ನವದೆಹಲಿ: ಕೊರೊನಾ ಲಾಕ್ಡೌನ್ನಲ್ಲೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಿಂದ ಕೋಟಿ ಕೋಟಿ ಹಣ ಗಳಿಸಿದ್ದಾರೆ.
ಲಾಕ್ಡೌನ್ ಕೆಲವು ಆಟಗಾರರ ಮೇಲೆ ಯಾವುದೇ ಆರ್ಥಿಕ ಪರಿಣಾಮ ಬೀರಿಲ್ಲ. ಇಂತಹ ಪರಿಸ್ಥಿತಿಯಲ್ಲೂ ಪೋರ್ಚುಗಲ್ನ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಇನ್ಸ್ಟಾಗ್ರಾಮ್ನಿಂದ ಸುಮಾರು 18 ಕೋಟಿ ರೂ. ಗಳಿಸಿದ್ದಾರೆ. ಈ ಮೂಲಕ ಇನ್ಸ್ಟಾದಿಂದ ಹೆಚ್ಚು ಹಣಗಳಿಸಿದವರ ಪಟ್ಟಿಯಲ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರನೇ ಸ್ಥಾನದಲ್ಲಿದ್ದು, ಅವರು ಮೂರು ಪ್ರಾಯೋಜಿತ ಪೋಸ್ಟ್ ಗಳಿಂದ ಒಟ್ಟು 3.6 ಕೋಟಿ ರೂ. ಗಳಿಸಿದ್ದಾರೆ. ಇದನ್ನೂ ಓದಿ: ಫೋರ್ಬ್ಸ್ ಪಟ್ಟಿಯ ಟಾಪ್ 100ರಲ್ಲಿ ವಿರಾಟ್ ಏಕೈಕ ಕ್ರಿಕೆಟರ್
Advertisement
Advertisement
ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ 6.2 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ದೇಶದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಟಾರ್ ಆಟಗಾರ ಎಂಬ ಕೀರ್ತಿ ಅವರಿಗಿದೆ. ಇನ್ಸ್ಟಾದಿಂದ ಅತಿ ಹೆಚ್ಚು ಹಣ ಗಳಿಸಿದ ಟಾಪ್ 10 ಆಟಗಾರರ ಪಟ್ಟಿಯಲ್ಲಿ ವಿರಾಟ್ ಏಕೈಕ ಭಾರತೀಯರಾಗಿದ್ದಾರೆ.
Advertisement
ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರೊನಾಲ್ಡೊ ಸುಮಾರು 17.9 ಕೋಟಿ ರೂ. ಗಳಿಸಿದ್ದಾರೆ. ರೊನಾಲ್ಡೊ ಅವರಿಗೆ ಇನ್ಸ್ಟಾದಲ್ಲಿ 22.2 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇನ್ಸ್ಟಾದಿಂದ ಗಳಿಕೆಯ ವಿಷಯದಲ್ಲಿ ಅರ್ಜೆಂಟೇನಾ ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ಸುಮಾರು 12.3 ಕೋಟಿ ರೂ. ಗಳಿಸಿದ್ದಾರೆ. ಬ್ರೆಜಿಲ್ ಫುಟ್ಬಾಲ್ ಆಟಗಾರ ನೇಮಾರ್ ಮೂರನೇ ಸ್ಥಾನದಲ್ಲಿದ್ದು, ಅವರು 11.4 ಕೋಟಿ ರೂ. ಪಡೆದಿದ್ದಾರೆ.