ಹಾವೇರಿ: ಬಿಜೆಪಿ ಮುಂದಿನ ರಾಜಾಹುಲಿ ವಿಜಯೇಂದ್ರ ಅಂತಲ್ಲ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
Advertisement
ಹಾವೇರಿ ಜಿಲ್ಲೆ ಹಿರೇಕೆರೂರು ತಾಲ್ಲೂಕು ಬಸರಿಹಳ್ಳಿ ಹೆಲಿಪ್ಯಾಡ್ ನಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಮುಂದಿನ ರಾಜಾಹುಲಿ ಅಂತಲ್ಲ. ಯಡಿಯೂರಪ್ಪ ನಾಲ್ವತ್ತು ವರ್ಷಗಳ ರಾಜಕಾರಣದಲ್ಲಿ ಅನೇಕ ಏಳು ಬೀಳುಗಳನ್ನ ನೋಡಿದ್ದಾರೆ. ಸಾವಿರಾರು ಉಳಿ ಪೆಟ್ಟುಗಳನ್ನ ನೋಡಿದ್ದಾರೆ. ಈಗ ನಾಲ್ಕನೇ ಬಾರಿ ಸಿಎಂ ಆಗಿ ರಾಜಾಹುಲಿ ಅನಿಸಿಕೊಂಡಿದ್ದಾರೆ ಎಂದರು.
Advertisement
Advertisement
ಈಗಾಗಲೇ ಐವತ್ತರಿಂದ ಅರವತ್ತು ಪರ್ಸೆಂಟ್ ಉಳಿ ಪೆಟ್ಟು ಬೀಳುತ್ತದೆ. ಅದೆಲ್ಲ ಬಿದ್ದ ಮೇಲೆ ಒಂದು ಸುಂದರ ಮೂರ್ತಿ ಆಗುತ್ತದೆ. ತಂದೆ ಹೇಗೆ ರಾಜಾಹುಲಿ ಅನಿಸಿಕೊಂಡಿದ್ದಾರೋ ಹಾಗೇ ನೀವು ರಾಜಾಹುಲಿಯಂತೆ ಸೇವೆ ಮಾಡಿ ಎಂದು ಹೇಳಿರುವುದಾಗಿ ತಿಳಿಸಿದರು.
Advertisement
ಟಿವಿ, ಬೈಕ್ ಇದ್ದವರ ಬಿಪಿಎಲ್ ಕಾರ್ಡ್ ರದ್ದು ಎಂಬ ಸಚಿವ ಉಮೇಶ ಕತ್ತಿ ಹೇಳಿಕೆ ಬಗ್ಗೆ ನಮಗೆ ಮಾಹಿತಿ ಇಲ್ಲ. ಹೊಸ ಮಂತ್ರಿಗಳು ಬಂದಿದ್ದಾರೆ. ಹೊಸ ಮಂತ್ರಿಗಳು ಹೇಳಿದ್ದರೂ ಹೇಳಿರಬಹುದು. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ಕೆಲವರು ಮೂರು, ನಾಲ್ಕು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಇದೆ. ನಿಯಮ ಉಲ್ಲಂಘನೆ ಮಾಡಿದವರ ಕಾರ್ಡ್ ಕ್ಯಾನ್ಸಲ್ ಮಾಡುವುದಾಗಿ ಹೇಳಿರಬೇಕಷ್ಟೆ ಎಂದು ಹೇಳಿದರು.
ಕೋವಿಡ್ 19 ಇರುವುದರಿಂದ ಹೆಚ್ಚುವರಿ ಸೆಸ್ ಹಾಕಿದ್ದಾರೆ. ಅದು ಬಿಟ್ಟರೆ ಬೇರೆ ಏನಿಲ್ಲ. ಏರಿಳಿತ ಆಗುತ್ತಿರುತ್ತೆ. ಒಂದು ಸಲ ಕಡಿಮೆ ಆಗುತ್ತಿರುತ್ತದೆ. ಎಲ್ಲವನ್ನು ಸ್ವಲ್ಪ ಅಡ್ಜಸ್ಟ್ಮೆಂಟ್ ಮಾಡಿಕೊಂಡು ಹೋಗಬೇಕು ಎಂದರು.