ಲಕ್ನೋ: ಬೆಂಗಳೂರಿನ ನಡೆದ ಗಲಭೆಗೆ ಸಂಬಂಧಿಸಿದಂತೆ ಇದೀಗ ಉತ್ತರಪ್ರದೇಶದ ಮೀರತ್ ನ ಮುಸ್ಲಿಂ ನಾಯಕನೊಬ್ಬ ನವೀನ್ ತಲೆಗೆ 51 ಲಕ್ಷ ಘೋಷಣೆ ಮಾಡಿದ್ದಾನೆ.
ಹೌದು. ಮುಸ್ಲಿಂ ಮುಖಂಡ ಶಜೇಬ್ ರಿಜ್ವಿ ಈ ಸಂಬಂಧ ವಿಡಿಯೋ ಮಾಡಿ, ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸಹೋದರಿ ಮಗ ನವೀನ್ ತಲೆ ತಂದವರಿಗೆ 51 ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದಾನೆ. ಇದನ್ನೂ ಓದಿ: ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್
Advertisement
₹51 lakhs declared for beheading Naveen, nephew of Congress MLA from Bengaluru. The announcement was made by "social activist" Shahzeb Rizvi from Uttar Pradesh. He is said to be associated with Samajwadi Party. Interestingly, the Congress continues to maintain absolute silence. pic.twitter.com/YZzAHZxz7A
— Priti Gandhi – प्रीति गांधी (@MrsGandhi) August 13, 2020
Advertisement
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಉತ್ತರ ಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ನಿಮ್ಮಿಂದ ನಮ್ಮನ್ನು ಏನೂ ಮಾಡಲು ಸಾಧ್ಯವಿಲ್ಲ, ಪೊಲೀಸರನ್ನು ಕೊಲ್ಲಿ, ಒಬ್ಬರನ್ನೂ ಬಿಡಬೇಡಿ – ಎಫ್ಐಆರ್ನಲ್ಲಿ ಏನಿದೆ?
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ನವೀನ್ ಪೋಸ್ಟ್ ಹಾಕಿರುವ ನೆಪ ಇಟ್ಟುಕೊಂಡು ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ಪುಂಡರು ದಾಂಧಲೆ ನಡೆಸಿದ್ದರು. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದರು. ಅಲ್ಲದೆ ಶಾಸಕರ ಮನೆಗೆ ಕಲ್ಲು ತೂರಿ, ಬೆಂಕಿ ಹಚ್ಚಿ ಧ್ವಂಸ ಮಾಡಿದ್ದರು. ಘಟೆನೆಗೆ ಸಂಬಂಧಿಸಿದಂತೆ ಸುಮಾರು 110 ಮಂದಿ ಆರೋಪಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬೆಂಗಳೂರಿನಾದ್ಯಂತ ಆಗಸ್ಟ್ 15ರವರೆಗೆ ಸೆಕ್ಷನ್ 144 ಜಾರಿ ಮಾಡಲಾಗಿದೆ. ಇದನ್ನೂ ಓದಿ: ಮಾಜಿ ಗೃಹ ಸಚಿವ ಜಾರ್ಜ್ ಜೊತೆ ಸುತ್ತಾಡಿದ ಬೆಂಗಳೂರು ಗಲಭೆಯ ಆರೋಪಿ
ಇತ್ತ ಗಲಭೆಯಲ್ಲಿ ಎಸ್ಡಿಪಿಐ ಜೊತೆಗೆ ಮತ್ತೊಂದು ಸಂಘಟನೆ ಕೂಡ ಸಾಥ್ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಫೈರೋಜ್ ಖಾನ್ನನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ. ಗಲಭೆ ನಡೆದ ದಿನ ಅಂದರೆ ಮಂಗಳವಾರ ಸಂಜೆ 6 ಗಂಟೆಯಿಂದಲೇ ಫೈರೋಜ್ ಎಲ್ಲರಿಗೂ ಮೆಸೇಜ್ ಶೇರ್ ಮಾಡಿದ್ದ. ಯಾರು ಯಾರು ಎಲ್ಲಿಗೆ ಹೋಗಿ ಏನೇನು ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೇ ವಾಟ್ಸಪ್ ಸಂದೇಶಗಳ ಮೂಲಕ ಗಲಾಟೆ ಮಾಡಬೇಕೆಂದು ಕೆಲವೊಂದು ಮೌಲ್ವಿಗಳಿಗೆ ಹೇಳಿಕೊಟ್ಟಿದ್ದ. ತಾಂತ್ರಿಕ ಸಾಕ್ಷ್ಯದ ಆಧಾರದ ಮೇಲೆ ಫೈರೋಜ್ನನ್ನು ಬಂಧಿಸಿರುವ ಪೊಲೀಸರು ಇದೀಗ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಮುಸ್ಲಿಂ ಯುವಕರಲ್ಲದಿದ್ದರೆ ಇಂದು ನಾನು ಬದುಕುಳಿಯುತ್ತಿರಲಿಲ್ಲ: ನವೀನ್ ತಾಯಿ