– ಭಾರತ ಮೂಲದ ವರದಿಗಾರ್ತಿ
ಆಲ್ಬನಿ: ಅಮೆರಿಕದ ಪ್ರಖ್ಯಾತ ಟಿವಿಯಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಭಾರತ ಮೂಲದ ಯುವತಿ ನ್ಯೂಯಾರ್ಕ್‌ನಲ್ಲಿ ಮೃತಪಟ್ಟಿದ್ದಾರೆ.
ನೀನಾ ಕಪೂರ್ (26) ಮೃತ ವರದಿಗಾರ್ತಿ. ನೀನಾ ಕಪೂರ್ ಅಮೆರಿಕದ ಸಿಬಿಎಸ್ ಚಾನೆಲ್‍ನಲ್ಲಿ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ ಬಾಡಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತವಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ನೀನಾ ಕಪೂರ್ ಶೇರಿಂಗ್ ಆಧಾರದ ಮೇರೆಗೆ ಸ್ಕೂಟರ್ ಅನ್ನು ಬಾಡಿಗೆ ತೆಗೆದುಕೊಂಡಿದ್ದರು. ಬೇರೊಬ್ಬ ವ್ಯಕ್ತಿ ಸ್ಕೂಟರ್ ಓಡಿಸುತ್ತಿದ್ದನು. ಸ್ಕೂಟರ್ ಹಿಂದೆ ನೀನಾ ಕಪೂರ್ ಕುಳಿತಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿದೆ. ತಕ್ಷಣ ಗಾಯಗೊಂಡಿದ್ದ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ನೀನಾ ಕಪೂರ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಸ್ಕೂಟರ್ ಚಾಲನೆ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನ್ಯೂಯಾರ್ಕ್‌ನ ಬ್ರೂಕ್ಲಿನ್ ಪ್ರಾಂತ್ಯದ ಬಳಿ ಅಪಘಾತ ಸಂಭವಿಸಿದೆ. ಇಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಹೀಗಾಗಿ ತಲೆಗೆ ತೀವ್ರವಾಗಿ ಪೆಟ್ಟಾಗಿ ನೀನಾ ಕಪೂರ್ ಮೃತಪಟ್ಟಿದ್ದಾರೆ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿದಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಪೆನ್ಸಿಲ್ವೇನಿಯಾದ ನ್ಯೂಟೌನ್ ನಿವಾಸಿಯಾಗಿದ್ದ ನೀನಾ ಕಪೂರ್ ತಾಯಿ ಮೋನಿಕಾ, ತಂದೆ ಅನುಪ್ ಮತ್ತು ಸಹೋದರ ಅಜಯ್ ವಾಸಿಸುತ್ತಿದ್ದರು. ವರದಿಗಾರ್ತಿ ನೀನಾ ಕಪೂರ್ 2019 ಜೂನ್‍ನಲ್ಲಿ ಸಿಬಿಎಸ್ ಚಾನೆಲ್‍ಗೆ ಸೇರಿಕೊಂಡಿದ್ದರು. ಅದಕ್ಕೂ ಮೊದಲು ಚಾನೆಲ್ ನ್ಯೂಸ್ 12ರಲ್ಲಿ ಕೆಲಸ ಮಾಡುತ್ತಿದ್ದರು.
ನೀನಾ ಕಪೂರ್ ಸದಾ ನಗುತ್ತಲೇ ಸ್ಟೋರಿಗಳನ್ನು ವರದಿ ಮಾಡುತ್ತಿದ್ದಳು. ಎಲ್ಲರೊಟ್ಟಿಗೆ ಖುಷಿಯಿಂದ ಕೆಲಸ ಮಾಡುತ್ತಿದ್ದಳು. ನೀನಾ ಕಪೂರ್ ಹೆಚ್ಚಾಗಿ ರೋಚಕ ಸ್ಟೋರಿಗಳನ್ನು ಮಾಡುತ್ತಿದ್ದಳು. ಆದರೆ ಅವಳ ಅಗಲಿಕೆಯಿಂದ ನಮಗೆ ತುಂಬಾ ನೋವಾಗಿದೆ ಎಂದು ಸಹೋದ್ಯೋಗಿಗಳು ನೀನಾ ಬಗ್ಗೆ ಹೇಳಿದ್ದಾರೆ.
We are heartbroken over the loss of our colleague and friend, Nina Kapur. Nina passed away over the weekend. She was known for her contagious smile and love for storytelling. Our thoughts are with Nina's family. https://t.co/RmJFTmRdyk pic.twitter.com/MnO2XlZxVy
— CBS New York (@CBSNewYork) July 20, 2020