CinemaLatestMain PostNational

ವಿಚ್ಛೇದನದ ಬಳಿಕ ಮಾಜಿ ಪತ್ನಿ ಜೊತೆ ಅಮೀರ್ ಟೇಬಲ್ ಟೆನ್ನಿಸ್

ಶ್ರೀನಗರ: ಬಾಲಿವುಡ್ ಮಿಸ್ಟರ್ ಪರ್ಫೆಕ್ಟ್ ನಟ ಅಮೀರ್ ಖಾನ್ ವಿಚ್ಛೇದನದ ಬಳಿಕ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಟೇಬಲ್ ಟೆನ್ನಿಸ್ ಆಟವನ್ನು ಆಡಿದ್ದಾರೆ. ಸದ್ಯ ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ನಟ ಅಮೀರ್ ಖಾನ್ ವಿಚ್ಛೇದನ ನೀಡಿದ ಬಳಿಕ ಮಾಜಿ ಪತ್ನಿ ಕಿರಣ್ ರಾವ್ ಜೊತೆ ಹೆಚ್ಚಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ವಿಚ್ಛೇದನ ಪಡೆದ ಈ ದಂಪತಿ ಮಗ ಅಜಾದ್‍ಗೆ ಪೋಷಕರಾಗಿ ಮುಂದುವರಿದಿದ್ದಾರೆ. ಸದ್ಯ ಲಾಲ್ ಚಡ್ಡಾ ಸಿನಿಮಾದ ಬ್ಯುಸಿಯಾಗಿರುವ ಅಮೀರ್ ಖಾನ್ ಜೊತೆ ಮಾಜಿ ಪತ್ನಿ ಕಿರಣ್ ರಾವ್ ಹಾಗೂ ಅಜಾದ್ ಕೂಡ ಶೂಟಿಂಗ್ ಸೆಟ್‍ನಲ್ಲಿ ಇದ್ದಾರೆ.

ಈ ಸಿನಿಮಾದ ಚಿತ್ರೀಕರಣ ಲಡಾಕ್‍ನಲ್ಲಿ ನಡೆಯುತ್ತಿದ್ದು, ಶೂಟಿಂಗ್ ವೇಳೆ ಕೊಂಚ ಫ್ರೀ ಆದ ಅಮೀರ್ ಚಿತ್ರತಂಡದವರಿಗೆ ಟೇಬಲ್ ಟೆನ್ನಿಸ್ ಆಟವನ್ನು ಆಯೋಜಿಸಿದ್ದಾರೆ. ಈ ವೇಳೆ ಅಮೀರ್ ಹಾಗೂ ಕಿರಣ್ ರಾವ್ ಇಬ್ಬರು ಎದುರಾಗಿ ಟೇಬಲ್ ಟೆನ್ನಿಸ್ ಆಟವನ್ನು ಆಡಿ ಸಂಭ್ರಮಿಸಿದ್ದಾರೆ. ಅಲ್ಲದೇ ಲಾಲ್ ಚಡ್ಡಾ ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿರುವ ಟಾಲಿವುಡ್ ನಟ ನಾಗಚೈತನ್ಯ ಕೂಡ ಟೇಬಲ್ ಆಟ ಆಡಿದ್ದಾರೆ.

ಇತ್ತೀಚೆಗಷ್ಟೇ ಕೂಡ ಲಾಲ್ ಚಡ್ಡಾ ಸಿನಿಮಾದ ಶೂಟಿಂಗ್ ವೇಳೆ ಅಮೀರ್, ಕಿರಣ್ ರಾವ್ ಜೊತೆ ಲಡಾಕ್ ಪ್ರಾದೇಶಿಕ ಸಾಂಪ್ರದಾಯಿಕ ಉಡುಪನ್ನು ಧರಿಸಿ ನೃತ್ಯ ಮಾಡಿದ್ದರು. ಒಟ್ಟಾರೆ ವಿಚ್ಛೇದನದ ಬಳಿಕವೂ ಅಮೀರ್ ಹಾಗೂ ಕಿರಣ್ ರಾವ್ ಆಟ ಆಡಿ ಸಂಭ್ರಮಿಸುತ್ತಿರುವುದನ್ನು ಕಂಡು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.  ಇದನ್ನೂ ಓದಿ:‘ಯುವರತ್ನ’ ನಟಿ ಸಯ್ಯೇಶಾ ಹೆಣ್ಣು ಮಗುವಿಗೆ ಜನನ

Leave a Reply

Your email address will not be published.

Back to top button