– 22 ಘೋರ ಪ್ರಕರಣ ದಾಖಲು, 3 ಸನ್ನದು ರದ್ದು
ಕೋಲಾರ: ಕೊರೊನಾ ಲಾಕ್ಡೌನ್ ನಿಂದ ಅಬಕಾರಿ ಇಲಾಖೆ ನಷ್ಟಕ್ಕೊಳಗಾಗಿದೆ, ಈ ವೇಳೆ 22 ಘೋರ ಅಬಕಾರಿ ಕಾಯ್ದೆ ಉಲ್ಲಂಘಟನೆ ಪ್ರಕರಣಗಳು ದಾಖಲಾಗಿದ್ದು, ಸರ್ಕಾರದ ನಿಯಮ ಉಲ್ಲಂಘನೆ ಮಾಡಿದ 3 ಬಾರ್ ಸನ್ನದು ರದ್ದು ಮಾಡಲಾಗಿದೆ ಎಂದು ಅಬಕಾರಿ ಆಯುಕ್ತ ರವಿಶಂಕರ್ ಮಾಹಿತಿ ನೀಡಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ಬೈಕ್, ಕಾರ್ ಸೇರಿ 15 ವಾಹನಗಳನ್ನ ವಶಕ್ಕೆ ಪಡೆದು, ಸನ್ನದುಗಳ ವಿರುದ್ಧ 54 ಪ್ರಕರಣ ದಾಖಲು ಮಾಡಲಾಗಿದೆ. ಜೊತೆಗೆ ಸಾವಿರಾರು ಲೀಟರ್ ನಷ್ಟು ಅಕ್ರಮ ಮದ್ಯ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದನ್ನು ವಶಕ್ಕೆ ಪಡೆದು 145 ಜನರನ್ನು ದಸ್ತಗಿರಿ ಮಾಡಲಾಗಿದೆ.
Advertisement
Advertisement
ಲಾಕ್ಡೌನ್ ಪರಿಣಾಮ ಜಿಲ್ಲೆಯಲ್ಲಿ ಶೇ.28ರಷ್ಟು ಅಬಕಾರಿ ಇಲಾಖೆಗೆ ನಷ್ಟವಾಗಿದ್ದು, ಲಾಕ್ಡೌನ್ ತೆರವಾದ ಬಳಿಕ ಲಾಭದತ್ತ ಸಾಗುತ್ತಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಸರಾಸರಿ 1.35 ಲಕ್ಷ ಬಾಕ್ಸ್ ಸೇಲ್ ಆಗುತ್ತಿತ್ತು. ಆದರೆ ಈ ಬಾರಿ ತುಂಬಾ ಕಡಿಮೆಯಾಗಿದ್ದು, ಸದ್ಯ ಸುಧಾರಣೆಯಾಗಿದೆ. ಈ ಬಾರಿ ಲಾಕ್ಡೌನ್ ವೇಳೆ ಕಳ್ಳಭಟ್ಟಿ ಸಾರಾಯಿ ಮಾರಾಟ ಪ್ರಕರಣ ಕೇವಲ 1 ಮಾತ್ರ ದಾಖಲಾಗಿದ್ದು, ಈ ವರ್ಷ ಅಂತಹ ಯಾವುದೇ ಹೆಚ್ಚಿನ ಪ್ರಕರಣಗಳು ವರದಿಯಾಗಿಲ್ಲ ಎಂದು ಹೇಳಿದರು.