ಯಾದಗಿರಿ: ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘಿಸಿ ಜಿಲ್ಲೆಯ ಜಿಲ್ಲೆಯ ಸುರಪುರ ತಾಲೂಕಿನ ಬಿಜಾಸಪುರ ಗ್ರಾಮದಲ್ಲಿ ಜಾತ್ರೆ ಮಾಡಲಾಗಿದೆ
ಮಳೆಗಾಗಿ ಗ್ರಾಮದ ಹೊರಭಾಗದ ಬೆಟ್ಟದಲ್ಲಿರುವ ಗ್ರಾಮದ ಆರಾಧ್ಯ ದೈವ ಮರೇಮ್ಮ ದೇವಿಯ ಜಾತ್ರೆ ನಡೆಸಲಾಗಿದೆ. ರಥೋತ್ಸವದ ವೇಳೆ ಭಕ್ತರು ಮಾಸ್ಕ್ ಹಾಕದೇ ಹಾಗೂ ಸಾಮಾಜಿಕ ಅಂತರ ಕಾಪಾಡದೇ ಕೋವಿಡ್ ನಿಯಮಕ್ಕೆ ಡೋಂಟ್ ಕೇರ್ ಎಂದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
Advertisement
ಜಿಲ್ಲೆಯಲ್ಲಿ ಸೋಂಕಿನ ಸಂಖ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಯಾದಗಿರಿ ಜಿಲ್ಲಾಡಳಿತ ಸಂಪೂರ್ಣ ಲಾಕ್ಡೌನ್ ಗೆ ಮುಂದಾಗಿದೆ. ಎಲ್ಲಾ ರೀತಿಯ ಕಾರ್ಯಚಟುವಟಿಕೆಗಳ ಜೊತೆಗೆ ಧಾರ್ಮಿಕ ಕಾರ್ಯಕ್ಕೆ ಸಹ ನಿಷೇಧವಿದೆ. ಹೀಗಿದ್ದರೂ ಸಹ ಯಾದಗಿರಿಗೆ ಮಾತ್ರ ಜಾತ್ರೆ ಕಂಟಕ ನಿಲ್ಲುತ್ತಿಲ್ಲ.
Advertisement