DistrictsGadagKarnatakaLatestMain Post

ಲೋನ್ ಕೊಡುವುದಾಗಿ ಖಾಸಗಿ ನೌಕರನಿಗೆ ವಂಚನೆ- ಲಕ್ಷಾಂತರ ರೂ. ಪಂಗನಾಮ

Advertisements

ಗದಗ: ಬೆಂಗಳೂರಿನ ಇಂಡಸ್ ಆ್ಯಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಲೋನ್ ಕೊಡುವುದಾಗಿ ನಂಬಿಸಿ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಖಾಸಗಿ ಕಂಪನಿ ಉದ್ಯೋಗಿಯೊಬ್ಬರು ಲಕ್ಷಾಂತರ ರೂಪಾಯಿ ಕಳೆದುಕೊಂಡ ಕಂಗಾಲಾಗಿದ್ದಾರೆ.

ಬ್ಯಾಂಕ್ ಅಕೌಂಟ್, ಪಿನ್, ಎಟಿಎಮ್ ಕಾರ್ಡ್ ಬ್ಲಾಕ್ ಆಗಿದೆ ಎಂದು ಯಾರಾದರೂ ಅಪರಿಚಿತರು ಕರೆ ಮಾಡಿದರೆ ಅವರಿಗೆ ಉತ್ತರ ನೀಡಬೇಡಿ ಎಂದು ಪೊಲೀಸರು ಎಷ್ಟೇ ಎಚ್ಚರಿಕೆ, ಜಾಗೃತಿ ನೀಡಿದರೂ ಜನ ಮಾತ್ರ ಅದರ ಗಮನ ಹರಿಸುತ್ತಿಲ್ಲ. ಅದರಲ್ಲೂ ವಿದ್ಯಾವಂತರೇ ಮೋಸಕ್ಕೆ ಒಳಗಾಗುತ್ತಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಬಸ್ತಿ ಬಣದ ನಿವಾಸಿ ವಿಕಾಸ್ ಪಾಟೀಲ್ ಎಂಬವರು ಕೂಡ ಇದೀಗ ಇಂಥದ್ದೇ ಮೋಸದ ಕರೆಯನ್ನು ನಂಬಿ ಹಣಕಳೆದುಕೊಂಡಿದ್ದಾರೆ.

ಬೆಂಗಳೂರಿನ ಇಂಡಸ್ ಇಂಡ್ ಬ್ಯಾಂಕ್ ಕಷ್ಟಮರ್ ಕೇರ್ ನಿಂದ ಮಾತಾಡೋದು ಎಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ನಿಮಗೆ ಲೋನ್ ಕೊಡುವುದಾಗಿ ಹೇಳಿದ್ದಾನೆ. ಇದಕ್ಕೆ ಮರುಳಾದ ವಿಕಾಸ್ ಪಾಟೀಲ್, ತಮ್ಮ ಜಕ್ಕಸಂದ್ರ ಶಾಖೆಯ ಅಕೌಂಟ್ ನಂಬರ್ ಕೊಟ್ಟಿದ್ದಾರೆ. ಅಕೌಂಟ್ ನಂಬರ್ ಕೊಟ್ಟಿದ್ದೇ ತಡ ಖದೀಮ ಅದರಲ್ಲಿದ್ದ ಸುಮಾರು 1ಲಕ್ಷ 29 ಸಾವಿರ ಡ್ರಾ ಮಾಡಿಕೊಂಡಿದ್ದಾನೆ.ಇದನ್ನೂ ಓದಿ: ಭೂ ಕುಸಿತದಿಂದ ಮಾರ್ಗ ಬಂದ್ – ಹೆಗಲ ಮೇಲೆ ಬೈಕ್ ಹೊತ್ತು ಸಾಗಿದ ಬಾಹುಬಲಿ

ಜುಲೈ 11 ರಂದು 49 ಸಾವಿರದಂತೆ 2 ಸಲ ಹಾಗೂ 30 ಸಾವಿರ ರೂ.ಗಳನ್ನು ಕ್ರೆಡಿಟ್ ಕಾರ್ಡ್ ಬಳಸಿ ಆನ್‍ಲೈನ್ ಮೂಲಕ ವಂಚಿಸಿ ಹಣ ಪಡೆದಿದ್ದಾನೆ. ಇದು ಒಂದು ವಾರದ ನಂತರ ವಿಕಾಸ್ ಪಾಟೀಲ್‍ಗೆ ಗೊತ್ತಾಗಿದ್ದು, ವಂಚನೆ ಮಾಡಿದ ಆರೋಪಿ ವಿರುದ್ಧ ಲಕ್ಷ್ಮೇಶ್ವರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Leave a Reply

Your email address will not be published.

Back to top button