Connect with us

Districts

ವಿರೋಧ ಪಕ್ಷದವರು ವಿರೋಧ ಮಾಡಲು ಟೀಕೆ ಮಾಡಬಾರದು: ಎಚ್‍ಡಿಕೆಗೆ ಸವದಿ ಟಾಂಗ್

Published

on

-ಲಾಕ್‍ಡೌನ್ ಇದ್ದಾಗಲೂ, ತೆಗೆದಾಗಲೂ ಕೊರೊನಾ ಹರಡಿದೆ
-ಲಾಕ್‍ಡೌನ್ ಒಂದೇ ಪರಿಹಾರ ಅಲ್ಲ

ರಾಯಚೂರು: ಜನರ ಆರೊಗ್ಯಕ್ಕಿಂತ ಆರ್ಥಿಕತೆಯೇ ಹೆಚ್ಚಾಯಿತಾ ಅನ್ನೋ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಲಕ್ಷ್ಮಣ ಸವದಿ ವಿರೋಧ ಪಕ್ಷದವರು ವಿರೋಧ ಮಾಡಲೆಂದೇ ಟೀಕೆ ಮಾಡುತ್ತಾರೆ. ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕೆಲಸ ಮಾಡಿದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕೆ ಆ ರೀತಿ ಮಾತನಾಡುವುದು ಸರಿಯಲ್ಲ ಎಂದರು.

ರಾಯಚೂರಿನ ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೋವಿಡ್-19 ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಲಕ್ಷ್ಮಣ ಸವದಿ, ಜವಾಬ್ದಾರಿ ಸ್ಥಾನದಲ್ಲಿರುವವರು ಜವಾಬ್ದಾರಿ ಅರಿತು ಮಾತನಾಡಿದರೆ ಅದಕ್ಕೆ ಅರ್ಥವಿರುತ್ತದೆ. ಪ್ರತಿ ತಿಂಗಳು ಐದಾರು ಸಾವಿರ ಕೋಟಿ ಸಂಬಳ ಕೊಡಬೇಕಾಗುತ್ತೆ. ರಾಜ್ಯದಲ್ಲಿ ಜನಜೀವನ ಸುಗಮವಾಗಿ ನಡೆಯಬೇಕು ಎಂಬುದನ್ನ ಅರ್ಥಮಾಡಿಕೊಳ್ಳಬೇಕು ಎಂದರು. ಇನ್ನೂ ಯಾವುದೇ ಕಾರಣಕ್ಕೂ ಪುನಃ ಲಾಕ್‍ಡೌನ್ ಮಾಡುವುದು ಕಷ್ಟದ ಕೆಲಸ. ಲಾಕ್‍ಡೌನ್ ಇದ್ದಾಗಲೂ ಕೊರೊನಾ ಹರಡಿದೆ. ಇಲ್ಲದಾಗಲೂ ಹರಡಿದೆ. ಲಾಕ್ ಡೌನ್ ಮಾಡುವುದೊಂದೆ ಪರಿಹಾರ ಅಲ್ಲ. ಜನರ ಸಹಕಾರ ಮುಖ್ಯವಾಗಿದೆ ಅಂತ ಹೇಳಿದರು.

ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ದರ ತೆಗೆದುಕೊಂಡರೆ ಆಸ್ಪತ್ರೆ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಅಂತ ಡಿಸಿಎಂ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ ದರ ನಿಗದಿ ಮಾಡಿದೆ. ಅದಕ್ಕಿಂತ ಹೆಚ್ಚು ಹಣ ತೆಗೆದುಕೊಳ್ಳುವ ಹಾಗಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಸಿಗುತ್ತೆ, ಹಣ ಇರುವವರು ಖಾಸಗಿ ಆಸ್ಪತ್ರೆಗೆ ತೆರಳಬಹುದು. ಆದ್ರೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಹಣ ಪಡೆಯುವ ಹಾಗಿಲ್ಲ ಅಂತ ಲಕ್ಷ್ಮಣ ಸವದಿ ಹೇಳಿದ್ದಾರೆ.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗಲ್ಲ. ಇನ್ನೂ ಅಂತರರಾಜ್ಯ ಸಾರಿಗೆ ಆರಂಭಕ್ಕೆ ಚಿಂತನೆ ನಡೆದಿದ್ದು,ಮಹಾರಾಷ್ಟ್ರ ಹೊರತು ಪಡಿಸಿ ಕೋವಿಡ್ ಪ್ರಮಾಣ ಕಡಿಮೆಯಿರುವ ಅಕ್ಕಪಕ್ಕದ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ರಾಜ್ಯ ಸಾರಿಗೆ ಇಲಾಖೆಯಲ್ಲಿ ಎಲ್ಲೂ ಟಾರ್ಗೆಟ್ ನೀಡಿಲ್ಲ. ಅರಿಯದೇ ಓರ್ವ ಅಧಿಕಾರಿ ಟಾರ್ಗೆಟ್ ನೀಡಿದ್ದ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ ಅಂತ ಹೇಳಿದರು.

Click to comment

Leave a Reply

Your email address will not be published. Required fields are marked *