ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಇಂದು ಆಸ್ಪತ್ರೆಗೆ ದಾಖಲಾಗಿದ್ದ ಅನುಷ್ಕಾ ಶರ್ಮಾ ಮಧ್ಯಾಹ್ನ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಪ್ರಕಟಿಸಿದ್ದಾರೆ.
Advertisement
ಈ ಹಿಂದೆ ಗರ್ಭಿಣಿಯಾಗಿರುವ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಶೀರ್ಷಾಸನ ಮಾಡಲು ವಿರಾಟ್ ಕೊಹ್ಲಿ ಸಹಾಯ ಮಾಡಿದ್ದು, ಈಗ ಈ ಫೋಟೋ ವೈರಲ್ ಆಗಿತ್ತು. ಹಳೆಯ ಫೋಟೋವನ್ನು ಹಂಚಿಕೊಂಡಿದ್ದ ಅನುಷ್ಕಾ ಶರ್ಮಾ, ಗರ್ಭವತಿಯಾದ ಸಮಯದಲ್ಲೂ ಯೋಗ ಮಾಡುವುದು ಮುಖ್ಯ ಎಂದು ಹೇಳಿದ್ದಾರೆ. ಸದ್ಯ ಈ ಫೋಟೋ ಟ್ವಿಟ್ಟರಿನಲ್ಲಿ ಟ್ರೆಂಡ್ ಆಗಿದ್ದು, ರಕುಲ್ ಪ್ರೀತ್ ಸಿಂಗ್ ಮತ್ತು ಮೌನಿ ರಾಯ್ ಸೇರಿದಂತೆ ಹಲವಾರು ನಟ-ನಟಿಯರು ಅನುಷ್ಕಾ ಫೋಟೋಗೆ ಕಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.
Advertisement
View this post on Instagram
Advertisement
ಫೋಟೋವನ್ನು ಹಂಚಿಕೊಂಡಿದ್ದ ಅನುಷ್ಕಾ ಶರ್ಮಾ, ಯೋಗ ನನ್ನ ಜೀವನದ ಒಂದು ಭಾಗವಾಗಿದೆ. ನಾನು ಗರ್ಭಿಣಿಯಾಗುವ ಮುಂಚೆ ಮಾಡುತ್ತಿದ್ದ ಎಲ್ಲ ಆಸನಗಳನ್ನು ಉತ್ತಮ ಸಹಾಯದಿಂದ ಮಾಡಲು ವೈದ್ಯರು ಹೇಳಿದ್ದಾರೆ. ನಾನು ಹಲವಾರು ವರ್ಷದಿಂದ ಶೀರ್ಷಾಸನ ಮಾಡುತ್ತಿದ್ದೇನೆ. ಇಂದು ಗೋಡೆಯ ಮತ್ತು ನನ್ನ ಪ್ರೀತಿಯ ಗಂಡನ ಸಹಾಯದಿಂದ ಬ್ಯಾಲೆನ್ಸ್ ಮಾಡುತ್ತಿದ್ದೇನೆ. ಗರ್ಭಿಣಿಯಾದ ಸಮಯದಲ್ಲೂ ನಾನು ಈ ರೀತಿಯ ಅಭ್ಯಾಸ ಮಾಡುತ್ತಿರುವುದಕ್ಕೆ ನನಗೆ ಖುಷಿಯಾಗುತ್ತಿದೆ ಎಂದು ಬರೆದುಕೊಂಡಿದ್ದರು.