– ಯುವಕ ಕೇಳಿದಷ್ಟು ಹಣ ನೀಡಿದರೂ, ಹೆಚ್ಚಿನ ಹಣಕ್ಕೆ ಬೇಡಿಕೆ
– ಸಿಬಿಐ ಏಜೆಂಟ್ ಸಹಾಯದಿಂದ ಯುವತಿ ಬ್ಲಾಕ್ಮೇಲ್
ಮುಂಬೈ: ಮಹಿಳೆಯೊಬ್ಬಳು ಯುವಕನಿಗೆ ವಿಡಿಯೋ ಕಾಲ್ ಮಾಡಿ ಬೆತ್ತಲೆ ಚಿತ್ರ ರೆಕಾರ್ಡ್ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿರುವ ಆಘಾತಕಾರಿ ಘಟನೆ ನಡೆದಿದೆ.
25 ವರ್ಷದ ವ್ಯಕ್ತಿ ಮುಂಬೈನ ಭಯಾಂದರ್ ಪ್ರದೇಶದವರಾಗಿದ್ದು, ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದಾರೆ. ವಾಟ್ಸಪ್ ವಿಡಿಯೋ ಕಾಲ್ ಮಾಡಿದ ವೇಳೆ ಬೆತ್ತಲೆಯಾಗುವಂತೆ ತಿಳಿಸಿದ್ದು, ಅವಳ ಮಾತನ್ನು ನಂಬಿದ್ದಕ್ಕೆ ವಿಡಿಯೋ ರೆಕಾರ್ಡ್ ಮಾಡಿಕೊಂಡು ನಂತರ ಬೆದರಿಕೆ ಹಾಕಿದ್ದಾಳೆ. ಮಾತ್ರವಲ್ಲದೆ ನನ್ನಿಂದ 37 ಸಾವಿರ ರೂ.ಗಳನ್ನು ಕಿತ್ತುಕೊಂಡಿದ್ದಾಳೆ ಎಂದು ದೂರಿನಲ್ಲಿ ಸಂತ್ರಸ್ತ ತಿಳಿಸಿದ್ದಾರೆ.
Advertisement
Advertisement
ಜುಲೈನಲ್ಲಿ ಅಪರಿಚಿತ ಮಹಿಳೆ ನನಗೆ ಕರೆ ಮಾಡಿದಳು, ನಂತರ ಪರಿಚಯವಾಗಿ ಚಾಟ್ ಮಾಡಲು ಆರಂಭಿಸಿದೆವು. ಇದೇ ವೇಳೆ ಸಂಬಂಧ ಬೆಳೆಯಿತು. ನಂತರ ಪ್ರತಿನಿತ್ಯ ಚಾಟ್ ಮಾಡಲು ಆರಂಭಿಸಿದೆವು ಎಂದು ಸಂತ್ರಸ್ತ ದೂರಿನಲ್ಲಿ ವಿವರಿಸಿದ್ದಾನೆ.
Advertisement
ಬೆತ್ತಲಾಗು ಅಂದ್ಳು: ಸಾಮಾನ್ಯವಾಗಿ ಆಗಾಗ ಮಾಡುತ್ತಿದ್ದಂತೆ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದಳು. ನಂತರ ಸ್ವಲ್ಪ ಹೊತ್ತು ಮಾತನಾಡಿ, ಬಟ್ಟೆ ಎಲ್ಲ ಬಿಚ್ಚಿ ಬೆತ್ತಲಾಗು ಎಂದಳು. ಅವಳನ್ನು ನಂಬಿ ನಾನು ಬಟ್ಟೆಗಳನ್ನೆಲ್ಲ ಬಿಚ್ಚಿದ್ದೆ. ಈ ವೇಳೆ ಅವಳು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾಳೆ.
Advertisement
ನಂತರ 50 ಸಾವಿರ ನೀಡುವಂತೆ ಒತ್ತಾಯಿಸಿದಳು, ದುಡ್ಡು ಕೊಡದಿದ್ದಲ್ಲಿ ವಿಡಿಯೋ ಹರಿಬಿಡುವುದಾಗಿ ಬೆದರಿಕೆ ಹಾಕಿದಳು. ಮಹಿಳೆ ಮಾತ್ರವಲ್ಲದೆ ಸಿಬಿಐ ಏಜೆಂಟ್ ಎಂದು ಹೇಳಿಕೊಂಡು ವ್ಯಕ್ತಿ ಸಹ ಕರೆ ಮಾಡಿ ಹಣ ನೀಡುವಂತೆ ಬೆದರಿಕೆ ಹಾಕಿದ. ಈ ವೇಳೆ ಮಾತುಕತೆ ನಡೆಸಿದ ಬಳಿಕ 37 ಸಾವಿರ ರೂ. ಕೊಡುವುದಾಗಿ ಹೇಳಿದೆ, ಆರೋಪಿಗಳು ಒಪ್ಪಿದರು. ನಂತರ ಮಹಿಳೆ ಕಳುಹಿಸಿದ ನಂಬರ್ ಗೆ ಇ-ವ್ಯಾಲೆಟ್ ಮೂಲಕ ಹಣ ವರ್ಗಾಯಿಸಿದೆ ಎಂದು ಸಂತ್ರಸ್ತ ಮಾಹಿತಿ ನೀಡಿದ್ದಾರೆ.
ನಾನು 37 ಸಾವಿರ ರೂ.ಕಳುಹಿಸಿದ ನಂತರವೂ ಆರೋಪಿಗಳು ಮತ್ತೆ ಹಣ ಕಳುಹಿಸುವಂತೆ ಬೇಡಿಕೆ ಇಟ್ಟರು. ಹೀಗಾಗಿ ಉತನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಮೋಸ, ಸುಲಿಗೆ ಹಾಗೂ ಕ್ರಿಮಿನಲ್ ಬೆದರಿಕೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.