಬಂಧಿಯಾಗಿದ್ದರು. ಲಾಕ್‍ಡೌನ್ ನಡುವೆ ಬೆಂಗಳೂರಿನ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದ ಮಯೂರಿ, ದಶಕಗಳ ಕಾಲ ಪ್ರೇಮಿಸಿದ್ದ ಪ್ರಿಯಕರ ಅರುಣ್ ಅವರನ್ನು ವರಿಸಿದ್ದರು.

ಮದುವೆಯ ನಂತರ ಗಂಡನ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿರುವ ಮಯೂರಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿ ಇದ್ದಾರೆ. ತಮ್ಮ ಗಂಡ ಫೋಟೋ ಮತ್ತು ಮದುವೆಯ ಫೋಟೋಗಳನ್ನು ಕೂಡ ಹಂಚಿಕೊಳ್ಳುತ್ತಿರುತ್ತಾರೆ. ಈಗ ಪತಿ ತಮಗೆ ಚುಂಬಿಸುತ್ತಿರುವ ಫೋಟೋವೊಂದನ್ನು ಹಂಚಿಕೊಂಡಿರುವ ಮಯೂರಿ, ವಿಶ್ವದ ಅತೀ ಸುಂದರ ಮಹಿಳೆ ಎಂಬ ಫೀಲ್ ಮಾಡಿಸಿದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಮದುವೆಯ ನಂತರ ಪತಿಯ ಜೊತೆ ವಿಡಿಯೋ ಮಾಡಿ ಅದನ್ನು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದ ಮಯೂರಿ, ಈ ವಿಡಿಯೋದಲ್ಲಿ ಪತಿ ದೇವರನ್ನು ಪರಿಚಯ ಮಾಡಿಕೊಟ್ಟಿದ್ದರು. ಮೊನ್ನೆಯಷ್ಟೇ ನಮ್ಮ ಮದುವೆಯಾಗಿತ್ತು. ಆ ದಿನ ನಿಮ್ಮ ಪ್ರೀತಿ ತುಂಬ ಅಪಾರವಾಗಿತ್ತು ಅದಕ್ಕೆ ಧನ್ಯವಾದಗಳು ಎಂದಿದ್ದರು. ಜೊತೆಗೆ ಅರುಣ್ ಅವರು ಮಾತನಾಡಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಹೀಗೆ ಇರಲಿ ಎಂದು ಕೇಳಿಕೊಂಡಿದ್ದರು. ವಿಡಿಯೋದಲ್ಲಿ ಮಯೂರಿ ಪತಿಯ ಕಾಲೆಳೆದಿದ್ದರು.

ಇದರ ಜೊತೆಗೆ ಮದುವೆಯಾಗಿ ಹೋದ ಮಾವನ ಮನೆಯಲ್ಲಿ ರಂಗೋಲಿ ಬಿಡುವ ವಿಡಿಯೋವನ್ನು ಶೇರ್ ಮಾಡಿರುವ ಮಯೂರಿ, ನೀವು ಪ್ರೀತಿಸುತ್ತಿರುವ ಮತ್ತು ನಿಮ್ಮನ್ನು ಪ್ರೀತಿಸುತ್ತಿರುವವ ವ್ಯಕ್ತಿಯನ್ನು ಮದುವೆಯಾಗುವುದು ಪ್ರಪಂಚದ ಅತ್ಯಂತ ಸುಂದರ ಕ್ಷಣ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರೆ, ಅವರಿಬ್ಬರ ಮಧ್ಯೆ ಪ್ರೀತಿ ಸದಾ ಇರುತ್ತದೆ ಎಂದು ಬರೆದು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿಕೊಂಡಿದ್ದರು.

ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮದುವೆಯಾಗಿದ್ದ ಮಯೂರಿ, ಮದುವೆ ವಿಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿ ಯೆಸ್ ನಾನು ಮದುವೆಯಾದೆ ಎಂದು ಬರೆದುಕೊಂಡಿದ್ದರು. ಮೊದಲು ಕಿರುತೆರೆಯ ಮೂಲಕ ನಟನೆಗೆ ಎಂಟ್ರಿಕೊಟ್ಟಿದ್ದ ಮಯೂರಿ ನಂತರ ಸಿನಿಮಾಗಳನ್ನು ಮಾಡಿ ಜನಮನ್ನಣೆ ಪಡೆದಿದ್ದರು. ನಟ ಅಜಯ್ ರಾವ್ ಅವರ ಜೊತೆ ಕೃಷ್ಣ ಲೀಲಾ ಎಂಬ ಸಿನಿಮಾದಲ್ಲಿ ಅಭಿನಯಿಸಿ ಖ್ಯಾತಿ ಗಳಿಸಿದ್ದರು.

Click to comment

Leave a Reply

Your email address will not be published. Required fields are marked *