ರಾಯಚೂರು: ವರ್ಗಾವಣೆ ವಿಚಾರಕ್ಕೆ ಮನನೊಂದು ಎನ್ಈಕೆಎಸ್ಆರ್ ಟಿಸಿ ಸಿಬ್ಬಂದಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ನಡೆದಿದೆ.
ವರ್ಗಾವಣೆ ವಿರೋಧಿಸಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದ್ದ ಬಸ್ ಚಾಲಕ ಸೈಯದ್ ಯೂನೂಸ್ ಆತ್ಮಹತ್ಯೆಗೆ ಯತ್ನಿಸಿದ್ದಾಋಏ. ಸ್ಥಳದಲ್ಲಿದ್ದವರು ವಿಷ ಬಾಟಲಿಯನ್ನ ಕಸಿದುಕೊಂಡು ಎಸೆದಿದ್ದಾರೆ.
Advertisement
Advertisement
ಈ ಹಿಂದೆ ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಇಲಾಖೆಯಿಂದ ಕಿರುಕುಳ ನೀಡಲಾಗುತ್ತಿದೆ. ಬೀದರ್ ಜಿಲ್ಲೆಯ ಬಾಲ್ಕಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ. ಏಳು ಮಕ್ಕಳನ್ನ ಕಟ್ಟಿಕೊಂಡು ಬಾಲ್ಕಿಗೆ ಹೇಗೆ ಹೋಗಲಿ ಅಂತ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾನೆ. ಏಕಾಏಕಿ ವರ್ಗಾವಣೆ ಶಿಕ್ಷೆಗೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
Advertisement
Advertisement
ಮಾರ್ಚ್ ತಿಂಗಳಿನಿಂದ ವೇತನವೂ ನೀಡದೇ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಅಂತ ಚಾಲಕ ಸೈಯದ್ ಯೂನೂಸ್ ಆರೋಪಿಸಿದ್ದಾರೆ. ವಿಷಯ ತಿಳಿದು ಕಚೇರಿಗೆ ಬಂದ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ್ ಸಿಬ್ಬಂದಿಯನ್ನ ಸಮಾಧಾನ ಪಡಿಸಲು ಯತ್ನಿಸಿದರು. ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ ನಮ್ಮಿಂದ ಕಿರುಕುಳ ಆಗಿಲ್ಲ ಅಂತ ಡಿವಿಷನಲ್ ಕಂಟ್ರೋಲರ್ ವೆಂಕಟೇಶ್ ಹೇಳಿದ್ದಾರೆ.