ಬೆಂಗಳೂರು: 4 ವರ್ಷ ಮೇಲ್ಪಟ್ಟ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ. ಇಲ್ಲದಿದ್ರೆ ದಂಡದ ಜೊತೆ ಡಿಎಲ್ ಸಸ್ಪೆಂಡ್ ಮಾಡುವ ಆದೇಶ ಹೊರಡಿಸಿದ್ದ ಸಾರಿಗೆ ಇಲಾಖೆ ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ರ‍್ಯಾಶ್ ಡ್ರೈವಿಂಗ್ ಮಾಡುವವರಿಗೆ ಭಾರೀ ದಂಡದ ಜೊತೆ ಜೈಲು ಶಿಕ್ಷೆ ವಿಧಿಸುವ ಸಂಬಂಧ ಆದೇಶ ಹೊರಡಿಸಿದೆ.
ವೀಲಿಂಗ್, ಸೈಲೆನ್ಸರ್ ಅಲ್ಟ್ರೇಷನ್, ಅಡ್ಡಾದಿಡ್ಡಿ ಚಾಲನೆ, ಅಪಾಯಕಾರಿ ಚಾಲನೆ ಮಾಡಿದರೆ ಅಪರಾಧ ದಂಡ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 107ರ ಆಡಿ ಕೇಸ್ ದಾಖಲಿಸಲಾಗುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘನೆ ಮಾಡಿದರೆ 50 ಸಾವಿರದಿಂದ 2 ಲಕ್ಷ ಮೊತ್ತದ ಬಾಂಡ್ ಬರೆದು ಕೊಡಬೇಕಾಗುತ್ತದೆ. ಆರು ತಿಂಗಳ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದರೆ ಈ ಮೊತ್ತ ಭರಿಸಬೇಕು. ಜೊತೆಗೆ ಜೈಲು ಸೇರಬೇಕಾಗುತ್ತದೆ. ಇದನ್ನೂ ಓದಿ: ಬೆಂಗಳೂರಲ್ಲಿ ದಂಡ ದಂಡ – ಪೊಲೀಸ್ , ಮಾರ್ಷಲ್ ಆಯ್ತು ಈಗ ಆರ್‌ಟಿಒ ಸರದಿ
Advertisement
Advertisement
ಸಿಆರ್‌ಪಿಸಿ 107ರ ಆಡಿ ಕೇಸ್ ದಾಖಲು ಮಾಡಿದರೆ ಪಾಸ್ ಪೋರ್ಟ್ ಕ್ಲಿಯರ್ ಆಗುವುದಿಲ್ಲ. ವಿದ್ಯಾಭ್ಯಾಸ, ವಿದೇಶಿ ಪ್ರಯಾಣಕ್ಕೆ ಕುತ್ತು ಬರಲಿದೆ. ಕಳೆದು ಒಂದು ವಾರದಲ್ಲಿ 14 ಮಂದಿ ವಾಹನ ಸವಾರರ ಮೇಲೆ ಸಿಆರ್‌ಪಿಸಿ 107ರ ಅಡಿ ಕೇಸ್ ದಾಖಲಾಗಿದೆ.