ಹುಬ್ಬಳ್ಳಿ: ಪುರಾತನ ಕಾಲದ ಮೂರ್ತಿಯಂದು ನಂಬಿಸಿ ಲಕ್ಷ್ಮಿ ವಿಗ್ರಹವನ್ನ ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದ ತಂಡವನ್ನ ಬಂಧನ ಮಾಡುವಲ್ಲಿ ನವನಗರ ಎಪಿಎಂಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿಯ ಬೈರಿದೇವರಕೊಪ್ಪದ ಬಳಿ ಕಾರಿನಲ್ಲಿ ಪುರಾತನದೆಂದು ಹೇಳಲಾದ ಲಕ್ಷ್ಮೀ ವಿಗ್ರಹವನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಬಾಗಲಕೋಟೆ, ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಯ ಆರು ಜನರನ್ನ ಬಂಧನ ಮಾಡಲಾಗಿದೆ.
Advertisement
Advertisement
ವಿಜಯಪುರ ಮುಬಾರಕ ಚೌಕ ನಿವಾಸಿ ಹುಸೇನಸಾಬ್ ಮಳ್ಳಿ, ವಿಜಯಪುರ ಬಬಲೇಶ್ವರ ನಾಕಾದ ಬಾಬು ಜಾಧವ್, ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕಿನ ಸಸಾಲಟ್ಟಿ ಗ್ರಾಮದ ಲಕ್ಷ್ಮಣ್ ಹಾದಿಮನಿ, ಬೆಳಗಾವಿಯ ಬಸವರಾಜ್ ಮುತಗೇಕರ, ವಿಜಯಪುರ ಆಳಂದದ ಜಳಕಿ ಗ್ರಾಮದ ರಾಜು ಶಿಂಧೆ ಹಾಗೂ ವಿಜಯಪುರ ಝಂಡಾಕಟ್ಟಿಯ ಇರ್ಫಾನ ನಬಿವಾಲೆ ಬಂಧಿತ ಆರೋಪಿಗಳು.
Advertisement
ಬಂಧಿತರಿಂದ ಎರಡು ಕಾರು ಹಾಗೂ ಪುರಾತನದೆಂದು ಹೇಳಲಾದ ವಿಗ್ರಹವನ್ನ ವಶಕ್ಕೆ ಪಡೆಯಲಾಗಿದೆ. ಎಪಿಎಂಸಿ ಠಾಣೆಯ ಇನ್ಸ್ಪೆಕ್ಟರ್ ಪ್ರಭು ಸೂರಿನ್ ಜೊತೆಗೆ ಪಿಎಸೈ ಎಸ್.ಎಸ್.ಜಕ್ಕನಗೌಡರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ.
Advertisement