ಹುಬ್ಬಳ್ಳಿ: ಕೋವಿಡ್ 19 ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ದಿನಾಂಕ ಮುಂದೂಡಿದಕ್ಕೆ ಯುವಕನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ದೇವಾಂಗಪೇಟೆ ನಿವಾಸಿಯಾಗಿರುವ 30 ವರ್ಷದ ಶರಣಪ್ಪ ಹಡಪದ ನಗರದ ಸಂತೋಷ ನಗರದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆ ನಿಶ್ಚಿತಾರ್ಥ ನೇರವೇರಿದ್ದರೂ ಮದುಗೆ ದಿನಾಂಕ ನಿಗದಿಯಾಗಿರಲಿಲ್ಲ.
Advertisement
ಕೋವಿಡ್ 19 ಲಾಕ್ ಡೌನ್ ಘೋಷಣೆಯಾದ ನಂತರ ಮದುವೆ ದಿನಾಂಕ ನಿಗದಿ ಮಾಡದೇ ಮದುವೆ ಮುಂದೂಡಿದ್ದಕ್ಕೆ ಮನನೊಂದಿದ್ದ. ಈ ವಿಚಾರವನ್ನು ತನ್ನ ಆಪ್ತರ ಜೊತೆ ಹೇಳಿಕೊಂಡಿದ್ದ.
Advertisement
ಪ್ರಕರಣ ಬೆಳಕಿಗೆ ಬಂದ ನಂತ ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹ ಹೊರಗೆ ತೆಗೆದಿದ್ದಾರೆ. ಘಟನೆಯ ಕುರಿತು ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.