ಮುಂಬೈ: ಲಾಕ್ಡೌನ್ ಕಾರಣದಿಂದ ಮನೆಯಲ್ಲೇ ಉಳಿದರುವ ಟೀಂ ಇಂಡಿಯಾ ಕ್ರಿಕೆಟ್ ಆಟಗಾರರಿಗಾಗಿ ಬಿಸಿಸಿಐ ವರ್ಕ್ ಫ್ರಮ್ ಹೋಮ್ ಪ್ರಾರಂಭಿಸಿದೆ. ಈ ಕಾರ್ಯಕ್ಕಾಗಿ ಪ್ರತ್ಯೇಕ ಆ್ಯಪ್ ಒಂದನ್ನು ಸಿದ್ಧಪಡಿಸಲಾಗಿದ್ದು, ಆಟಗಾರರಿಗೆ ಅಪ್ಲಿಕೇಶನ್ ಆಕ್ಸೆಸ್ ನೀಡಿದೆ.
ಬಿಸಿಸಿಐ ಅಪ್ಲಿಕೇಶನ್ ಗುರಿ ಆಟಗಾರರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡುವುದಾಗಿದೆ. ಇದರಲ್ಲಿ ಆನ್ಲೈನ್ ತರಬೇತಿ ಸೆಷನ್ಸ್, ಚಾಟ್ ರೂಮ್ ಹಾಗೂ ನಾಲ್ಕು ಹಂತಗಳ ಯೋಜನೆಯೊಂದಿಗೆ ಪ್ರಶ್ನಾವಳಿಯನ್ನು ಒದಗಿಸಲಾಗಿದೆ. ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ನೆರವು ನೀಡಲು ಅಪ್ಲಿಕೇಶನ್ ಸಹಾಯಕವಾಗಲಿದೆ. ಇಲ್ಲಿ ಆಟಗಾರರ ವೈಯಕ್ತಿಕ ಮತ್ತು ತಂಡದ ಪ್ರದರ್ಶನ, ಕೌಶಲ್ಯ ಹಾಗೂ ಗಾಯದ ಸಮಸ್ಯೆ ಸೇರಿದಂತೆ ಇತರೆ ಮಾಹಿತಿ ನೀಡಲಾಗಿರುತ್ತದೆ.
Advertisement
Advertisement
ಅಪ್ಲಿಕೇಶನ್ ಕಾರ್ಯನಿರ್ವಹಣೆ ಕುರಿತು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಮಾಹಿತಿ ನೀಡಿದ್ದಾರೆ. ಇದು ಹಂತ ಹಂತದ ಪ್ರಕ್ರಿಯೆಯಾಗಿದ್ದು, ಇದನ್ನು ಬಿಸಿಸಿಐ ಕಾರ್ಯದರ್ಶಿಗಳು ಪ್ರತಿದಿನ ಪರಿಶೀಲನೆ ನಡೆಸಿ ಪ್ರಗತಿಯನ್ನು ಗಮನಿಸುತ್ತಾರೆ. ಆಟಗಾರರ ದೈಹಿಕ-ಮಾನಸಿಕ ಆರೋಗ್ಯ, ಆನ್ಲೈನ್ ವೃತ್ತಿಪರ ನೆರವು, ಆಹಾರ ಪದ್ಧತಿ, ಫಿಟ್ನೆಸ್ ಸೆಷನ್ಸ್ ಗಳನ್ನು ಪ್ರತಿದಿನ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Advertisement
ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಪ್ರತಿ ಆಟಗಾರರ ಬಗ್ಗೆ ಪ್ರತ್ಯೇಕವಾಗಿ ಗಮನ ಹರಿಸುತ್ತಿದ್ದಾರೆ. ಫೀಲ್ಡಿಂಗ್ ಕೋಚ್ ಆರ್ ಶೀಧರ್ ಅವರು ಆಟಗಾರರಿಗೆ ಸೂಕ್ತ ಪ್ರತಿಕ್ರಿಯೆ ನೀಡಲು ಕೆಲ ಪ್ರಶ್ನಾವಳಿಯನ್ನು ಸಿದ್ಧಪಡಿಸಿದ್ದಾರೆ. ಕೋಚ್ಗಳು ನೀಡುವ ಸಲಹೆಗಳೊಂದಿಗೆ ಆಟಗಾರರು ಉತ್ತಮ ಮಾತುಕತೆ ನಡೆಸುತ್ತಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಅಲ್ಲದೇ ಲಾಕ್ಡೌನ್ ಮುಗಿದ ಬಳಿಕ ಎಲ್ಲಾ ಆಟಗಾರರಿಗೂ ಹೊರಾಂಗಣ ತರಬೇತಿ ನೀಡಲಾಗುವುದು. ಅಲ್ಲಿ ನಿರಂತರ ಮೌಲ್ಯಮಾಪನ ಹಾಗೂ ಬೇರೆ ಬೇರೆ ವಿಷಯಗಳ ಸುತ್ತ ಗಮನ ಹರಿಸಲಾಗುವುದು ಎಂದಿದ್ದಾರೆ.