– ಬಿಎಸ್ವೈಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ
– ಮಾರಿಷಸ್ಗೆ ಹೋಗಿದ್ದು ಯಾಕೆ?
ವಿಜಯಪುರ: ಹಾವು ಚೇಳುಗಳು ಅವರ ಮನೆಯಲ್ಲಿಯೇ ಇದೆ. ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು ಎಂದು ಯತ್ನಾಳ್ ವಿಜಯೇಂದ್ರ ವಿರುದ್ಧ ಕಿಡಿಕಾರಿದ್ದಾರೆ.
Advertisement
ವಿಜಯಪುರದಲ್ಲಿ ಮಾತನಾಡಿದ ಅವರು, ಹಾವು ಚೇಳುಗಳು ಎಲ್ಲೂ ಇಲ್ಲ. ವಿಜಯೇಂದ್ರ ಕುಟುಂಬದವರೇ ಹಾವು ಚೇಳುಗಳು. ಪಾಪ ಯಡ್ಡಿಯೂರಪ್ಪನವರಿಗೆ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಾನೆ ಇಲ್ಲ. ಕಾವೇರಿ ಮನೆಯಲ್ಲಿ ಒಂದು ರೀತಿ ಯಡ್ಡಿಯೂರಪ್ಪನವರನ್ನು ಹಿಡಿದಿಟ್ಟುಕೊಂಡಿದ್ದಾರೆ. ಯಡ್ಡಿಯೂರಪ್ಪ ಸಿಎಂ ಆಗುವ ಮುನ್ನ ಅವರ ಮನೆಯಲ್ಲಿ ಯಾರು ಇರುತ್ತಿರಲಿಲ್ಲ. ಅಲ್ಲಿ ಅಡುಗೆ ಮಾಡುವವರು, ಉಸ್ತುವಾರಿ ಮಾಡುವವರು ಮಾತ್ರ ಇರುತ್ತಿದ್ದರು. ಈಗ ಸಿಎಂ ಅದ ತಕ್ಷ ಇಡೀ ಕುಟುಂಬ ಬಂದು ಕಾವೇರಿ ಮನೆ ಸೇರಿಬಿಟ್ಟಿದ್ದಾರೆ ಎಂದು ದೂರಿದರು.
Advertisement
Advertisement
ಇದೇ ರೀತಿ ಮುಂದುವರೆದರೆ ಪಕ್ಷಕ್ಕೆ ಹಾನಿ ಆಗುತ್ತದೆ. ನಿಮ್ಮ ಕುಟುಂಬದಲ್ಲಿರುವವರು ಒಬ್ಬರು ರಾಜಕಾರಣ ಮಾಡಿ. ಉಳಿದವರು, ನಿಮಗೆ ಸಾಕಷ್ಟು ಉದ್ಯೋಗಗಳಿವೆ, ಸಾಕಷ್ಟು ಮನೆಗಳಿವೆ ಅದನ್ನು ಮಾಡಿ ಎಂದು ಸಲಹೆ ನೀಡಿದರು. ಸಿಎಂ ಮನೆಯಲ್ಲಿ ಕುಳಿತು ವಸೂಲಿ ಏನು ಮಾಡುತ್ತಿದ್ದಿರಿ? ವರ್ಗಾವಣೆ ದಂಧೆ ಏನು ಮಾಡುತ್ತಿದ್ದಿರಿ? ಇದೆಲ್ಲವನ್ನು ನೀವೆ ಮಾಡುತ್ತಿದ್ದಿರಿ? ಯಡ್ಡಿಯೂರಪ್ಪನವರಿಗೆ ಪಾಪ ವಯಸ್ಸಾಗಿದೆ. ಅವರಿಗೇನು ತಿಳಿತಾ ಇಲ್ಲ. ಅದನ್ನ ಇಡೀ ಕುಟುಂಬದ ಮಕ್ಕಳು, ಮೊಮ್ಮಕ್ಕಳು ದುರಪಯೋಗ ತಗೆದುಕೊಳ್ಳುತ್ತಿದ್ದಾರೆ ಎಂದರು.
Advertisement
ಸುಮಾರು 35 ಜನ ಕಾವೇರಿ ಗೃಹದಲ್ಲಿದ್ದಾರೆ. ಅಲ್ಲದೆ ಮೊನ್ನೆ ಇಡೀ ಕುಟುಂಬ ವಿಶೇಷ ವಿಮಾನ ತೆಗೆದುಕೊಂಡು ಮಾರಿಷಸ್ಗೆ ಹೋಗಿದ್ದಾರೆ. ಅಲ್ಲೇನು ಕೆಲಸ ಇತ್ತು. ಅಲ್ಲಿ ಏನು ಹಣದ ವ್ಯವಹಾರ ಆಯ್ತು. ಇದು ನಾಡಿನ ಜನರಿಗೆ ಗೊತ್ತಾಗಬೇಕು ಎಂದರು.
ಭ್ರಷ್ಟಾಚಾರದ ವಿರುದ್ದ ಕುಟುಂಬ ಶಾಹಿ ವಿರುದ್ಧ ನಮ್ಮ ಹೋರಾಟ ಇದೆ. ನಮ್ಮ ಹೋರಾಟ ಬಿಜೆಪಿ ವಿರುದ್ಧ ಅಲ್ಲ. ನಮ್ಮ ಹೋರಾಟ ತತ್ವಾಧಾರಿತ ಹೋರಾಟ. ಅದಕ್ಕೆ ಯಡ್ಡಿಯೂರಪ್ಪ ನವರು ಸಾಕಷ್ಟು ದುಡಿದಿದ್ದಾರೆ ಅವರನ್ನ ಮುಕ್ತವಾಗಿ ಬಿಡಿ ಎಂದರು.
ಎಂದಿಗೂ ಲಿಂಗಪೂಜೆ ಮಾಡದ ವಿಜಯೇಂದ್ರ ಚಿತ್ರದುರ್ಗ ಸ್ವಾಮೀಜಿ ಹಿಡಿದುಕೊಂಡು ಲಿಂಗಪೂಜೆ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಪ್ರತಿದಿನ ಪೂಜೆ ಮಾಡುತ್ತಾರೆ. ಬರೀ ನಾಟಕ ಕಂಪನಿ 10ಕೋಟಿ ರೂ. ಖರ್ಚು ಮಾಡಿ ಬೆಂಗಳೂರಿನಲ್ಲಿ ಚಿತ್ರದುರ್ಗ ಸ್ವಾಮೀಜಿಗಳನ್ನು ಹಿಡಿದುಕೊಂಡು ಕಾರ್ಯಕ್ರಮ ಮಾಡಿದರು. ಅಂದು ಸುತ್ತೂರು ಸ್ವಾಮೀಜಿ ಇವರಿಗೆ ನೆನಪಿಗೆ ಬರಿಲಿಲ್ಲ. ಈಗ ಮೈಸೂರಿಗೆ ಹೋಗಿ ಸುತ್ತೂರು ಸ್ವಾಮೀಜಿಗಳಿಗೆ ಜೈ ಎಂದು ಹೇಳುತ್ತಾರೆ. ಅವರು ಸಿಗದಿದ್ದರೆ ಮುಂದೆ ತುಮಕೂರು ಸ್ವಾಮೀಜಿಗಳನ್ನು ಹಿಡಿದುಕೊಂಡು ಜೈ ಎನ್ನುತ್ತಾರೆ. ಅಲ್ಲಿಯೂ ಲಾಭವಾಗದಿದ್ದರೆ ಅಮಿತ್ಗೆ ಶಾ ಜೈ ಎನ್ನುತ್ತಾರೆ ಎಂದು ವಿಜಯೇಂದ್ರ ಕಾಲೆಳೆದರು.
ವಿಜಯೇಂದ್ರ ಇವತ್ತು ಸುತ್ತುರು ಶ್ರೀಗಳಿಗೆ ನೇತೃತ್ವ ತಗೆದುಕೊಳ್ಳಲು ಹೇಳುತ್ತಿದ್ದಾರೆ. ಮೊನ್ನೆ ವೀರಶೈವ ಲಿಂಗಾಯತರನ್ನು ಒಡೆಯಲು ಪ್ರಯತ್ನ ಮಾಡಿದರು. ವಿಫಲ ಆಯ್ತು, ಇದೀಗ ಸುತ್ತೂರು ಶ್ರೀಗಳ ಆಶ್ರಯಕ್ಕೆ ಹೋಗುತ್ತಾರೆ. ತಮಗೆ ಹೇಗೆ ಬರುತ್ತೆ ಹಾಗೆ ವೀರಶೈವ ಲಿಂಗಾಯತರು ಇವರಿಗೆ ಅನುಕೂಲ ಆಗುವ ರೀತಿಯಲ್ಲಿ ಕೆಲಸ ಮಾಡಬೇಕು ಎಂದರು.