ಬೆಂಗಳೂರು: ಲಾಕ್ ಡೌನ್ ವಿಸ್ತರಣೆ ಹಾಗೂ ಪ್ಯಾಕೇಜ್ ಘೋಷಣೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ನಗರದ ಬಿಜಿಎಸ್ ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ ಬಳಿಕ ಮಾತನಾಡಿದ ಅವರು, ಲಾಕ್ ಡೌನ್ ವಿಸ್ತರಣೆ ಮತ್ತು ಪ್ಯಾಕೇಜ್ ಘೋಷಣೆ ವಿಚಾರದ ಬಗ್ಗೆ ಬೇರೆ ಸಂದರ್ಭದಲ್ಲಿ ಮಾತಾಡುತ್ತೇನೆ. ಈ ಕುರಿತು ಇನ್ನೂ ಚರ್ಚೆ ಮಾಡುತ್ತಿದ್ದೇವೆ, ಆದರೆ ಇದುವರೆಗೆ ಯಾವುದೇ ತೀರ್ಮಾನ ಆಗಿಲ್ಲ. ಚರ್ಚೆ ಮುಗಿದ ಬಳಿಕ ತಿಳಿಸುತ್ತೇವೆ ಎಂದರು.
Advertisement
Advertisement
ಇದೆ ವೇಳೆ ಸಚಿವ ಎಸ್.ಟಿ ಸೋಮಶೇಖರ್ ಮಾತನಾಡಿ, ಲಾಕ್ ಡೌನ್ ವಿಸ್ತರಣೆ ಮಾಡಬೇಕು ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಇಂದು ವೀಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆಯುತ್ತಾರೆ. ತಜ್ಞರ ಇನ್ನೊಂದು ವರದಿ ಬಳಿಕ ಲಾಕ್ ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ನಿರ್ಧಾರ ಮಾಡ್ತಾರೆ. ಪ್ಯಾಕೇಜ್ ವಿಸ್ತರಣೆ ಬಗ್ಗೆಯೂ ಸಿಎಂ ನಿರ್ಧಾರ ಮಾಡ್ತಾರೆ ಎಂದರು.
Advertisement
ಕೆಂಗೇರಿ ಉಪನಗರದಲ್ಲಿರೋ ಅಂಬೇಡ್ಕರ್ ಭವನದಲ್ಲಿ ಟ್ರಯೆಜ್ ಉದ್ಘಾಟನೆ ಮಾಡಿದ್ದೇನೆ. ಕೋವಿಡ್ ರೋಗಿಯ ಪರಿಸ್ಥಿತಿ ಆಧಾರದ ಮೇಲೆ ನಿರ್ಧಾರ ಮಾಡಲಿದ್ದಾರೆ. 24 ಗಂಟೆ ವೈದ್ಯರು ಉಪಸ್ಥಿತಿ ಇರಲಿದ್ದಾರೆ. ರೋಗಿಯ ಪರಿಸ್ಥಿತಿ ನೋಡಿ ಸಮಾನ್ಯ, ಐಸಿಯು ಬೆಡ್ ಬಗ್ಗೆ ವೈದ್ಯರು ನಿರ್ಧರಿಸುತ್ತಾರೆ. ಸೆಂಟರ್ನಲ್ಲಿ ಒಂದು ಅಂಬುಲೆನ್ಸ್ ಇರಲಿದೆ. ಟ್ರಯಾಜ್ ಸೆಂಟರ್ ನಲ್ಲಿ ಸಮರ್ಥ ರೀತಿಯಲ್ಲಿ ಕೆಲಸ ಮಾಡಲಾಗುವುದು. ಪ್ಯಾಕೇಜ್ ಘೋಷಣೆ ಬಗ್ಗೆ ಚರ್ಚೆಯಾಗ್ತಿದೆ. ಚರ್ಚೆ ಬಳಿಕ ನಿರ್ಧಾರ ತಿಳಿಸುತ್ತೇವೆ ಎಂದು ತಿಳಿಸಿದರು.
Advertisement
210 ಆಕ್ಸಿಜನ್ ಬೆಡ್, 43 ಐಸಿಯು, 30 ಹೆಚ್ ಡಿಯು, 100 ನಾರ್ಮಲ್ ಬೆಡ್ ಗಳ ಸೌಲಭ್ಯ ಹೊಂದಿರುವ ಕೋವಿಡ್ ಕೇರ್ ಸೆಂಟರ್ ಇದಾಗಿದೆ. ಇದೇ ವೇಳೆ ಮೈಸೂರು ಹಸಿರು ಪ್ರತಿಷ್ಠಾನದಿಂದ ಆದಿಚುಂಚನಗಿರಿ ಮಠಕ್ಕೆ 2 ಸಾವಿರ ಗಿಡಗಳ ಹಸ್ತಾಂತರ ಮಾಡಲಾಯಿತು.