ಬೆಂಗಳೂರು: ಕೊರೊನಾ ರೋಗ ಲಕ್ಷಣ ಇಲ್ಲದವವರಿಗೆ ಹೋಮ್ ಐಸೋಲೇಷನ್ ಮಾಡಲು ಸರ್ಕಾರ ನಿರ್ಧರಿಸಿದ್ದು, ಇಂದು ಅಧಿಕೃತ ಆದೇಶವನ್ನು ಹೊರಡಿಸಿದೆ.
ಮೊದಲು ಕೋವಿಡ್ ಟೆಸ್ಟ್ ಮಾಡಿಸಿ ರೋಗಿ ಹೋಮ್ ಐಸೋಲೇಷನ್ ಗೆ ಅರ್ಹನಾ ಎಂಬುದನ್ನು ಆರೋಗ್ಯ ಇಲಾಖೆ ತಂಡ ಮತ್ತು ವೈದ್ಯಾಧಿಕಾರಿಗಳು ನಿರ್ಧರಿಸುತ್ತಾರೆ. ಹೋಮ್ ಐಸೋಲೇಷನ್ ಗೆ ಅರ್ಹರಲ್ಲದ ರೋಗಿಗಳನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತದೆ. ಮನೆಯಲ್ಲಿ ಪ್ರತ್ಯೇಕ ಕೊಠಡಿ, ಶೌಚಾಲಯಗಳು ಇದ್ದರೆ ಹೋಮ್ ಐಸೋಲೇಶನ್ ಗೆ ಹಸಿರು ನಿಶಾನೆ ಸಿಗಲಿದೆ. ರೋಗಿಯ ಮನೆಯಲ್ಲಿ ಅಗತ್ಯ ಸೌಲಭ್ಯ ಇಲ್ಲದಿದ್ದರೆ ಕೋವಿಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡುತ್ತಾರೆ.
Advertisement
Advertisement
ಹೋಮ್ ಐಸೋಲೇಷನ್ಗೆ ಒಳಪಡುವ ರೋಗಿ ಕಡ್ಡಾಯವಾಗಿ ಪ್ರೋಟೋಕಾಲ್ ಕಡ್ಡಾಯವಾಗಿ ಪಾಲನೆ ಮಾಡಬೇಕು. ಇನ್ನು ಸೋಂಕಿತನ ಮನೆಯಲ್ಲಿ ಅಗತ್ಯ ಸೌಲಭ್ಯಗಳಿವೆಯಾ ಎಂಬುದನ್ನು ಆರೋಗ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಒಪ್ಪಿಗೆ ನೀಡಿದ ಬಳಿಕವೇ ಹೋಮ್ ಐಸೋಲೇಷನ್ ಗೆ ಅನುಮತಿ ಸಿಗಲಿದೆ. ಹೋಮ್ ಐಸೋಲೇಷನ್ ಗೆ ಒಳಗಾದವರು ಪ್ರತಿದಿನ ಸಂಬಂಧಪಟ್ಟ ವೈದ್ಯರಿಗೆ ವರದಿ ನೀಡಬೇಕು. ಈ ಬಗ್ಗೆ ಕುಟುಂಬದವರಿಗೆ, ಅಕ್ಕಪಕ್ಕದ ಮನೆಯವರಿಗೆ, ಸಂಬಂಧಿಕರಿಗೆ ಮಾಹಿತಿ ನೀಡಬೇಕು.
Advertisement
Advertisement
ಹೋಮ್ ಐಸೋಲೇಷನ್ ಗೆ ಒಳಗಾದವರು ಗ್ಲೌಸ್, ಸ್ಯಾನಿಟೈಸರ್, ಅಕ್ಸಿ ಮೀಟರ್, ಥರ್ಮಲ್ ಮೀಟರ್ ಬಳಸಬೇಕು. ಪ್ರೋಟೋಕಾಲ್ ಅನ್ವಯ ಚಿಕಿತ್ಸಾ ಅವಧಿ ಮುಗಿದ ಬಳಿಕ ಬಿಡುಗಡೆ ಮಾಡಲಾಗುತ್ತದೆ.