– ದೇಶದಲ್ಲಿ ಮತ್ತೆ ಲಾಕ್ಡೌನ್ ಅಗತ್ಯ ಇಲ್ಲ
ನವದೆಹಲಿ: ಇಂದು ದೇಶವಾಸಿಗಳಿಗೆ ಧೈರ್ಯ ತುಂಬಿದ ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ಡೌನ್ ಅಂತಿಮ ಅಸ್ತ್ರವಾಗಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚಿಸಿದ್ದಾರೆ. ಲಾಕ್ಡೌನ್ ಮಾಡುವ ಬದಲಾಗಿ ಮೈಕ್ರೋಕಂಟೈನ್ಮೆಂಟ್ ಗಳನ್ನ ಮಾಡಿ ಕೊರೊನಾ ನಿಯಂತ್ರಿಸಬಹುದು ಎಂದು ಸೂಚಿಸಿದರು. ಅನಗತ್ಯವಾಗಿ ನಿಮ್ಮ ಮನೆಯ ಸದಸ್ಯರು ಹೊರಗೆ ತಡೆಯಬೇಕಿದೆ. ಇದರ ಜೊತೆಗೆ ಕೊರೊನಾ ಜಾಗೃತಿ ಮೂಡಿಸಬೇಕಿದೆ. ದೇಶದಲ್ಲಿ ಮತ್ತೆ ಲಾಕ್ಡೌನ್ ಸ್ಥಿತಿಇಲ್ಲ. ರಾಜ್ಯಗಳು ಕೊನೆಯ ಅಸ್ತ್ರವಾಗಿ ಲಾಕ್ಡೌನ್ ಬಳಕೆ ಮಾಡಿ. ಮೈಕ್ರೋಕಂಟೈನ್ಮೆಂಟ್ ಮೂಲಕ ಕೊರೊನಾ ನಿಯಂತ್ರಿಸಬಹುದು.
Advertisement
ಕೊರೊನಾ ವಿರುದ್ಧ ದೇಶ ಇಂದು ಮತ್ತೊಂದು ದೊಡ್ಡ ಹೋರಾಟ ನಡೆಸುತ್ತಿದೆ. ಸುನಾಮಿಯಂತೆ ಎರಡನೇ ಅಲೆ ದೇಶದಲ್ಲಿ ವ್ಯಾಪಿಸಿದೆ. ಕಳೆದ ಕೆಲ ದಿನಗಳಿಂದ ಸೋಂಕಿನಿಂದ ಮೃತರಾದ ಕುಟುಂಬಕ್ಕೆ ಪ್ರಧಾನಿಗಳು ಸಂತಾಪ ಸೂಚಿಸಿದರು. ಇಂದು ಆ ಎಲ್ಲ ಕುಟುಂಬಗಳ ಜೊತೆ ಓರ್ವ ಕುಟುಂಬಸ್ಥನಾಗಿ ಜೊತೆಯಲ್ಲಿದ್ದೇನೆ ಎಂದು ಧೈರ್ಯ ತುಂಬಿದರು.
Advertisement
I request State governments to urge the workers to stay where they are. This trust given by the states to the workers will help them, and that they will be vaccinated in the city where they are: PM Modi pic.twitter.com/zBmDbfTZa9
— ANI (@ANI) April 20, 2021
Advertisement
ಮೊದಲ ಅಲೆಯಲ್ಲಿ ಎಲ್ಲ ಕೊರೊನಾ ವಾರಿಯರ್ ಗಳು ತಮ್ಮ ಜೀವನವನ್ನ ಪಣಕ್ಕಿಟ್ಟು ಸೇವೆ ಸಲ್ಲಿಸಿರೋದನ್ನ ನಾವು ಮರೆತಿಲ್ಲ. ಇಂದು ಮತ್ತೆ ಅದೇ ರೀತಿ ಎಲ್ಲ ವಾರಿಯರ್ ಗಳು ಕುಟುಂಬದಿಂದ ದೂರವಾಗಿ ದೇಶಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಇಂದು ಮಾಹಾಮಾರಿ ತಡೆಗಾಗಿ ದೇಶ ಹಗಲಿರುಳು ಕಾರ್ಯನಿರ್ವಹಿಸುತ್ತಿದೆ. ಆದ್ರೆ ಈ ಬಾರಿ ಆಕ್ಸಿಜನ್ ಬೇಡಿಕೆ ಹೆಚ್ಚಾಗಿದ್ದು, ಸರ್ಕಾರ ಈ ಕುರಿತು ಕೆಲಸ ಮಾಡುತ್ತಿದೆ. ಅವಶ್ಯಕತೆ ಇರೋರಿಗೆ ಆಕ್ಸಿಜನ್ ಪೂರೈಸುವ ಕೆಲಸವನ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶದಲ್ಲಿ ಔಷಧಿ ಉತ್ಪದನಾ ಹೆಚ್ಚಿಸಲಾಗುತ್ತಿದೆ. ದೇಶದ ಬೃಹತ್ ಔಷದೋತ್ಪನ್ನ ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇವೆ. ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಔಷಧಿಯನ್ನು ಭಾರತದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
Advertisement
India with two 'made in India' vaccines started the world's largest vaccination program. Till now, more than 12 crore vaccine doses have been administered. From 1st May, those above the age of 18 years can be vaccinated: PM Modi pic.twitter.com/qZ6oCddjth
— ANI (@ANI) April 20, 2021
ದೊಡ್ಡ ಕೋವಿಡ್ ಆಸ್ಪತ್ರೆಗಳ ನಿರ್ಮಾಣ ಮಾಡಲಾಗುತ್ತಿದೆ. ಆಯಾ ರಾಜ್ಯಗಳು ಅವಶ್ಯಕತೆ ಅನುಗುಣವಾಗಿ ಬೆಡ್ ಗಳಿಗಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನ ನಿರ್ಮಿಸುತ್ತಿವೆ. ವಿಶ್ವದ ಕಡಿಮೆ ಬೆಲೆಯ ಎರಡು ಔಷಧಿಗಳು ನಮ್ಮ ಬಳಿಯಲ್ಲಿದ್ದು, ಯಾವುದೇ ಕಾರಣಕ್ಕೂ ಎದೆಗುಂದಬೇಡಿ. ಮೇ 1ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ. ಪ್ರತಿಯೊಬ್ಬರಿಗೂ ಲಸಿಕೆ ನೀಡುವ ಅಭಿಯಾನ ಕೈಗೊಂಡಿದ್ದೇವೆ ಎಂದರು.
Addressing the nation on the COVID-19 situation. https://t.co/rmIUo0gkbm
— Narendra Modi (@narendramodi) April 20, 2021
ಜೀವ ಉಳಿಸೋದು ನಮ್ಮೆಲ್ಲರ ಮೊದಲ ಆದ್ಯತೆ. ಇದರ ಜೊತೆಗೆ ಆರ್ಥಿಕ ಪರಿಸ್ಥಿತಿ ಬಗ್ಗೆಯೂ ಯೋಚಿಸಬೇಕಿದೆ. ಕಳೆದ ವರ್ಷ ಮತ್ತು ಇಂದಿನ ಸ್ಥಿತಿಗೂ ತುಂಬಾ ವ್ಯತ್ಯಾಸ ಇದೆ. ಕಳೆದ ಬಾರಿ ಯಾವುದೇ ಸೌಲಭ್ಯ, ತರಬೇತಿ ಮತ್ತು ಮಾಹಿತಿ ಇಲ್ಲದಿದ್ದರೂ ಕೊರೊನಾ ವಿರುದ್ಧ ಹೋರಾಡಿದ್ದೇವೆ. ಇಂದು ನಮ್ಮ ಬಳಿ ಪಿಪಿಇ ಕಿಟ್, ಲ್ಯಾಬ್, ವ್ಯಾಕ್ಸಿನ್, ಚಿಕಿತ್ಸೆ ವಿಧಾನ ಎಲ್ಲವೂ ತಿಳಿದಿದೆ. ಹಾಗಾಗಿ ಕೊರೊನಾ ಕಾಲದಲ್ಲಿಯೂ ನಾವು ಇಲ್ಲಿಯವರೆಗೂ ಬಂದಿದ್ದೇವೆ. ಇದಕ್ಕೆಲ್ಲ ನೀವು ಕಾರಣ. ಇಂದು ನಿಮ್ಮೆಲ್ಲರ ಸಹಕಾರದೊಂದಿಗೆ ಕೊರೊನಾ 2ನೇ ಅಲೆಯ ವಿರುದ್ಧ ಗೆಲ್ಲಲ್ಲಿದ್ದೇವೆ.
We are facing the second wave of COVID19 now. I understand the pain you are going through and express my sympathies to the families who have lost their loved ones due to COVID: PM Modi pic.twitter.com/D2uya5QWJb
— ANI (@ANI) April 20, 2021